ಕೊರೋನಾ ಲಸಿಕೆ ಪಾಕ್‌ವಾಕ್ ಬಿಡುಗಡೆ ಮಾಡಿದ ಪಾಕಿಸ್ತಾನ..!

By Suvarna NewsFirst Published Jun 2, 2021, 2:31 PM IST
Highlights
  • ಪಾಕಿಸ್ತಾನದಲ್ಲಿ ಸ್ಥಳೀಯ ಕೊರೋನಾ ಲಸಿಕೆ ಬಿಡುಗಡೆ
  • ಡ್ರ್ಯಾಗನ್ ರಾಷ್ಟ್ರದ ನೆರವಿನೊಂದಿಗೆ ಲಸಿಕೆ ಅಭಿವೃದ್ಧಿ

ಇಸ್ಲಮಾಬಾದ್(ಜೂ.02): ಪಾಕಿಸ್ತಾನ ಮಂಗಳವಾರ ಚೀನಾದ ನೆರವಿನೊಂದಿಗೆ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಬಿಡುಗಡೆ ಮಾಡಿದೆ. ಚೀನಾದ ಸಹಾಯದಿಂದ ಅಭಿವೃದ್ಧಿಪಡಿಸಿದ ‘ಪಾಕ್‌ವಾಕ್’ಲಸಿಕೆ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಧಾನಿಯ ವಿಶೇಷ ಸಹಾಯಕ ಡಾ.ಫೈಸಲ್ ಸುಲ್ತಾನ್ ಪ್ರಕಟಿಸಿದ್ದಾರೆ.

ಚೀನಾಕ್ಕೆ ಧನ್ಯವಾದ ಹೇಳಿದ ಸುಲ್ತಾನ್, "ಚೀನಾ ಈಗಾಗಲೇ ಸ್ನೇಹಿತನಾಗಿದ್ದು, ಕೊರೋನವೈರಸ್ ಪಾಕಿಸ್ತಾನವನ್ನು ಕಾಡಿದಾಗ ನೆರವಿನೊಂದಿಗೆ ಮುಂದೆ ಬಂದಿದೆ ಎಂದು ಹೇಳಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ಅಭಿವೃದ್ಧಿಯನ್ನು ಅವರು ಶ್ಲಾಘಿಸಿದ್ದಾರೆ.

ನೆರೆ ದೇಶಗಳ ಮುಸ್ಲಿಮೇತರ ವ್ಯಕ್ತಿಗಳಿಂದ ಪೌರತ್ವಕ್ಕೆ ಅರ್ಜಿ ಆಹ್ವಾನಿಸಿದ ಕೇಂದ್ರ ಸರ್ಕಾರ!

ಕಚ್ಚಾ ವಸ್ತುಗಳಿಂದ ಲಸಿಕೆ ಅಭಿವೃದ್ಧಿಪಡಿಸುವುದು ಸುಲಭದ ಕೆಲಸವಲ್ಲ. ನಾವು ಎನ್‌ಐಹೆಚ್‌ನಲ್ಲಿ ಲಸಿಕೆ ಅಭಿವೃದ್ಧಿಪಡಿಸಿದ ಜನರ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಡಾ ಸುಲ್ತಾನ್ ಹೇಳಿದ್ದಾರೆ.

ಪಾಕ್‌ವಾಕ್ ಚೀನಾದ ಕ್ಯಾನ್ಸಿನೊ ಲಸಿಕೆಯ ಸ್ಥಳೀಯ ಆವೃತ್ತಿಯಾಗಿದೆ. ಲಸಿಕೆಯನ್ನು ಪಾಕಿಸ್ತಾನದಲ್ಲಿ ತುಂಬಿಸಿ ಪ್ಯಾಕ್ ಮಾಡಲಾಗುವುದು ಮತ್ತು ಪಾಕ್‌ವಾಕ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

click me!