
ನವದೆಹಲಿ (ಮೇ.20): ಸಾಮಾನ್ಯವಾಗಿ ಎಲ್ಲಾ ದೇಶಗಳು ತಮ್ಮ ಸೇನಾ ನಾಯಕರಿಗೆ ಗೆದ್ದ ಸೇನಾ ಕಾರ್ಯಾಚರಣೆ ಅಥವಾ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಸರ್ಕಾರದಿಂದ ಪದಕಗಳನ್ನು ಪಡೆಯುತ್ತಾರೆ. ಅದನ್ನು ಸೇನಾ ನಾಯಕರು ಹೆಮ್ಮೆಯಿಂದ ತಮ್ಮ ಎದೆಯ ಮೇಲೆ ಹಾಕಿಕೊಳ್ಳುವುದು ವಾಡಿಕೆ. ಆದರೆ, ಪಾಕಿಸ್ತಾನದಲ್ಲಿ ಮಾತ್ರ ಎಷ್ಟು ಕಾರ್ಯಾಚರಣೆ, ಯುದ್ಧವನ್ನು ಸೋತ ಆಧಾರದಲ್ಲಿ ಪದಕ ನೀಡುತ್ತಾರೆ ಅನ್ನೋದು ಈಗ ಸ್ಪಷ್ಟವಾಗಿದೆ.
ಹಾಗಾಗಿ ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರಕ್ಕೂ ಅಲ್ಲಿನ ಸೇನೆಗೂ ಯಾವುದೇ ಮರ್ಯಾದೆ ಕೂಡ ಇಲ್ಲ. ಆಪರೇಷನ್ ಸಿಂದೂರ ಸಮಯದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಅಂಚು ಅಂಚಿಗೂ ತನ್ನ ಮಿಸೈಲ್, ಡ್ರೋನ್ ಮೂಲಕ ದಾಳಿ ಮಾಡಿತ್ತು. ಆದರೆ, ಇದಕ್ಕೆ ಬರೀ ಸುಳ್ಳಿನಿಂದಲೇ ಪ್ರಚಾರ ಪಡೆದುಕೊಂಡಿದ್ದ ಪಾಕ್ ಈಗ ಮತ್ತೊಂದು ಹೀನ ಸ್ಥಿತಿಗೆ ಇಳಿದಿದೆ. ಪಾಕಿಸ್ತಾನದ ಸಿಡಿಎಸ್ ಅಥವಾ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದ ಅಸೀಮ್ ಮುನೀರ್‌ನನ್ನು ಈಗ ಫೀಲ್ಡ್ ಮಾರ್ಷಲ್ ಆಗಿ ಭಡ್ತಿ ನೀಡಲಾಗಿದೆ.
ಬಹುಶಃ ಒಂದೇ ಒಂದು ಯುದ್ಧ ಗೆಲ್ಲದೆ, ಸೇನಾ ಕಾರ್ಯಾಚರಣೆಯನ್ನೂ ಸರಿಯಾಗಿ ಮಾಡದೇ ಫೀಲ್ಡ್ ಮಾರ್ಷಲ್ ಹುದ್ದೆಗೇರಿದ ಪಾಕಿಸ್ತಾನದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಅಯೂಬ್ ಖಾನ್ ಬಳಿಕ ಪಾಕಿಸ್ತಾನ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಸ್ಥಾನ ಪಡೆದ 2ನೇ ವ್ಯಕ್ತಿ ಆಸೀಮ್ ಮುನೀರ್ ಆಗಿದ್ದಾರೆ.
ಆಪರೇಷನ್ ಸಿಂದೂರ ಸಮಯದಲ್ಲಿ ಭಾರತದ ಸೇನೆ ಪಾಕಿಸ್ತಾನದಲ್ಲಿದ್ದ 9 ಟೆರರಿಸ್ಟ್ ಕೇಂದ್ರ ಕಚೇರಿ ಅಥವಾ ಸ್ಥಳಗಳ ಮೇಲೆ ಬಾಂಬ್ ಹಾಕಿತ್ತು. ಅದಲ್ಲದೆ, 12 ಏರ್‌ಬೇಸ್‌ಗಳ ಮೇಲೆ ಬಾಂಬ್ ದಾಳಿ, ಪಾಕಿಸ್ತಾನ ಸೇನೆಯ ಏರ್ ಡಿಫೆನ್ಸ್ ಸಿಸ್ಟಮ್‌ಅನ್ನು ಜಾಮ್‌ಮಾಡಿದ್ದು ಮಾತ್ರವಲ್ಲದೆ, ಲಾಹೋರ್‌ಗೆ ಡ್ರೋನ್ ಕಳಿಸಿ ಅದನ್ನು ಧ್ವಂಸ ಮಾಡಿತ್ತು.
ಪ್ರತಿದಾಳಿಯಲ್ಲಿ ಪಾಕಿಸ್ತಾನ ಬಳಸಿದ್ದ ಚೀನಾ ಮೂಲದ ಯುದ್ಧೋಪಕರಣಗಳು, ಟರ್ಕಿಶ್ ಡ್ರೋನ್‌ಗಳನ್ನು ನಿರಾಯಾಸವಾಗಿ ಹೊಡೆದುರುಳಿಸಿತ್ತು. 5-7 ಫೈಟರ್ ಜೆಟ್‌ಗಳನ್ನು ಪಾಕಿಸ್ತಾನ ಕಳೆದುಕೊಂಡಿದೆ. 800 ರಿಂದ 1000ಕ್ಕೂ ಅಧಿಕ ಡ್ರೋನ್‌ಗಳು ಭಾರತದ ಗಡಿಯಲ್ಲಿ ಏರ್‌ಡಿಫೆನ್ಸ್ ಸಿಸ್ಟಮ್ ದಾಟಲಾಗದೆ ಚೆಲ್ಲಾಪಿಲಿಯಾಗಿ ಬಿದ್ದಿವೆ. 70ಕ್ಕೂ ಅಧಿಕ ಸೈನಿಕರು ಸಾವು ಕಂಡಿರುವ ಬಗ್ಗೆ ಮಾಹಿತಿಗಳಿವೆ. ಆರ್ಮಿ ಪೋಸ್ಟ್‌ಗಳು ಎಷ್ಟು ಧ್ವಂಸವಾಗಿದೆ ಅನ್ನೋದನ್ನ ಪಾಕ್‌ಗೆ ಇಂದಿಗೂ ಲೆಕ್ಕ ಹಾಕಲು ಸಾಧ್ಯವಾಗಿಲ್ಲ. ಇಷ್ಟೆಲ್ಲಾ ಆದ ಬಳಿಕ ಕೊನೆಗೆ ಭಾರತದ ಡಿಜಿಎಂಓಗೆ ಕೈಮುಗಿದು ಕದನ ವಿರಾಮ ಕೇಳಿತ್ತು.
ಕಾರ್ಯಾಚರಣೆಯಲ್ಲಿ ಇಷ್ಟೆಲ್ಲಾ ಅವಮಾನ ಎದುರಿಸಿಯೂ ಪಾಕಿಸ್ತಾನ ಅಸೀಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಭಡ್ತಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಈತ ಪಡೆದಿರುವ ಶ್ರೇಣಿ ಅತ್ಯಂತ ಅಪರೂಪ. ಕೊನೆಯ ಬಾರಿಗೆ 1959 ರಲ್ಲಿ ಜನರಲ್ ಅಯೂಬ್ ಖಾನ್ ಅವರಿಗೆ ನೀಡಲಾಗಿತ್ತು. ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಪಾಕಿಸ್ತಾನ ಸೇನೆಯ ಅತಿದೊಡ್ಡ ಗೌರವವಾಗಿದೆ.
ಪಾಕಿಸ್ತಾನ ಸೇನೆಯ ಉನ್ನತ ಹುದ್ದೆಗೆ ನೇಮಕಗೊಳ್ಳುವ ಮೊದಲು, ಮುನೀರ್ ಅವರು ಫೆಬ್ರವರಿ 2019 ರಲ್ಲಿ ಪುಲ್ವಾಮಾ ದಾಳಿಯ ನಂತರ 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಅನ್ನು ಮುನ್ನಡೆಸಿದರು.
ಜನರಲ್ ಅಸಿಮ್ ಮುನೀರ್ ನವೆಂಬರ್ 2022 ರಲ್ಲಿ ಜನರಲ್ ಕಮರ್ ಜಾವೇದ್ ಬಜ್ವಾ ಅವರಿಂದ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ನವೆಂಬರ್ 2024 ರಲ್ಲಿ ಅವರ ಸೇನಾ ಮುಖ್ಯಸ್ಥರ ಅಧಿಕಾರಾವಧಿಯನ್ನು ಮೂರರಿಂದ ಐದು ವರ್ಷಗಳಿಗೆ ವಿಸ್ತರಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ