'ಭಯೋತ್ಪಾದನೆಗೆ ಬಲಿಪಶು ಆಗ್ತಿರೋದು ನಾವು'-ಪಾಕಿಸ್ತಾನದ ಸಚಿವನ ಸುಳ್ಳಿಗೆ ಹುಚ್ಚು ಬಿಡಿಸಿದ ನಿರೂಪಕಿ! Viral Video

Published : May 07, 2025, 03:14 PM ISTUpdated : May 07, 2025, 03:17 PM IST
'ಭಯೋತ್ಪಾದನೆಗೆ ಬಲಿಪಶು ಆಗ್ತಿರೋದು ನಾವು'-ಪಾಕಿಸ್ತಾನದ ಸಚಿವನ ಸುಳ್ಳಿಗೆ ಹುಚ್ಚು ಬಿಡಿಸಿದ ನಿರೂಪಕಿ! Viral Video

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಶನ್ ಸಿಂಧೂರ' ನಡೆಸಿತು. ಪಾಕಿಸ್ತಾನದ ಮಾಹಿತಿ ಸಚಿವ ತಾರರ್, ಭಯೋತ್ಪಾದಕ ಶಿಬಿರಗಳಿಲ್ಲ, ಪಾಕಿಸ್ತಾನ ಭಯೋತ್ಪಾದನೆಯ ಬಲಿಪಶು ಎಂದರು. ಆದರೆ ಪತ್ರಕರ್ತರು ಪಾಕಿಸ್ತಾನದ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರಶ್ನಿಸಿದರು. ತಾರರ್ ಭಾರತದ ದಾಳಿಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿಗರ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ಮಾಡಿ, 26 ಜನರನ್ನು ಕೊಂದರು. ಅದಕ್ಕೆ ತಕ್ಕಂತೆ ʼಆಪರೇಶನ್‌ ಸಿಂಧೂರʼ ಹೆಸರಿನಲ್ಲಿ ಭಾರತವು ಪ್ರತೀಕಾರ ತೀರಿಸಿಕೊಂಡಿದೆ. ಈ ಬಗ್ಗೆ ಪಾಕಿಸ್ತಾನದ ಮಾಹಿತಿ ಸಚಿವ ಅಟಾ ತಾರರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಾರರ್‌ ಮಾತಿಗೆ ನಿರೂಪಕಿ ಕೇಳಿದ ಪ್ರಶ್ನೆ ಈಗ ವೈರಲ್‌ ಆಗ್ತಿದೆ. ಸುಳ್ಳು ಹೇಳ್ತಿದ್ದ ತಾರರ್‌ಗೆ ನಿರೂಪಕಿ ಸತ್ಯ ದರ್ಶನ ಮಾಡಿಸಿರುವ ವಿಡಿಯೋ ಈಗ ವೈರಲ್‌ ಆಗ್ತಿದೆ.

ಪತ್ರಕರ್ತ: ಭಾರತದ ಸೇನೆಯು ಒಟ್ಟು ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿದೆ ಎಂದು ಹೇಳಿದೆ. ಅವರು ಪಾಕಿಸ್ತಾನದ ಸೇನಾ ಸೌಲಭ್ಯಗಳನ್ನು ಗುರಿಯಾಗಿಸಿಲ್ಲ, ಇವು ಭಯೋತ್ಪಾದಕ ಶಿಬಿರಗಳೆಂದು ಹೇಳಿದ್ದಾರೆ.

ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶು! 
“ನಾನು ಸ್ಪಷ್ಟವಾಗಿ ಹೇಳುತ್ತೇನೆ, ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಶಿಬಿರಗಳಿಲ್ಲ. ಪಾಕಿಸ್ತಾನವು ನಿಜಕ್ಕೂ ಭಯೋತ್ಪಾದನೆಯ ಬಲಿಪಶು ಎಂದೇ ನಾನು ಹೇಳುವೆ. ನಾವು ಪಶ್ಚಿಮ ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದೇವೆ. ಈ ಯುದ್ಧದಲ್ಲಿ 90,000 ಜನರು ಜೀವ ಕಳೆದುಕೊಂಡಿದ್ದಾರೆ. ಜಾಫರ್ ಎಕ್ಸ್‌ಪ್ರೆಸ್ ವಿಮಾನ ಅಪಹರಣದಂತಹ ಘಟನೆಯನ್ನು ಭಾರತವು ಖಂಡಿಸಲಿಲ್ಲ. ಭಾರತವು ಸಿಖ್‌ರನ್ನು ಯುಎಸ್, ಕೆನಡಾ, ಆಸ್ಟ್ರೇಲಿಯಾದಲ್ಲಿ ಕೊಲೆಗೈಯುವ ಮೂಲಕ ಭಯೋತ್ಪಾದನೆಗೆ ಹಣ ಕೊಡುತ್ತದೆ. ನಾವು ಕುಲ್‌ಭೂಷಣ್ ಯಾದವ್ ಎಂಬ ಗೂಢಚಾರನನ್ನು ಸೆರೆಹಿಡಿದಿದ್ದೇವೆ” ಎಂದು ಅಟಾ ತಾರರ್ ಅವರು ಹೇಳಿದ್ದಾರೆ.

ಪತ್ರಕರ್ತ: “ಕಳೆದ ವಾರ ನನ್ನ ಕಾರ್ಯಕ್ರಮದಲ್ಲಿ, ನಿಮ್ಮ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಪಾಕಿಸ್ತಾನವು ದಶಕಗಳಿಂದ ಭಯೋತ್ಪಾದಕ ಗುಂಪುಗಳಿಗೆ ನಿಧಿ, ಬೆಂಬಲ ಕೊಡುತ್ತ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. 2018ರಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನವು ದ್ವಿಮುಖ ಆಟವಾಡುತ್ತಿದೆ ಎಂದು ಆರೋಪಿಸಿ ಸೇನಾ ಸಹಾಯವನ್ನು ಕಡಿತಗೊಳಿಸಿದ್ದರು. ಆದ್ದರಿಂದ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳಿಲ್ಲ ಎಂದು ನೀವು ಹೇಳುವುದು, ಜನರಲ್ ಪರ್ವೇಜ್ ಮುಷರಫ್, ಬೇನಜೀರ್ ಭುಟ್ಟೋ, ನಿಮ್ಮ ರಕ್ಷಣಾ ಸಚಿವ ಮತ್ತು ಬಿಲಾವಲ್ ಭುಟ್ಟೋ ಹೇಳಿದ್ದಕ್ಕೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ನಾವು ಹೋರಾಡ್ತೀವಿ! 
“ಭಯೋತ್ಪಾದನೆಯ ವಿರುದ್ಧ‌ ಹೋರಾಡುವ ದೇಶಗಳಲ್ಲಿ ಪಾಕಿಸ್ತಾನವು ಮುಂಚೂಣಿಯಲ್ಲಿದೆ. ನಾವು ವಿಶ್ವ ಶಾಂತಿ ಸಾರುತ್ತೇವೆ, ಭಯೋತ್ಪಾದಕರಿಗೆ ಮತ್ತು ಉಳಿದ ವಿಶ್ವಕ್ಕೆ ನಾವು ಗೋಡೆಯಾಗಿದ್ದೇವೆ” ಎಂದು ತರಾರ್‌ ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳಿಲ್ಲ
“ರಕ್ಷಣಾ ಸಚಿವರನ್ನು ತಪ್ಪಾಗಿ ಅರ್ಥೈಸಲಾಗಿದೆ. 1980ರ ದಶಕದಲ್ಲಿ ಸೋವಿಯತ್ ಆಕ್ರಮಣವಿತ್ತು, ಆಗ ನಾವು ಯುಎಸ್‌ನ ಮಿತ್ರರಾಗಿದ್ದೆವು. ಆಮೇಲೆ ಸನ್ನಿವೇಶ ಬದಲಾಯ್ತು. ಪಾಕಿಸ್ತಾನವು ಅನೇಕ ತ್ಯಾಗಗಳನ್ನು ಮಾಡಿದೆ. ಇಂದಿಗೂ ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಏಳು ಸೈನಿಕರನ್ನು ಕಳೆದುಕೊಂಡಿದ್ದೇವೆ. ಆದ್ದರಿಂದ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳಿಲ್ಲ ಎಂಬುದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ” ಎಂದು ತರಾರ್‌ ಹೇಳಿದ್ದಾರೆ.

ಆಪರೇಶನ್‌ ಸಿಂಧೂರಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಹೇಗಿರಲಿದೆ? ಪ್ರಧಾನಮಂತ್ರಿ ಇಂದು ರಾತ್ರಿ ಪ್ರತಿಕ್ರಿಯೆ ಇರುತ್ತದೆ ಎಂದಿದ್ದಾರೆ. ಇದು ಏನನ್ನು ಒಳಗೊಂಡಿರಬಹುದು?

ಏನ್‌ ಮಾಡ್ತೀವಿ ಅಂತ ಹೇಳೋದಿಲ್ಲ 
ಭಾರತಕ್ಕೆ ಉತ್ತರ ಕೊಡಲು ಈಗಾಗಲೇ ತಯಾರಿ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಳ್ಳಲಾಗದು, ಆದರೆ ಎರಡು ಭಾರತೀಯ ವಿಮಾನಗಳನ್ನು ಉರುಳಿಸಿದ್ದೇವೆ ಎಂದು ಹೇಳಬಲ್ಲೆ. ನಾವು ಭಾರತದ ಆಕ್ರಮಣಕ್ಕೆ ಈಗ ಪ್ರತಿಕ್ರಿಯಿಸುತ್ತಿದ್ದೇವೆ. ಈಗ ದಾಳಿಯಾಗಿದೆ, ನಾವು ಪ್ರತಿಕ್ರಿಯಿಸಿದ್ದೇವೆ. ಈ ಹಿಂದೆ ಹಲವು ಸಂದರ್ಶನಗಳಲ್ಲಿ, ಭಾರತವು ದಾಳಿ ನಡೆಸಬಹುದು ಎಂದು ನಾನು ಹೇಳಿದ್ದೆ. ಪಹಲ್ಗಾಮ್‌ ಘಟನೆಯ ತನಿಖೆಗೆ ನಾವು ಒಪ್ಪಿಕೊಂಡಿದ್ದೆವು, ಆದರೆ ಭಾರತವು ಯಾವುದೇ ಪುರಾವೆ ಇಲ್ಲದೆ ನಾಗರಿಕರನ್ನು, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿದೆ. ಈ ರೀತಿ ಮಾಡುವ ಹಕ್ಕು ಭಾರತಕ್ಕಿಲ್ಲ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!