ಪಾಕ್‌ನಿಂದ ಮುಕ್ತಿಗೊಳಿಸಿ ಭಾರತದ ಜೊತೆ ವಿಲೀನಗೊಳಿಸಿ, ಹೆಚ್ಚಾಯ್ತು PoK ಜನರ ಬೇಡಿಕೆ!

By Suvarna NewsFirst Published Feb 16, 2024, 9:59 AM IST
Highlights

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನ ಪಾಕಿಸ್ತಾನ ಕಪಿಮುಷ್ಠಿಯಿಂದ ಮುಕ್ತಿಮಾಡಿ, ಭಾರತದ ಜೊತೆ ವಿಲೀನಕ್ಕೆ ಬಯಸುತ್ತಿದ್ದಾರೆ. ಈ ಮಾತನ್ನು ಪಾಕಿಸ್ತಾನ ಆಕ್ರಮಿತ ನಿವಾಸಿ, ಸಾಮಾಜಿಕ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಆಗ್ರಹಿಸಿದ್ದಾರೆ. ಇದು ನನ್ನ ಒಬ್ಬನ ನಿಲುವಲ್ಲ, ಸಂಪೂರ್ಣ ಪಾಕ್ ಆಕ್ರಮಿತ ಕಾಶ್ಮೀರ ಜನರ ಬೇಡಿಕೆ ಎಂದಿದ್ದಾರೆ.
 

ನವದೆಹಲಿ(ಫೆ.15) ನರೇಂದ್ರ ಮೋದಿ ಸರ್ಕಾರ  ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಬಹುತೇಕ ಬಗೆಹರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಇದರ ಬೆನ್ನಲ್ಲೇ ಸರ್ಕಾರವೇ ಹಲವು ಬಾರಿ ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಎಂದು ಏರು ಧ್ವನಿಯಲ್ಲೇ ಹೇಳಿದೆ. ಇತ್ತ PoK ಜನರು ಕೂಡ  ಭಾರತ ಜೊತೆ ವಿಲೀನವಾಗಲು ಪದೇ ಪದೇ ಬೇಡಿಕೆ ಇಡುತ್ತಿದ್ದಾರೆ. ಪಾಕಿಸ್ತಾನ ಕಪಿಮುಷ್ಠಿಯಿಂದ ನಮನ್ನು ಪ್ರಧಾನಿ ಮೋದಿ ರಕ್ಷಿಸಬೇಕು ಅನ್ನೋ ಒತ್ತಾಯವನ್ನು ಕಳೆದ ಹಲವು ವರ್ಷಗಳಿಂದ  PoK ಜನ ಬೇಡಿಕೆ ಮುಂದಿಡುತ್ತಲೇ ಇದ್ದಾರೆ. ಇದೀಗ  PoK ಸಾಮಾಜಿಕ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಆಕ್ರಮಿತ ಜನ ಇದೀಗ ಭಾರತದ ಜೊತೆ ವಿಲೀನವಾಗಲು ಬಯಸುತ್ತಿದ್ದಾರೆ. ಪಾಕಿಸ್ತಾನ ಸೇನೆ ಇಲ್ಲಿ ಭಯೋತ್ಪಾದನೆ ಹರಡುತ್ತಿದೆ, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಆಯೂಬ್ ಮಿರ್ಜಾ ಹೇಳಿದ್ದಾರೆ. 

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರ ಅಧಿಕೃತವಾಗಿ ಪಾಕಿಸ್ತಾನ ನಾಗರೀಕರು. ಆದರೆ ಪಿಒಕೆಯನ್ನು ಪಾಕಿಸ್ತಾನ ತನ್ನ ದಾಳಕ್ಕೆ ತಕ್ಕಂತೆ ಬಳಸಿಕೊಂಡಿದೆ. ಇಲ್ಲಿನ ಸಮುದಾಯಗಳನ್ನು ರಕ್ಷಿಸುವ, ಇಲ್ಲಿ ಅಭಿವೃದ್ಧಿ ಮಾಡುವ ಕುರಿತು ಪಾಕಿಸ್ತಾನ ಯೋಚನೆ ಕೂಡ ಮಾಡಿಲ್ಲ. ಪಾಕಿಸ್ತಾನ ಸೇನೆ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುತ್ತಿದೆ. ಪಾಕ್ ಸೇನೆಯ ದೌರ್ಜನ್ಯಕ್ಕೆ ಇಲ್ಲಿನ ನಾಗರೀಕರು ಹೈರಾಣಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರ ಜನರು ನನ್ನ ಬಳಿ ವಿಶೇಷ ಮನವಿ ಮಾಡಿದ್ದಾರೆ. ಹೇಗಾದರೂ ಮಾಡಿ ಭಾರತದ ಜೊತೆ ನಮ್ಮನ್ನು ವಿಲೀನಗೊಳಿಸಿ. ಇದರಿಂದ ನಮ್ಮ ಮಕ್ಕಳ ಶಿಕ್ಷಣ, ಇಲ್ಲಿನ ಅಭಿವೃದ್ಧಿ, ಪ್ರವಾಸೋದ್ಯಮ ಎಲ್ಲವೂ ಉತ್ತಮವಾಗಲಿದೆ ಎಂಬು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಆಯೂಬ್ ಮಿರ್ಜಾ ಹೇಳಿದ್ದಾರೆ.

ನೆಹರು 2 ತಪ್ಪಿಂದಾಗಿ ಪಿಒಕೆ ದೇಶದ ಕೈತಪ್ಪಿತು: ಅಮಿತ್‌ ಶಾ; ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದೇ ಎಂದ ಗೃಹ ಸಚಿವ

ಪಾಕಿಸ್ತಾನದ ಆರ್ಥಿಕ ಸ್ಥಿತಿಗತಿ ಹೇಗಿದೆ ಅನ್ನೋದು ಜಗತ್ತಿಗೆ ತಿಳಿದಿದೆ. ಪಾಕಿಸ್ತಾನ ಪ್ರಮುಖ ಪ್ರಾಂತ್ಯಗಳೇ ನೀರು ಕಾಣದೆ ಸೊರಗುತ್ತಿದೆ. ಇನ್ನು ಮೂಲೆಯಲ್ಲಿರುವ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಇಷ್ಟು ವರ್ಷ ಮಾಡದ ಅಭಿವೃದ್ಧಿ ಈಗ ಕಾಣಸಲು ಸಾಧ್ಯವೇ? ಇಲ್ಲಿ ರಸ್ತೆಗಳೇ ಇಲ್ಲ. ಕೇವಲ ಪಾಕಿಸ್ತಾನ ಸೇನೆ ತನ್ನ ಅವಶ್ಯಕತೆಗೆ ನಿರ್ಮಿಸಿದ ರಸ್ತಗಳು ಬಿಟ್ಟರೆ ಇನ್ನೇನು ಇಲ್ಲ. ಕಳೆದ 10 ತಿಂಗಳಿನಿಂದ ಇಲ್ಲಿನ ನಿವೃತ್ತ ಸರ್ಕಾರಿ ಉದ್ಯೋಗಿಗಳಿಗೆ ಪಿಂಚಣಿ ಸಿಕ್ಕಿಲ್ಲ ಎಂದು ಮಿರ್ಜಾ ಹೇಳಿದ್ದಾರೆ.

ಪಾಕಿಸ್ತಾನ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆದರೆ ರಾಜಕೀಯ ಸ್ಥಿರತೆ ಕಾಣುತ್ತಿಲ್ಲ. ಸ್ಪಷ್ಟ ಬಹುಮತ ಇಲ್ಲ, ಅತೀ ಕಡಿಮೆ ಸ್ಥಾನ ಪಡೆದ ಕೈಗೊಂಬೆಗಳಿಗೆ ಪಾಕಿಸ್ತಾನ ಸೇನೆ ಬೆಂಬಲ ನೀಡುತ್ತಿದೆ. ಇತ್ತ ಭಾರತದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಭಾರತದಲ್ಲಿ ಸ್ಪಷ್ಟ ಬಹುಮತದ ಸರ್ಕಾರದ ನಿರೀಕ್ಷೆ ಇದೆ. ಭಾರತದ ಅಭಿವೃದ್ಧಿ ವೇಗವನ್ನು ಯೋಚಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತದ ಜೊತೆ ವಿಲೀನಗೊಳಿಸಿ ಆಕ್ರಮಿತ ಕಾಶ್ಮೀರದಲ್ಲಿರುವ ಸಮುದಾಯ ಅಭಿವೃದ್ಧಿಗೆ ನೆರವಾಗಬೇಕು ಎಂದು ಪಾಕ್ ಆಕ್ರಮಿತ ಜನರು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಆಯುಬ್ ಹೇಳಿದ್ದಾರೆ.

ಐತಿಹಾಸಿಕ ಬಿಲ್; J&K ಅಸೆಂಬ್ಲಿಯಲ್ಲಿ ಕಾಶ್ಮೀರಿ ಪಂಡಿತರು, PoK ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದ ಕೇಂದ್ರ!
 

click me!