
ಇಸ್ಲಾಮಾಬಾದ್: ಪ್ರಧಾನಿ ಹುದ್ದೆಯನ್ನೂ ಕಳೆದುಕೊಂಡಿರುವ ಇಮ್ರಾನ್ ಖಾನ್ (Imran Khan)ಈಗ ಮತ್ತಷ್ಟುಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪ್ರಧಾನಿಯಾಗಿದ್ದ (Prime Minister) ಸಮಯದಲ್ಲಿ ಉಡುಗೊರೆಯಾಗಿ ಪಡೆದಿದ್ದ ಸುಮಾರು 18 ಕೋಟಿ ರೂ. ಮೌಲ್ಯದ ನೆಕ್ಲೇಸ್‌ನ್ನು ಚಿನ್ನದಂಗಡಿಗೆ ಮಾರಾಟ ಮಾಡಿರುವುದರ ವಿರುದ್ಧ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎಫ್‌ಐಎ)(Federal Investigation Agency) ವಿಚಾರಣೆ ಆರಂಭಿಸಿದೆ.
ಪ್ರಧಾನಿಯಾಗಿದ್ದ ಸಮಯದಲ್ಲಿ ಉಡುಗೊರೆಯಾಗಿ ಪಡೆದಿದ್ದ ನೆಕ್ಲೇಸ್‌ನ್ನು ತೋಶಾ-ಖಾನಾಕ್ಕೆ (ರಾಜ್ಯ ಉಡುಗೊರೆ ಭಂಡಾರ) ನೀಡದೇ, ಅದನ್ನು ಮಾಜಿ ಸಹಾಯಕ ಜುಲ್ಫೀಕರ್ ಬುಖಾರಿಗೆ (Zulfiqar Bukhari)ನೀಡಿದ್ದರು. ಆತ ಈ ಸರವನ್ನು ಲಾಹೋರ್‌ನಲ್ಲಿ 18 ಕೋಟಿ ರೂ.ಗೆ ಮಾರಾಟ ಮಾಡಿದ್ದ. ನಿಯಮದ ಪ್ರಕಾರ ಸಾರ್ವಜನಿಕರು ನೀಡುವ ಉಡುಗೊರೆಯ ಅರ್ಧದಷ್ಟು ಮೌಲ್ಯವನ್ನು ಪಾವತಿಸಿ ತಮ್ಮ ಬಳಿ ಇರಿಸಿಕೊಳ್ಳಬಹುದು. ಆದರೆ ಇಮ್ರಾನ್ ಮಾಡಿರುವುದು ಕಾನೂನುಬಾಹಿರ ಕೃತ್ಯ ಹಾಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಎಫ್‌ಐಎ ಹೇಳಿದೆ.
ಇಮ್ರಾನ್ ಬೆಂಬಲಿಸಿ ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆ : ಖಾನ್ ಆಪ್ತರ ವಿದೇಶ ಯಾತ್ರೆಗೆ ತಡೆ
ಪಾಕ್ ಸಚಿವ ಸಂಪುಟ ನೇಮಕ ಮತ್ತಷ್ಟು ತಡ
ಇತ್ತ ಪಾಕಿಸ್ತಾನ ನೂತನ ಪ್ರಧಾನಿಯಾಗಿ ನೇಮಕಗೊಂಡಿರುವ ಶೆಹಬಾಜ್ ಷರೀಫ್ (Shehbaz Sharif) ಅವರು ತಮ್ಮ ಸಚಿವ ಸಂಪುಟವನ್ನು ನೇಮಕ ಮಾಡಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ತಮ್ಮ ದುರ್ಬಲ ಮೈತ್ರಿಕೂಟದ ಅರಿವಿರುವ ಅವರು ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಸಂಪುಟ ರಚನೆ ಮಾಡಬಹುದು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (Pakistan Muslim League-Nawaz) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಕ್ಷಗಳು (Pakistan People's Party) ನಿರ್ಧರಿಸಿವೆ. ಪ್ರಸ್ತುತ ಆಡಳಿತ ಪಕ್ಷದ ಮೈತ್ರಿಕೂಟದಲ್ಲಿ 8 ಪಕ್ಷಗಳು ಮತ್ತು 5 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಕೇವಲ 2 ಹೆಚ್ಚುವರಿ ಮತಗಳಿಂದ ಪ್ರಧಾನಿ ಸ್ಥಾನ ಗಳಿಸಿಕೊಂಡಿರುವ ಶೆಹಬಾಜ್ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನು ಬೆಂಬಲದಲ್ಲಿ ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಹಾಗಾಗಿ ನಿಧಾನವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಸಚಿವ ಸಂಪುಟ ರಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 342 ಸ್ಥಾನಗಳನ್ನು ಹೊಂದಿರುವ ಪಾಕ್ ಅಸೆಂಬ್ಲಿಯಲ್ಲಿ ಬಹುಮತಕ್ಕೆ 172 ಸ್ಥಾನ ಬೇಕು. 174 ಮತಗಳನ್ನು ಪಡೆಯುವ ಮೂಲಕ ಶೆಹಬಾಜ್ ಅವರು 23ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇಮ್ರಾನ್ ವಿರುದ್ಧದ ದೇಶದ್ರೋಹ ಕೇಸ್ ವಜಾ: ರಂಜಾನ್ ಬಳಿಕ ನವಾಜ್ ಮರಳಿ ಪಾಕ್‌ಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ