
ಟೋಕಿಯೋ(ಜೂ.02): ಕೋವಿಡ್ನಿಂದ ಬಚಾವ್ ಮಾಡಲು 12-15 ವಯೋಮಾನದ ಮಕ್ಕಳಿಗೂ ಅಮೆರಿಕದ ಫೈಝರ್ ಲಸಿಕೆ ನೀಡಲು ಜಪಾನ್ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
2,260 ಮಕ್ಕಳ ಮೇಲೆ ಫೈಝರ್ ಲಸಿಕೆ ಪ್ರಯೋಗಿಸಲಾಗಿತ್ತು. 18 ಮಕ್ಕಳ ಹೊರತುಪಡಿಸಿ ಇವರಲ್ಲಿ ಯಾರ ಮೇಲೂ ಅಡ್ಡಪರಿಣಾಮ ಕಂಡುಬಂದಿರಲಿಲ್ಲ. ಹೀಗಾಗಿ ಮಕ್ಕಳಿಗೆ ತನ್ನ ಲಸಿಕೆ ಸುರಕ್ಷಿತ ಎಂದು ಫೈಝರ್ ಹೇಳಿತ್ತು. ಈಗಾಗಲೇ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದಲ್ಲಿ ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ಲಭಿಸಿದೆ. ಇದರ ಬೆನ್ನಲ್ಲೇ ಜಪಾನ್ ಕೂಡ ಅನುಮೋದಿಸಿದೆ.
ಜಪಾನ್ನಲ್ಲಿ ಸದ್ಯ ವೈದ್ಯಕೀಯ ಸಿಬ್ಬಂದಿ, ಹಿರಿಯ ನಾಗರಿಕರು ಸೇರಿ ಇನ್ನಿತರ ವರ್ಗಗಳಿಗೆ ಲಸಿಕೆ ಅಭಿಯಾನ ನಡೆಯುತ್ತಿದೆ. ಜೊತೆಗೆ ಜಪಾನ್ನ ಒಟ್ಟಾರೆ ಜನಸಂಖ್ಯೆ ಪೈಕಿ ಕೇವಲ ಶೇ.6ರಷ್ಟುಮಂದಿ ಮಾತ್ರವೇ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.
ಉದ್ದಿಮೆಗಳಿಗೆ ಆಕ್ಸಿಜನ್ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!
ಏತನ್ಮಧ್ಯೆ, ಜುಲೈನಲ್ಲಿ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಅವಧಿ ಒಳಗಾಗಿ ಹಿರಿಯ ನಾಗರಿಕರೆಲ್ಲರಿಗೂ ಲಸಿಕೆ ನೀಡಲಾಗುತ್ತದೆ ಎಂದು ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ