ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಗುಂಡಿನ ದಾಳಿ ವಿಡಿಯೋ ಬಹಿರಂಗವಾಗಿದೆ. ತೆರೆದ ವಾಹನದಲ್ಲಿ ರ್‍ಯಾಲಿ ನಡೆಸುತ್ತಿರುವಾಗಲೇ ಗುಂಡಿನ ದಾಳಿ ನಡೆದಿದೆ. ಬಂಧಿತನಿಂದ ಪಿಸ್ತೂಲ್ ಹಾಗೂ ಎಕೆ47 ಗನ್ ವಶಕ್ಕೆ ಪಡೆಯಲಾಗಿದೆ. ಗುಂಡಿನ ದಾಳಿ ವಿಡಿಯೋ ವೈರಲ್ ಆಗಿದೆ.
ಲಾಹೋರ್(ನ.03); ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಗುಂಡಿನ ದಾಳಿಯ ಭೀಕರ ವಿಡಿಯೋ ಬಹಿರಂಗವಾಗಿದೆ. ಈ ದಾಳಿಯಲ್ಲಿ ಇಮ್ರಾನ್ ಖಾನ್ ಬೆಂಬಲಿಗ ಮೃತಪಟ್ಟಿದ್ದಾನೆ. ಪಕ್ಷದ ಯುವ ಮುಖಂಡ ಗಾಯಗೊಂಡಿದ್ದರೆ, ಇಮ್ರಾನ್ ಖಾನ್ ಕಾಲಿಗೆ ಗಾಯವಾಗಿದೆ. ಘಟನಾ ಸ್ಥಳದಿಂದ 100 ಕಿಲೋಮೀಟರ್ ದೂರದಲ್ಲಿನ ಲಾಹೋರ್‌ನ ಆಸ್ಪತ್ರೆಯಲ್ಲಿ ಇಮ್ರಾನ್ ಖಾನ್‌ಗೆ ಚಿಕಿತ್ಸೆ ನೀಡಲಾಗಿದೆ. ಇತ್ತ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಂದ ಪಿಸ್ತೂಲ್ ಜೊತೆಗೆ ಎಕೆ47 ಗನ್ ವಶಪಡಿಸಿಕೊಳ್ಳಲಾಗಿದೆ. ಸರ್ಕಾರ ಬೆಂಬಲಿತ ಸೇನಾ ಪದ್ಧತಿ ವಿರುದ್ಧ ಸತತ ಹೋರಾಟ ನಡೆಸುತ್ತಿರುವ ಇಮ್ರಾನ್ ಖಾನ್ ಲಾಹೋರ್‌ನಿಂದ ಇಸ್ಲಾಮಾಬಾದ್ ಯಾತ್ರೆ ಆರಂಭಿಸಿದ್ದರು. ಈ ಯಾತ್ರೆ ವಾಜಿರಾಬಾದ್ ತಲುಪತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ.
ಇಮ್ರಾನ್ ಖಾನ್, ಪಕ್ಷದ ಇತರ ನಾಯಕರು ಹಾಗೂ ಅಪಾರ ಬೆಂಬಲಿಗರ ಜೊತೆಗೆ ತೆರದ ವಾಹನದಲ್ಲಿ ಯಾತ್ರೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ ಎಲ್ಲರೂ ವಾಹನದಲ್ಲಿ ಜೀವರಕ್ಷಣೆಗಾಗಿ ಮಲಗಿದ್ದಾರೆ. ಬೆಂಬಲಿಗರು ಚೆಲ್ಲಾಪಿಲ್ಲಿಯಾಗಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಒರ್ವ ಬೆಂಬಲಿಗ ಮೃತಪಟ್ಟಿದ್ದಾನೆ. ಸಂಸದ ಫೈಸಲ್ ಜಾವೇದ್ ಖಾನ್ ಗಾಯಗೊಂಡಿದ್ದಾರೆ.
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು!
ಇಮ್ರಾನ್ ಖಾನ್ ಕಾಲಿಗೆ ಗುಂಡು ತಗುಲಿತ್ತು. ಕಾಲಿನ ಗಾಯ ಗಂಭೀರವಲ್ಲದ ಕಾರಣ, SUV ಕಾರಿನ ಮೂಲಕ 100 ಕಿಲೋಮೀಟರ್ ದೂರದ ಲಾಹೋರ್‌ಗೆ ಆಗಮಿಸಿ ಚಿಕಿತ್ಸೆ ನೀಡಲಾಗಿದೆ. ಇಮ್ರಾನ್ ಖಾನ್ ಕೂದಲೆಳೆಯುವ ಅಂತರದಿಂದ ಪಾರಾಗಿದ್ದಾರೆ. ಸದ್ಯ ಹೆಚ್ಚಿನ ಅಪಾಯವಿಲ್ಲದೆ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಒರ್ವ ಬೆಂಬಲಿಗ ಈ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ.
2007ರಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋರನ್ನು ಇದೇ ರೀತಿ ರ್‍ಯಾಲಿ ನಡೆಸುತ್ತಿರುವಾಗಲೇ ಹತ್ಯೆ ಮಾಡಲಾಗಿತ್ತು. ಇದೇ ರೀತಿಯ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.
Footage of the firing. Assassination attempt on Imran Khan. pic.twitter.com/fmSgI2E8jc
— Ihtisham Ul Haq (@iihtishamm)
ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಇಮ್ರಾನ್ ಖಾನ್..!
ಘಟನೆನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ. ಘಟನೆ ಕುರಿತು ಸಂಪೂರ್ಣ ವರದಿ ಕೇಳಿದ್ದಾರೆ. ಇಷ್ಟೇ ಅಲ್ಲ ಗಾಯಗೊಂಡವರ ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ. ಇನ್ನು ಘಟನೆ ತನಿಖೆಗೆ ಪಾಕಿಸ್ತಾನ ಸರ್ಕಾರ ಸೂಚಿಸಿದೆ. ಪಾಕಿಸ್ತಾನದಲ್ಲಿ ಸುರಕ್ಷತೆಯಲ್ಲಿ ಲೋಪದ ಕುರಿತು ತನಿಖೆಗೆ ಸೂಚಿಸಿದ್ದಾರೆ. ಇದೇ ವೇಳೆ ಹಿಂಸೆಗೆ ಪಾಕಿಸ್ತಾನದಲ್ಲಿ ಯಾವುದೇ ಅವಕಾಶವಿಲ್ಲ ಎಂದಿದ್ದಾರೆ.
Injured in the assassination attempt on Imran Khan, Senator speaks exclusively. pic.twitter.com/PyrgQoeTs7
— PTI (@PTIofficial)
ರ್‍ಯಾಲಿ ಬಳಿಕ ವಾಜಿರಾಬಾದ್‌ನಲ್ಲಿ ಅತೀ ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಇಮ್ರಾನ್ ಖಾನ್ ಭಾಷಣ ಮಾಡಬೇಕಿತ್ತು. ಆದರೆ ಇದೀಗ ರ್‍ಯಾಲಿ ಅರ್ಧಕ್ಕೆ ಮೊಟಕುಗೊಂಡಿದೆ. ಇದೀಗ ಇಮ್ರಾನ್ ಖಾನ್ ಪರ ಭಾರಿ ಬೆಂಬಲ ವ್ಯಕ್ತವಾಗಿದೆ.