ಬ್ರಿಟನ್ ಚುನಾವಣೆ: ಪ್ರಧಾನಿ ರಿಷಿ ಸುನಕ್‌ ಪಕ್ಷ ಸೋಲಿನತ್ತ

By Kannadaprabha NewsFirst Published Jul 5, 2024, 7:49 AM IST
Highlights

ಬ್ರಿಟನ್ ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಮತ ಎಣಿಕೆ ಕೂಡಾ ಆರಂಭವಾಗಿದ್ದು ಶುಕ್ರವಾರ ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. 

ಲಂಡನ್ (ಜು.05): ಬ್ರಿಟನ್ ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಮತ ಎಣಿಕೆ ಕೂಡಾ ಆರಂಭವಾಗಿದ್ದು ಶುಕ್ರವಾರ ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಬಹುತೇಕ ಚುನಾವಣಾ ಸಮೀಕ್ಷೆಗಳು 13 ವರ್ಷಗಳಿಂದ ಅಧಿಕಾರದಲ್ಲಿರುವ ಕನ್ಸರ್ವೇಟಿವ್‌ ಪಕ್ಷಕ್ಕೆ ಆಘಾತಕಾರಿ ಸೋಲಿನ ಸುಳಿವು ನೀಡಿವೆ. 

ಇನ್ನೊಂದೆಡೆ ಹಾಲಿ ಪ್ರಧಾನಿ ರಿಷಿ ಸುನಕ್‌ ಕೂಡಾ ಸೋಲಿನ ಆತಂಕದಲ್ಲಿದ್ದಾರೆ. ಇದುವರೆಗೆ ಬ್ರಿಟನ್‌ನಲ್ಲಿ ಯಾವುದೇ ಹಾಲಿ ಪ್ರಧಾನಿ ಸೋಲನ್ನಪ್ಪಿಲ್ಲ. ಹೀಗಾಗಿ ರಿಷಿ ಸೋತರೆ ಅದು ಹೊಸ ದಾಖಲೆಗೆ ಕಾರಣವಾಗಿದೆ.ಬಹುತೇಕ ಚುನಾವಣಾ ಸಮೀಕ್ಷೆಗಳು ಹಾಲಿ 219 ಸ್ಥಾನ ಹೊಂದಿರುವ ವಿಪಕ್ಷ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿವೆ ಎಂದು ಭವಿಷ್ಯ ನುಡಿದಿವೆ. 

Latest Videos

ದೆಹಲಿಯಲ್ಲಿ ಗಾರೆ ಕೆಲಸ ಮಾಡಿದ ರಾಹುಲ್‌ ಗಾಂಧಿ: ಮೆಟ್ಟಿಲು ಕಟ್ಟಿದ ವಿಪಕ್ಷ ನಾಯಕ!

ಇನ್ನೊಂದೆಡೆ ಆಡಳಿತಾರೂಢ ಟೋರಿ ಪಕ್ಷ 365ರಿಂದ 100-125ಕ್ಕೆ ಕುಸಿಯಲಿದೆ ಎಂದು ಹೇಳಿವೆ. ನಿರೀಕ್ಷೆಯಂತೆ ಫಲಿತಾಂಶ ಪ್ರಕಟವಾದರೆ ಲೇಬರ್‌ ಪಕ್ಷದ ನಾಯ ಕೀರ್ ಸ್ಟಾರ್ಮರ್ ನೂತನ ಪ್ರಧಾನಿಯಾಗುವ ಸಾಧ್ಯತೆ ಇದೆ. ಜೊತೆಗೆ ಲೇಬರ್‌ ಪಕ್ಷದಿಂದ ಭಾರೀ ಪ್ರಮಾಣದಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳೂ ಕೂಡಾ ಆಯ್ಕೆಯಾಗುವ ನಿರೀಕ್ಷೆ ಇದೆ.

click me!