
ಇಸ್ಲಾಮಾಬಾದ್(ಫೆ.11) ಪಾಕಿಸ್ತಾನ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನವಾಜ್ ಷರಿಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಮ್ ಲೀಗ್ ಸ್ಪಷ್ಟ ಬಹುಮತ ಪಡೆದಿಲ್ಲ. ಇತ್ತ ಷರಿಫ್‌ಗೆ ಠಕ್ಕರ್ ನೀಡಿದ ಇಮ್ರಾನ್ ಖಾನ್ ಪಿಟಿಐ ಗರಿಷ್ಠ ಸ್ಥಾನ ಗೆದ್ದರೂ ಸರ್ಕಾರ ರಚಿಸುವ ಭಾಗ್ಯ ಷರೀಫ್ ಪಾಲಾಗಿದೆ. ಕಾರಣ ನವಾಜ್ ಷರೀಫ್‌ಗೆ ಪಾಕಿಸ್ತಾನ ಸೇನೆ ಬೆಂಬಲ ನೀಡಿದೆ. ಇತ್ತ ಉಭಯ ಪಕ್ಷದ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಭ್ರಮಾಚರಣೆಯ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಸಂಭ್ರಮಾಚರಣೆ ವೇಳೆ ಬೆಂಬಲಿಗರು, ಕಾರ್ಯಕರ್ತರು, ಬಲೂನ್ ಹಾರಿಬಿಡುವ ಬದಲು ಬಳಸಿದ ಕಾಂಡೋಮ್‌ಗಳನ್ನು ಹಾರಿ ಬಿಟ್ಟ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಪಾಕಿಸ್ತಾನ ಚುನಾವಣೆ ಫಲಿತಾಂಶ ಬಳಿಕ ನಡೆದ ಸಂಭ್ರಮಾಚರಣೆ ವಿಡಿಯೋ ಎಂದು ಹೇಳಲಾಗುತ್ತಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಬಜೆಟ್ ಫ್ಲೆಂಡ್ಲಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.ಕಾರಣ ಬಳಸಿದ ಕಾಂಡೋಮ್‌ಗಳನ್ನು ಹೆಕ್ಕಿ ತಂದು ಗಾಳಿ ತುಂಬಿದ್ದಾರೆ. ಬಳಿಕ ಈ ಕಾಂಡೋಮ್‌ಗಳನ್ನು ಬಲೂನ್‌ಗಳಂತೆ ಹಾರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಗಾಳಿ ತುಂಬಿದ ಕಾಂಡೋಮ್‌ಗಳನ್ನು ಹಾರಿಬಿಡುತ್ತಿದ್ದಾರೆ. ಈ ಕಾಂಡೋಮ್ ಕೆಳ ಭಾಗದಲ್ಲಿ ಪಕ್ಷದ ಧ್ವಜ ಕಟ್ಟಿ ಆಕಾಶಕ್ಕೆ ಹಾರಿಬಿಡಲಾಗುತ್ತಿದೆ. ಪಾಕಿಸ್ತಾನದ ಮಾಧ್ಯಮಗಳಲ್ಲೂ ಈ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ. ಇದರ ಮೇಲೆ ಚರ್ಚೆ ಕೂಡ ನಡೆದಿದೆ. ಬಳಸಿದ ಕಾಂಡೋಮ್, ವಿಶ್ವಸಂಸ್ಥೆ ಹಾಗೂ ಪಾಕಿಸ್ತಾನಕ್ಕೆ ನೆರವು ನೀಡುವ ಸಂದರ್ಭದಲ್ಲಿ ಉಚಿತವಾಗಿ ನೀಡಿರುವ ಕಾಂಡೋಮ್‌ಗಳನ್ನು ತಂದು ಈ ರೀತಿಯ ಸಂಭ್ರಮಾಚರಣೆ ಮಾಡಲಾಗಿದೆ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಆದರೆ ಈ ವಿಡಿಯೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಧಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ವಿಡಿಯೋಗೆ ಬಂದಿರುವ ಪ್ರತಿಕ್ರಿಯೆಗಳ ಪೈಕಿ, ಇದು ಹಳೇ ವಿಡಿಯೋ ಎಂಬ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿ ಪ್ರಮುಖವಾಗಿ ಕಾಂಡೋಮ್ ಬಲೂನ್ ಹಾರಿಬಿಡುತ್ತಿರುವ ನಾಯಕ ಖಾದ್ರಿ ಬಕ್ಷ್ ಕಲ್ಮಟಿ, ಈ ನಾಯಕ ನವಾಜ್ ಷರೀಪ್ ಅರ ಪಾಕಿಸ್ತಾನ ಮುಸ್ಲಿಮ್ ಲೀಗ್ ಪಕ್ಷದಿಂದ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದಕ್ಕೂ ಮೊದಲು ಪಿಪಿಪಿ ಹಾಗೂ ಪಿಟಿಐ ಪಕ್ಷಕ್ಕೂ ಹಾರಿ ಕೆಲ ಕಾಲ ಚುನಾವಣೆ ಎದುರಿಸಿದ್ದರು.ಆದರೆ ಈ ವಿಡಿಯೋ 9 ರಿಂದ 10 ವರ್ಷ ಹಳೇ ವಿಡಿಯೋ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಫಲಿತಾಂಶ ಅತಂತ್ರ: ಜೈಲಲ್ಲಿರುವ ಇಮ್ರಾನ್ ಬೆಂಬಲಿಗರ ಅಚ್ಚರಿಯ ಗೆಲುವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ