Afghanistan: Talibanಯಿಂದ ನಟಿ, ನಿರೂಪಕಿಯರಿಗೆ ಹೊಸ 'ಧಾರ್ಮಿಕ' ಮಾರ್ಗಸೂಚಿ!

By Kannadaprabha News  |  First Published Nov 23, 2021, 1:05 PM IST

*ತಾಲಿಬಾನ್‌ನಿಂದ ಮಹಿಳೆಯರಿಗೆ ಹೊಸ ಮಾರ್ಗಸೂಚಿ
*ನಿರೂಪಣೆ ಮಾಡುವ ಮಹಿಳೆಯರಿಗೆ ಹಿಜಾಬ್‌ ಕಡ್ಡಾಯ
*ಮಹಿಳೆಯರು ನಟಿಸಿರುವ ನಾಟಕ ಪ್ರಸಾರ ಬಂದ್‌
*ಧಾರ್ಮಿಕ ನಾಯಕರ ಕುರಿತು ಪ್ರಸಾರ ರದ್ದು


ಕಾಬೂಲ್‌(ನ23): ಅಫ್ಘಾನಿಸ್ತಾನದಲ್ಲಿ(Afghanistan) ಆಳ್ವಿಕೆ ನಡೆಸುತ್ತಿರುವ ತಾಲಿಬಾನ್‌ (Taliban) ಸರ್ಕಾರ ಮಹಿಳೆಯರ (Women) ಕುರಿತಾಗಿ ಹೊಸ ಧಾರ್ಮಿಕ ಮಾರ್ಗಸೂಚಿಗಳನ್ನು (Religious Guideline) ಹೊರಡಿಸಿದೆ. ಟೀವಿಗಳಲ್ಲಿ ನಿರೂಪಣೆ ಮಾಡುವ ಮಹಿಳೆಯರು (Anchors) ಕಡ್ಡಾಯವಾಗಿ ಹಿಜಾಬ್‌ (Hijab) ಧರಿಸಬೇಕು ಹಾಗೂ ಮಹಿಳೆಯರು ನಟಿಸಿರುವ ನಾಟಕಗಳನ್ನು (Drama) ಪ್ರಸಾರ ಮಾಡಬಾರದು ಎಂದು ಆದೇಶಿಸಲಾಗಿದೆ. ಜೊತೆಗೆ ಪ್ರವಾದಿ ಮಹಮ್ಮದ್‌ (Prophet Muhammad) ಹಾಗೂ ಇತರ ಧಾರ್ಮಿಕ ನಾಯಕರನ್ನು ಕುರಿತಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ. ಇಸ್ಲಾಂ (Islam) ಮತ್ತು ಆಫ್ಘನ್‌ನ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಶಾಲಾ ಕಾಲೇಜುಗಳಿಗೆ ಹೋಗಲು ಬಯಸುವ ಮಹಿಳೆಯರು ಬುರ್ಖಾ (Burqa) ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ತಾಲಿಬಾನ್‌ ಹೊರಡಿಸಿತ್ತು. ಪತ್ರಿಕಾ ಸ್ವಾತಂತ್ರ್ಯದ (Press Freedom) ಕುರಿತು ಮಾತನಾಡಿದ ಹಲವು ಪತ್ರಕರ್ತೆಯರ ಮೇಲೆ ದಾಳಿ ಮಾಡಲಾಗಿತ್ತು.

ಇವು ನಿಯಮಗಳಲ್ಲ ಆದರೆ ಧಾರ್ಮಿಕ ಮಾರ್ಗಸೂಚಿ!

Tap to resize

Latest Videos

undefined

'ಇವು ನಿಯಮಗಳಲ್ಲ ಆದರೆ ಧಾರ್ಮಿಕ ಮಾರ್ಗಸೂಚಿ' ಎಂದು ಸಚಿವಾಲಯದ ವಕ್ತಾರ ಹಕೀಫ್ ಮೊಹಾಜಿರ್ (Hakif Mohajir) ಎಎಫ್‌ಪಿಗೆ (AFA) ತಿಳಿಸಿದ್ದಾರೆ. 2001 ರಲ್ಲಿ ತಾಲಿಬಾನ್ ಆಡಳಿತ ಅಂತ್ಯಗೊಂಡ ಕೂಡಲೇ ಪಾಶ್ಚಿಮಾತ್ಯ ನೆರವಿನಿಂದ (Western Support) ಮತ್ತು ಖಾಸಗಿ ಹೂಡಿಕೆಯೊಂದಿಗೆ ಡಜನ್‌ಗಟ್ಟಲೆ ದೂರದರ್ಶನ ಚಾನೆಲ್‌ಗಳು (Doordarshan Chanels) ಮತ್ತು ರೇಡಿಯೋ (Radio) ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

ವಾಯ್ಸ್ ಆಫ್ ಷರಿಯಾ ರೇಡಿಯೋಗೆ ಅವಕಾಶ ನೀಡಿದ್ದ ತಾಲಿಬಾನ್!

ಕಳೆದ 20 ವರ್ಷಗಳಲ್ಲಿ, ಆಫ್ಘನ್ ಟೆಲಿವಿಷನ್ ಚಾನೆಲ್‌ಗಳು ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳನ್ನು ನೀಡಿವೆ ''ಅಮೆರಿಕನ್ ಐಡಲ್ (American idol)" ಶೈಲಿಯ ಗಾಯನ ಸ್ಪರ್ಧೆಯಿಂದ ಸಂಗೀತ ವೀಡಿಯೊಗಳವರೆಗೆ, ಹಲವಾರು ಟರ್ಕಿಶ್ ಮತ್ತು ಭಾರತೀಯ ಕಾರ್ಯಕ್ರಮಗಳೊಂದಿಗೆ ಚಾನೆಲ್‌ಗಳು ಪ್ರಸಿದ್ಧಿ ಪಡೆದಿದ್ದವು.ತಾಲಿಬಾನಿಗಳು ಹಿಂದೆ 1996 ರಿಂದ 2001 ರವರೆಗೆ ಆಳ್ವಿಕೆ ನಡೆಸಿದಾಗ, ಮಾತನಾಡಲು ಯಾವುದೇ ಅಫಘಾನ್ ಮಾಧ್ಯಮ ಇರಲಿಲ್ಲ. ಅವರು ದೂರದರ್ಶನ, ಚಲನಚಿತ್ರಗಳು ಮತ್ತು ಇತರ ರೀತಿಯ ಮನರಂಜನೆಯನ್ನು ನಿಷೇಧಿಸಿದ್ದರು, ಅದನ್ನು ಅನೈತಿಕವೆಂದು ಪರಿಗಣಿಸಿದ್ದರು.

Cryptocurrency : ಇಸ್ಲಾಂನಲ್ಲಿ Bitcoin ವ್ಯವಹಾರ ನಿಷಿದ್ಧ?

ದೂರದರ್ಶನವನ್ನು ವೀಕ್ಷಿಸುತ್ತಿರುವಾಗ ಸಿಕ್ಕಿಬಿದ್ದ ಜನರು ತಮ್ಮ ಸೆಟ್ ಅನ್ನು ಒಡೆದುಹಾಕುವುದು ಸೇರಿದಂತೆ ಶಿಕ್ಷೆಯನ್ನು ಎದುರಿಸಿದ್ದರು. ವೀಡಿಯೊ ಪ್ಲೇಯರ್‌ನ (Video player) ಬಳಕೆ ಕೂಡ ಅಪರಾಧಕ್ಕೆ ಕಾರಣವಾಗುತಿತ್ತು. ಪ್ರಚಾರಕ್ಕಾಗಿ ಮತ್ತು ಇಸ್ಲಾಮಿಕ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಒಂದು ರೇಡಿಯೋ ಸ್ಟೇಷನ್ ವಾಯ್ಸ್ ಆಫ್ ಷರಿಯಾ (Voice of Sharia) ಮಾತ್ರ  ಆಗ ಕಾರ್ಯನಿರ್ವಹಿಸುತಿತ್ತು.

NSA Level Meeting ಆಫ್ಘನ್‌ನ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲಿ : ತಾಲಿಬಾನ್‌!

ಅಫ್ಘಾನಿಸ್ತಾನದಲ್ಲಿ (Afghanistan) ಎದ್ದಿರುವ ಬಿಕ್ಕಟ್ಟು, ಭದ್ರತಾ ಸವಾಲು ಪರಿಹರಿಸಲು ಭಾರತ ಬುಧವಾರ ಮಹತ್ವದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ(NSA level meeting ) ಆಯೋಜಿಸಿತ್ತು. ಜಾಗತಿಕ ಭಯೋತ್ಪಾದನೆಗೆ (Terrorism) ಅಫ್ಘಾನಿಸ್ತಾನವು ನೆಲೆ ಆಗ ಕೂಡದು ಎಂದು ಭಾರತ ಸೇರಿ ಎಂಟು ರಾಷ್ಟ್ರಗಳು ಒಮ್ಮತದ ನಿರ್ಣಯ ತೆಗೆದುಕೊಂಡಿವೆ. ಅಫ್ಘಾನಿಸ್ತಾನ ಬಿಕ್ಕಟ್ಟು ಕುರಿತು ದೆಹಲಿಯಲ್ಲಿ (Delhi) ಭಾರತದ ನೇತೃತ್ವದಲ್ಲಿ ರಷ್ಯಾ, ಇರಾನ್‌ ಸೇರಿ ಎಂಟು ರಾಷ್ಟ್ರಗಳು ಒಗ್ಗೂಡಿ ನಡೆಸಿದ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಒಕ್ಕೊರಲ ದ್ವನಿ ಕೇಳಿ ಬಂದಿದೆ.

ಮುಸಲ್ಮಾನರ ಪಾಲಿಗೆ 'ಆಧುನಿಕತೆ'ಯನ್ನು ಕೆಟ್ಟ ಪದವನ್ನಾಗಿಸಿದ ಕವಿ ಮೊಹಮ್ಮದ್ ಇಕ್ಬಾಲ್!

ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಕುರಿತು ನವದೆಹಲಿಯಲ್ಲಿ ನಡೆದ ಎನ್ಎಸ್ಎ ಮಟ್ಟದ ಈ ಸಭೆಗೆ ತಾಲಿಬಾನ್ (Taliban) ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು. ಈ ಸಂವಾದವು ಈ ಪ್ರದೇಶದಲ್ಲಿ  (Peace and Stability) ಕೊಡುಗೆ ನೀಡುತ್ತದೆ ಎಂದು ಭಾವಿಸುತ್ತೇವೆ ಎಂದು ಹೇಳಿದೆ. ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ (Suhel Shaheen) "ಈ ಭೇಟಿಯನ್ನು ಸಕಾರಾತ್ಮಕ ಬೆಳವಣಿಗೆಯಾಗಿ ನೋಡಿದ್ದೇನೆ ಮತ್ತು ಇದು ಅಫ್ಘಾನಿಸ್ತಾನದ "ಶಾಂತಿ ಮತ್ತು ಸ್ಥಿರತೆಗೆ" ಕೊಡುಗೆ ನೀಡುತ್ತದೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

click me!