ಇಸ್ರೇಲ್ ಯುದ್ಧ: ಬಾಂಬ್ ಶೆಲ್ಟರ್‌ಗೆ ಬರುತ್ತಿದ್ದಂತೆ ನಾವಿದ್ದ ಮನೆ ಧ್ವಂಸವಾಗಿದ್ದು ತಿಳಿಯಿತು

By Anusha KbFirst Published Oct 12, 2023, 11:48 AM IST
Highlights

ಹಮಾಸ್‌ ಉಗ್ರರ ದಾಳಿಯ ನಂತರ ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ ಭಾರತ ಮೂಲದ 32 ವರ್ಷದ ಟೆಕ್ಕಿ ಹಾಗೂ ಅವರ ಗರ್ಭಿಣಿ ಪತ್ನಿ ಯುದ್ಧಪೀಡಿತ ಇಸ್ರೇಲ್‌ನಲ್ಲಾದ ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ.

ಮೀರತ್‌: ಹಮಾಸ್‌ ಉಗ್ರರ ದಾಳಿಯ ನಂತರ ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ ಭಾರತ ಮೂಲದ 32 ವರ್ಷದ ಟೆಕ್ಕಿ ಹಾಗೂ ಅವರ ಗರ್ಭಿಣಿ ಪತ್ನಿ ಯುದ್ಧಪೀಡಿತ ಇಸ್ರೇಲ್‌ನಲ್ಲಾದ ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ.  ಆಕ್ಟೋಬರ್ 7 ಮುಂಜಾನೆ ಕಿವಿಗಡಚ್ಚಿಕ್ಕುವ ಸದ್ದು ನಮ್ಮನ್ನು ನಿದ್ದೆಯಿಂದ ಬೆಚ್ಚಿ ಬೀಳುವಂತೆ ಮಾಡಿತ್ತು. ಸ್ವಲ್ಪ ಸಮಯದೊಳಗೆ ನಾವು ನಮ್ಮ ವಸತಿ ಪ್ರದೇಶವನ್ನು ಖಾಲಿ ಮಾಡಿ  ಜುಕರ್‌ಬರ್ಗ್ ಇನ್‌ಸ್ಟಿಟ್ಯೂಟ್ ಫಾರ್ ವಾಟರ್ ರಿಸರ್ಚ್‌ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿರುವ  ಆಶ್ರಯ ಕೇಂದ್ರಕ್ಕೆ ಬಂದೆವು ಇಲ್ಲಿ ನಾವೀಗ ಸುರಕ್ಷಿತವಾಗಿದ್ದೇವೆ ಎಂದು ಪ್ರಸ್ತುತ ಇಸ್ರೇಲ್‌ನ ಬಾಂಬ್ ಶೆಲ್ಟರ್ ಕೇಂದ್ರದಲ್ಲಿ ಸುರಕ್ಷಿತವಾಗಿರುವ ಆರು ತಿಂಗಳ ಗರ್ಭಿಣಿ ಭಾರತದ ಉತ್ತರಪ್ರದೇಶದ ಮೂಲದ ಜೈದೀಪ್ ಕೌರ್ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿ ಫಜೀತಿಗೀಡಾದ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟರು.

ಮನೆಯಿಂದ ಬಾಂಬ್ ಶೆಲ್ಟರ್ಗೆ (Bomb Shelter) ಬರುವ ವೇಳೆ ಅಗತ್ಯವಿರುವ ತಿನಿಸುಗಳನ್ನಷ್ಟೇ ನಾವು ಜೊತೆಗೆ ತರಬಹುದು. ಈ ಬಾಂಬ್ ಶೆಲ್ಟರ್‌ಗೆ ಬಂದ ನಂತರ ನಮಗೆ ತಿಳಿಯಿತು ನಾವು ವಾಸ ಮಾಡುತ್ತಿದ್ದ ಕಾಂಕ್ರೀಟ್ ಮನೆ ಬಾಂಬ್ ದಾಳಿಯಿಂದ ಸಂಪೂರ್ಣ ಧ್ವಂಸವಾಗಿದೆ ಎಂಬುದು. ಈ ಬಾಂಬ್ ಶೆಲ್ಟರ್‌ ಕೇಂದ್ರದ ಕಾರಣದಿಂದ ನಾವು ಬದುಕುಳಿದೆವು ಈ ಶೆಲ್ಟರ್‌ನಲ್ಲಿ ಒಟ್ಟು ನಾವು 50 ಜನರಿದ್ದೇವೆ ಎಂದು ಜೈದೀಪ್ ಕೌರ್ (Jaideep Kaur) ಹೇಳಿದ್ದಾರೆ. 

ವರ್ಷದ ಮೊದಲೇ ಪ್ಲ್ಯಾನ್‌ ಆಗಿತ್ತಾ ಹಮಾಸ್‌ ಉಗ್ರರ ದಾಳಿ? ಈಜಿಪ್ಟ್‌ ಎಚ್ಚರಿಕೆಯನ್ನೂ ನಿರ್ಲಕ್ಷ್ಯ ಮಾಡಿದ್ದ ಇಸ್ರೇಲ್‌!

ಪ್ರಸ್ತುತ ಆರು ತಿಂಗಳ ಗರ್ಭಿಣಿಯಾಗಿರುವ ಜೈದೀಪ್ ಕೌರ್ ಅವರು ತನ್ನ ಪತಿ ಮತ್ತು ಮೂರು ವರ್ಷದ ಮಗಳೊಂದಿಗೆ ಗಾಜಾ ಪಟ್ಟಿಯಿಂದ ಸುಮಾರು 74 ಕಿಮೀ ದೂರದಲ್ಲಿರುವ ದಕ್ಷಿಣ ಇಸ್ರೇಲ್‌ನ (South Israel) ಸ್ಡೆ ಬೋಕರ್‌ ಎಂಬ ಪ್ರದೇಶದಲ್ಲಿದ್ದಾರೆ. ಉತ್ತರಪ್ರದೇಶದ ಅಮ್ರೋಹಾ ಮೂಲದವರಾದ ಇವರು ಇಂದು ಇಸ್ರೇಲ್‌ನಿಂದ ಭಾರತಕ್ಕೆ ಹೆರಿಗೆಯ ಕಾರಣಕ್ಕಾಗಿ ವಿಮಾನ ಹತ್ತಬೇಕಿತ್ತು. ಆದರೆ ಈ ಇಸ್ರೇಲ್ ಹಮಾಸ್ ದಾಳಿ (Hamas Attack) ನಮ್ಮ ಯೋಜನೆಯನ್ನು ತಲೆಕೆಳಗಾಗಿಸಿತ್ತು ಮುಂದೆ ಏನಾಗುವುದು ನೋಡೋಣ ಎಂದು ಅವರು ಹೇಳಿದ್ದಾರೆ. 

ಅದೃಷ್ಟವಶಾತ್, ನಾವು ಈ ಬಾಂಬ್‌ ಆಶ್ರಯ ಕೇಂದ್ರದೊಳಗೆಯೇ ವೈ-ಫೈ ಸೌಲಭ್ಯವನ್ನು ಹೊಂದಿದ್ದು, ಈ ಭಯಾನಕ ದಾಳಿಯ ದೃಶ್ಯಾವಳಿಗಳನ್ನು ನೋಡುತ್ತಿದ್ದೇವೆ. ಆದರೆ ಈಗ ಗರ್ಭಾಧಾರಣೆಯ ಕಾರಣಕ್ಕೆ ಈ ದೃಶ್ಯಗಳು ನನ್ನನ್ನು ಇನ್ನಷ್ಟು ಆತಂಕಕ್ಕೆ ದೂಡಬಹುದು ಎಂಬ ಕಾರಣದಿಂದ ಪತಿ ನನ್ನನ್ನು ಈ ದೃಶ್ಯಗಳನ್ನು ನೋಡದಂತೆ ಫೋನ್ ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಈ ಯುದ್ಧ ಪರಿಸ್ಥಿತಿ ಬೇಗ ಕೊನೆಯಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ನಾವು ಭಾರತದಲ್ಲಿ ಶೀಘ್ರವೇ ನಮ್ಮ ಕುಟುಂಬವನ್ನು ಸೇರಲು ಬಯಸುತ್ತೇವೆ. ಈಗ ನಮಗೆ ಫೋನ್ ಅಥವಾ ವಾಟ್ಸಾಪ್‌ನಲ್ಲಿ ಕುಟುಂಬದೊಂದಿಗೆ ಮಾತನಾಡಲು ಸಾಧ್ಯವಿಲ್ಲ. ಈಗ ನಮ್ಮ ಏಕೈಕ ಆಯ್ಕೆ ಫೇಸ್‌ಟೈಮ್‌ ಎಂದು ಅವರು ಹೇಳಿದರು.

ಗಾಜಾ ಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ ಎಂದ ಇಸ್ರೇಲ್‌: ಬಾಹ್ಯ ಸಂಪರ್ಕ ಕಳಕೊಂಡ ಹಮಾಸ್‌

ಆದರೆ ಇತ್ತ ಅಮ್ರೋಹ್‌ನಲ್ಲಿ ಜೈ ದೀಪ್‌ ಕೌರ್ ಕುಟುಂಬಸ್ಥರು ಗಾಬರಿಯಾಗಿದ್ದು,  ಮೂರು ದಿನಗಳಿಂದ ಅವರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದಿದ್ದರು. ಆದರೆ  ಮಂಗಳವಾರ 11 ಗಂಟೆಗೆ ನಾನು ಹಲವು ವಿಫಲ ಪ್ರಯತ್ನಗಳ  ನಂತರ ಆಕೆಯನ್ನು ಸಂಪರ್ಕಿಸಿದೆ. ಆಕೆಯ ಧ್ವನಿ ಕೇಳಿ ನನಗೆ ಸಮಾಧಾನವಾಯ್ತು, ನನ್ನ ಮಗಳು ಅಳಿಯ ಮೊಮ್ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ನೆಮ್ಮದಿ ಆಯ್ತು. ಅವರು ಸುರಕ್ಷಿತವಾಗಿ ಮರಳಲು ಭಾರತ ಸರ್ಕಾರ ನೆರವಾಗಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.  ಜೈದೀಪ್ ಪತಿ ರಾಂಧವ್ ರೂರ್ಕಿ (Roorkee IIT) ಐಐಟಿಯನ್ ಆಗಿದ್ದು, ಪ್ರಸ್ತುತ ಇಸ್ರೇಲ್‌ನಲ್ಲಿರುವ  ಜುಕರ್‌ಬರ್ಗ್ ಇನ್‌ಸ್ಟಿಟ್ಯೂಟ್ ಫಾರ್ ವಾಟರ್ ರಿಸರ್ಚ್‌ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. 

ಇಸ್ರೇಲ್‌ ಮೇಲೆ ಲೆಬನಾನ್‌ನಿಂದಲೂ ದಾಳಿ: ಇಸ್ರೇಲ್ ದಾಳಿಗೆ ಹಮಾಸ್‌ ಮುಖ್ಯಸ್ಥನ ಕುಟುಂಬವೂ ಫಿನಿಶ್

click me!