ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅಂಗ ಎಂದು ಕೇಂದ್ರ ಬಿಜೆಪಿ ನಾಯಕರ ಪದೇ ಪದೇ ಹೇಳಿಕೆ ನೀಡುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕರು, ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಸೇರಿದಂತೆ ಹಲವರು ಭಾರತಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಇದರ ನಡುವೆ ಪಿಒಕೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಾಜನಾಥ್ ಸಿಂಗ್ ಹೇಳಿದಂತೆ, ಪಿಒಕೆ ತಾನಾಗೆ ಭಾರತದೊಂದಿಗೆ ವಿಲೀನಗೊಳ್ಳುವ ಲಕ್ಷಣಗಳು ಗೋಚರಿಸಿದೆ.
ನವದೆಹಲಿ(ಮೇ.11) ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತಾ ಅನ್ನೋ ಹಲವು ಪ್ರಶ್ನೆಗಳಿಗೆ ಕೆಲ ಸೂಚನೆಗಳು ಸಿಗುತ್ತಿದೆ. ಕಾರಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯರು ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೇ ಮೊದಲ ಭಾರಿಗೆ ಭಾರತದ ದ್ವಜ ಹಾರಾಡಿದೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋಗಳು ಭಾರಿ ವೈರಲ್ ಆಗಿದ್ದು, ಪಾಕಿಸ್ತಾನದ ಆತಂಕ ಹೆಚ್ಚಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆ ಭುಗಿಲೆದ್ದಿದೆ. ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ತುತ್ತು ಅನ್ನಕ್ಕೂ ಪರದಾಡ, ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನ, ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀರ್‌ಪುರ್ ಜಿಲ್ಲೆಯ ಸ್ಕಿರ್ಮಿಶ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಹಲವರು ಗಾಯಗೊಂಂಡಿದ್ದಾರೆ. ಪಾಕಿಸ್ತಾನ ಪೊಲೀಸರು ಕರ್ಫ್ಯೂ ಜಾರಿ ಮಾಡಿದ್ದಾರೆ.
undefined
ಪಾಕ್‌ನಿಂದ ಮುಕ್ತಿಗೊಳಿಸಿ ಭಾರತದ ಜೊತೆ ವಿಲೀನಗೊಳಿಸಿ, ಹೆಚ್ಚಾಯ್ತು PoK ಜನರ ಬೇಡಿಕೆ!
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಇಲ್ಲಿನ ಜನರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆರೋಗ್ಯ ಸೌಲಭ್ಯವಿಲ್ಲ, ಸರ್ಕಾರದ ಯಾವುದೇ ಯೋಜನೆಗಳು ಈ ಭಾಗಕ್ಕೆ ಇಲ್ಲ. ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದ ಇಲ್ಲಿನ ಜನರು ಅಗತ್ಯವಸ್ತುಗಳ ಖರೀದಿಗೂ ಸಾಧ್ಯವಾಗುತ್ತಿಲ್ಲ. ಪ್ರತಿಭಟನಾ ನಿರತರನ್ನು ಪಾಕಿಸ್ತಾನ ಸೇನೆ ಹಾಗೂ ಪೊಲೀಸ್ ಬಂಧಿಸುತ್ತಿದೆ. 144 ಸೆಕ್ಷನ್ ಜಾರಿ ಮಾಡಿ ಜನರ ಮೇಲೆ ದಬ್ಬಾಳಿ ಮಾಡುತ್ತಿದೆ ಎಂದು ಯುನೈಟೆಡ್ ಕಾಶ್ಮೀರ ಪೀಪಲ್ ನ್ಯಾಶನಲ್ ಪಾರ್ಟಿ ಹೇಳಿದೆ.
ಇತ್ತೀಚಗಷ್ಟೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ, ತನಾಗಿಯೇ ಭಾರತದ ಜೊತೆ ಪಿಒಕೆ ವಿಲೀನಗೊಳ್ಳಲಿದೆ ಎಂದಿದ್ದರು. ಇತ್ತ ಕೇಂದ್ರ ಗೃಹ ಸಿಚವ ಅಮಿತ್ ಶಾ ಕೂಡ ಪಿಒಕೆ ನಮ್ಮದು ಎಂದು ಪುನರುಚ್ಚರಿಸಿದ್ದರು. ಇತ್ತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತು ಹೇಳಿಕೆ ನೀಡಿದ್ದರು. ಈ ಎಲ್ಲಾ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ತಿರುಗೇಟು ನೀಡಿದ್ದರು. ಪಾಕಿಸ್ತಾನ ಬಳೆ ತೊಟ್ಟು ಕೂತಿಲ್ಲ. ಅವರ ಬಳಿ ಅಣುಬಾಂಬ್ ಇದೆ ಎಂದು ಭಾರತಕ್ಕೆ ಎಚ್ಚರಿಸಿದ್ದರು. ಇತ್ತ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಆಯ್ಯರ್, ಪಾಕಿಸ್ತಾನವನ್ನು ಕಣಕುವುದು ಉತ್ತಮವಲ್ಲ, ಅವರ ಬಳಿ ಅಣುಬಾಂಬ್ ಇದೆ. ಪಾಕಿಸ್ತಾನವನ್ನು ಗೌರವುಯತವಾಗಿ ನೋಡಿದರೆ ಅವರು ಶಾಂತವಾಗುತ್ತಾರೆ ಎಂದು ಭಾರತಕ್ಕೆ ಎಚ್ಚರಿಸಿದ್ದರು.
ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದಿಂದ ಅಯೋಧ್ಯೆಗೆ ಬಂತು ಪವಿತ್ರ ಜಲ!