
ಲಂಡನ್(ಜು.04) ಬರೊಬ್ಬರಿ 500 ವರ್ಷಗಳ ಹಿಂದೆ ಚಿತ್ರಿಸಿದ್ದ ಪೈಂಟಿಂಗ್ ಕಳುವಾಗಿತ್ತು. ಇದೀಗ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಈ ಪೈಂಟಿಂಗ್ 18 ಕೋಟಿ ರೂಪಾಯಿ ಮೊತ್ತಕ್ಕೆ ಹರಾಜಾದ ಘಟನೆ ಲಂಡನ್‌ನಲ್ಲಿ ನಡದಿದೆ. 1510ರಲ್ಲಿ ಈ ಚಿತ್ರವನ್ನು ಬರೆಯಲಾಗಿತ್ತು. ಬಳಿಕ ಹಲವು ರಾಜ ಮನೆತನಗಳ ಗೋಡೆಗಳಲ್ಲಿ ಈ ಚಿತ್ರ ಸೇರಿಕೊಂಡಿತ್ತು. 1995ರಲ್ಲಿ ಈ ಚಿತ್ರ ವಿಲ್ಟ್‌ಶೈರ್‌ನ ಲಾಂಗ್ಲೀಟ್ ಹೌಸ್‌ನಿಂದ ಈ ಚಿತ್ರ ಕಳುವಾಗಿತ್ತು. ಬಳಿಕ ಈ ಚಿತ್ರ ಪತ್ತೆಯಾಗಿರಲಿಲ್ಲ. ಇದೀಗ ಸಂಶೋಧಕರು ಹುಡುಕಿ ಈ ಚಿತ್ರ ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಲ್ಲೇ ಪೈಂಟಿಂಗ್ 18 ಕೋಟಿ ರೂಪಾಯಿಗೆ ಹರಾಜಾಗಿದೆ.
1995ರಲ್ಲಿ ಮೊದಲ ಬಾರಿಗೆ ಈ ಚಿತ್ರ ಕಳುವಾಗಿತ್ತು. ಬಳಿಕ 7 ವರ್ಷಗಳ ಬಳಿಕ ಚಾರ್ಲ್ಸ್ ಹಿಲ್‌ನಲ್ಲಿ ಈ ಪೈಂಟಿಂಗ್ ಪತ್ತೆಯಾಗಿತ್ತು. ಬಳಿಕ ಮತ್ತೆ ಈ ಪೈಂಟಿಂಗ್ ಕಳುವಾಗಿತ್ತು. ಮತ್ತೆಂದು ಪತ್ತೆಯಾಗಿರಲಿಲ್ಲ. ಇದೀಗ ಸಂಶೋಧಕರು ಲಂಡನ್‌ನಿಂದ ಈ ಪೈಂಟಿಂಗ್ ಹುಡುಕಿ ತಂದಿದ್ದಾರೆ. ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಈ ಚಿತ್ರವನ್ನು ಕಟ್ಟಿ ಇಡಲಾಗಿತ್ತು. ಈ ಚಿತ್ರಕ್ಕೆ ಫ್ರೇಮ್ ಕೂಡ ಇರಲಿಲ್ಲ. ಆದರೆ ಚಿತ್ರ ಹಾಳಾಗಿರಲಿಲ್ಲ.
ದತ್ತು ಪಡೆದ ವರ್ಷವೇ ಮಗನಿಗೆ ಸೆರೆಬ್ರಲ್ ಪಾಲ್ಸಿ, 26 ವರ್ಷವಾದ್ರೂ ಕಣ್ಣಲ್ಲಿ ಕಣ್ಣಿಟ್ಟು ಸಾಕ್ತಿದ್ದಾರೆ ಅಪ್ಪ!
ಕ್ರಿಸ್ಟೆಲ್ ಈ ಪೈಂಟಿಂಗ್‌ನಲ್ಲಿ ಇತ್ತೀಚೆಗೆ ಹರಾಜು ಹಾಕಿದ್ದರು. 5010ರಲ್ಲಿ ಬರೆದ ಈ ಚಿತ್ರ ಅಂದರೆ ಬರೋಬ್ಬರಿ 500 ವರ್ಷಗಳ ಹಿಂದಿನ ಜೀಸಸ್ ಪೈಂಟಿಂಗ್ ಹರಾಜಿನಲ್ಲಿ ರಾಕೆಟ್ ರೀತಿ ಮೌಲ್ಯ ಪಡೆದುಕೊಂಡಿತು. ಕೊನೆಗೆ 18 ಕೋಟಿ ರೂಪಾಯಿಗೆ ಈ ಪೈಂಟಿಂಗ್ ಮಾರಾಟಗೊಂಡಿತ್ತು. ಇದೇ ರೀತಿ ಹಲವು ಪೈಂಟಿಂಗ್ ಹರಾಜಾಗಿ ದಾಖಲೆ ಬರೆದಿದೆ.
ರೆಸ್ಟ್ ಆಫ್ ಫ್ಲೇಟ್ ಟು ಈಜಿಪ್ಟ್ ಈ ಪೈಂಟಿಂಗ್‌ನ್ನು ಕ್ರಿಸ್ಟಿ ಹರಾಜು ಮಾಡಿದ್ದಾರೆ. 12 ಮಿಲಿಯನ್ ಪೌಂಡ್ ಅಥವಾ 15 ಮಿಲಿಯನ್ ಪೌಂಡ್‌ಗೆ ಈ ಪೈಂಟಿಂಗ್ ಹರಾಜಾಗುವ ಸಾಧ್ಯತೆಯನ್ನು ಅಂದಾಜಿಸಲಾಗಿತ್ತು. ಆದರೆ ದಾಖಲೆ ಮೊತ್ತಕ್ಕೆ ಹರಾಜಾಗಿದೆ. ಹೆಚ್ಚು ಪ್ರಚಲಿತವಲ್ಲದ ಕಲಾಗಾರನ ಪೈಂಟಿಂಗ್ ಇಷ್ಟು ಮೊತ್ತಕ್ಕೆ ಹರಾಜಾಗಿರುವುದು ಇದೇ ಮೊದಲು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸಲ್ಮಾನ್ ಖಾನ್‌ನ ಮೊದಲ ಪೇಂಟಿಂಗ್ ಮಾರಾಟಕ್ಕೆ ಸಜ್ಜು; ಹೇಗಿದೆ ಚಿತ್ರ?
ಲಾಂಗ್ ಲೀಟ್ ಹೌಸ್ ಈ ಚಿತ್ರದ ಮಾಲೀಕತ್ವ ಹೊಂದಿದೆ. ಇದೀಗ 500 ವರ್ಷಗಳ ಪೈಂಟಿಂಗ್ ಹರಾಜಿನ ೂಲಕ ಕೊನೆಗೂ ರಾಜಮನೆತನ ಸೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ