ಇಸ್ರೇಲ್ ಹಮಾಸ್ ಯುದ್ಧ: ಇಸ್ಲಾಮಿಕ್‌ ಒಕ್ಕೂಟದ ತುರ್ತು ಸಭೆ

By Kannadaprabha NewsFirst Published Oct 12, 2023, 9:00 AM IST
Highlights

ಗಾಜಾ ಪ್ರದೇಶದ ಮೇಲಿನ ಇಸ್ರೇಲ್‌ ದಾಳಿ ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ತಕ್ಷಣವೇ ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟದ ಸಭೆ ಕರೆಯಬೇಕು ಎಂದು ಒಕ್ಕೂಟದ ಸದಸ್ಯ ದೇಶಗಳಾದ ಇರಾನ್‌ ಮತ್ತು ಸೌದಿ ಅರೇಬಿಯಾ ಒತ್ತಾಯಿಸಿವೆ.

ದುಬೈ: ಗಾಜಾ ಪ್ರದೇಶದ ಮೇಲಿನ ಇಸ್ರೇಲ್‌ ದಾಳಿ ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ತಕ್ಷಣವೇ ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟದ ಸಭೆ ಕರೆಯಬೇಕು ಎಂದು ಒಕ್ಕೂಟದ ಸದಸ್ಯ ದೇಶಗಳಾದ ಇರಾನ್‌ ಮತ್ತು ಸೌದಿ ಅರೇಬಿಯಾ ಒತ್ತಾಯಿಸಿವೆ. ಜೊತೆಗೆ ‘ಹಮಾಸ್‌ ದಾಳಿಯ ಹಿಂದೆ ಇರಾನ್‌ ಕೈವಾಡ ಇದೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಆದರೆ ಈ ದಾಳಿಯಲ್ಲಿ ಇರಾನ್‌ ದೇಶದ ಯಾವುದೇ ಕೈವಾಡವಿಲ್ಲ ಎಂದು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ಒಂದು ವೇಳೆ ಈ ತಪ್ಪು ಗ್ರಹಿಕೆಯಿಂದ ಯಾರಾದರೂ ಇರಾನ್‌ ದೇಶದ ಮೇಲೆ ಯುದ್ಧಕ್ಕೆ ಬಂದರೆ ಅವರಿಗೆ ಪ್ರತ್ಯುತ್ತರ ಕೊಡಲು ನಮ್ಮ ಸೇನೆ ಸನ್ನದ್ಧವಾಗಿದೆ’ ಎಂದು ಇರಾನ್‌ ಎಚ್ಚರಿಸಿದೆ.

ದುಬೈ: ಗಾಜಾ ಪ್ರದೇಶದ ಮೇಲಿನ ಇಸ್ರೇಲ್‌ ದಾಳಿ ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ತಕ್ಷಣವೇ ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟದ ತುರ್ತು ಸಭೆ ನಡೆಸಲಾಗಿದೆ. ಅರಬ್ ಲೀಗ್ ಸೆಕ್ರೆಟರಿ ಜನರಲ್ ಅಹ್ಮದ್ ಅಬೌಲ್-ಘೀಟ್ (ಎಲ್) ಮತ್ತು ಮೊರಾಕೊದ ವಿದೇಶಾಂಗ ಸಚಿವ ನಾಸರ್ ಬೌರಿಟಾ ಅವರು ನಿನ್ನೆ ಈಜಿಫ್ಟ್‌ನ ಕೈರೋದಲ್ಲಿ ನಡೆದ ಅರಬ್ ಲೀಗ್‌ನ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಭೆಯ ನಂತರ ಮಾತನಾಡಿದ, ಅರಬ್ ಲೀಗ್ ಸೆಕ್ರೆಟರಿ ಜನರಲ್, ಅಹ್ಮದ್ ಅಬೌಲ್ ಘೀಟ್, ಗಾಜಾದಲ್ಲಿ ಪ್ಯಾಲೆಸ್ತೀನಿಯರಿಗೆ ನಾವು ನಮ್ಮ ಒಗ್ಗಟ್ಟನ್ನು ತೋರಿಸುತ್ತಿದ್ದೇವೆ. ಏಕೆಂದರೆ ಅವರು ಹತ್ಯಾಕಾಂಡಕ್ಕೆ ಒಳಗಾಗುತ್ತಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.  ಇಸ್ರೇಲಿ ಬಾಂಬ್ ದಾಳಿಯನ್ನು ನಿಲ್ಲಿಸಲು ಅರಬ್ ಪ್ರಯತ್ನಗಳನ್ನು ಚರ್ಚಿಸಲು ಪ್ಯಾಲೇಸ್ತೀನ್‌ ಪ್ರಾಧಿಕಾರ ಮನವಿ ಮಾಡಿದ ನಂತರ ಈ ಸಭೆ ನಡೆಸಲಾಗಿದೆ.

ಭಾರತದ ಮಧ್ಯಪ್ರವೇಶಕ್ಕೆ ಪ್ಯಾಲೆಸ್ತಿನ್‌ ರಾಯಭಾರಿ ಆಗ್ರಹ
ನವದೆಹಲಿ: ಭಾರತವು ಇಸ್ರೇಲ್‌ ಹಾಗೂ ಪ್ಯಾಲೆಸ್ತಿನ್‌ ಎರಡೂ ದೇಶಕ್ಕೆ ಮಿತ್ರ ರಾಷ್ಟ್ರವಾಗಿದ್ದು ಭಾರತದ ಪ್ರಧಾನಿ ಕೂಡಲೇ ಮಧ್ಯಪ್ರವೇಶಿಸಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಭಾರತದಲ್ಲಿ ನಿಯೋಜಿತರಾಗಿರುವ ಪ್ಯಾಲೆಸ್ತಿನ್‌ ರಾಯಭಾರಿ (Palestine Diplomat) ಅಬು ಆಲ್ಹೈಜಾ ಕರೆ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅಬು, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಇಸ್ರೇಲ್‌ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಮೇ.ಜ. ಅಮೋಸ್‌ ಯಾಡ್ಲಿನ್‌ ಕೂಡಾ, ಇಸ್ರೇಲ್‌- ಹಮಾಸ್‌ ಸಂಘರ್ಷ (Israel Hamas Conflict) ಇತ್ಯರ್ಥಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮಧ್ಯಸ್ಥಿಕೆ ಮತ್ತು ಇಂಥ ಯಾವುದೇ ‘ಮೋದಿ ಪವಾಡ’ವನ್ನು ಇಸ್ರೇಲ್‌ ಸ್ವಾಗತಿಸಲಿದೆ ಎಂದು ಹೇಳಿದ್ದರು.

ಗಾಜಾ ಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ ಎಂದ ಇಸ್ರೇಲ್‌: ಬಾಹ್ಯ ಸಂಪರ್ಕ ಕಳಕೊಂಡ ಹಮಾಸ್‌

ಇಸ್ರೇಲ್‌ಗೆ ಬಂತು ಅಮೆರಿಕದ ಮೊದಲ ಶಸ್ತ್ರಾಸ್ತ್ರ ಸರಕು

ಟೆಲ್‌ ಅವಿವ್: ಹಮಾಸ್‌ ಉಗ್ರರ (Hamas terrorist) ದಾಳಿ ಎದುರಿಸುತ್ತಿರುವ ಇಸ್ರೇಲ್‌ ದೇಶಕ್ಕೆ ಅಮೆರಿಕ ಬಹಿರಂಗವಾಗಿ ಬೆಂಬಲ ನೀಡಿದ ಬೆನ್ನಲ್ಲೇ ಅಮೆರಿಕದ ಮೊದಲ ಶಸ್ತ್ರಾಸ್ತ್ರ ಹೊತ್ತ ವಿಮಾನ ಬುಧವಾರ ಇಸ್ರೇಲ್‌ ತಲುಪಿದೆ. ಈ ವಿಮಾನದಲ್ಲಿ ಅಮೆರಿಕ ಇಸ್ರೇಲ್‌ಗೆ ಬೇಕಿರುವ ಆಯುಧಗಳನ್ನೆಲ್ಲ ಪೂರೈಕೆ ಮಾಡಿದೆ ಎಂದು ಇಸ್ರೇಲ್‌ ರಕ್ಷಣಾ ವಕ್ತಾರ ತಿಳಿಸಿದ್ದಾರೆ. ಇದರ ಜೊತೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತ ಹಲವು ವಿಮಾನಗಳು ಇಸ್ರೇಲ್ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಹಮಾಸ್‌ ಇಸ್ರೇಲ್ ಕದನದಲ್ಲಿ ಈವರೆಗೂ 14 ಅಮೆರಿಕನ್ನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಿಳಿಸಿದ್ದು, ಹಲವರು ಕಾಣೆಯಾಗಿದ್ದಾರೆ. ಜೊತೆಗೆ ಹಮಾಸ್‌ ವಶದಲ್ಲಿ ಹಲವು ಅಮೆರಿಕನ್ನರು ಇದ್ದಾರೆ ಎನ್ನಲಾಗಿದೆ.

ಯುದ್ಧ ಸೇರಲು ವಿದೇಶಗಳಿಂದ ಇಸ್ರೇಲಿಗಳು ತವರಿಗೆ ದೌಡು!

ಲಾಸ್‌ ಏಂಜಲೀಸ್‌: ತವರು ದೇಶದಲ್ಲಿ ಸಂಘರ್ಷ, ಯುದ್ಧ ಆರಂಭವಾದಾಗ ವಿದೇಶದಲ್ಲಿರುವ ಆ ದೇಶಗಳ ಪ್ರಜೆಗಳು ಸದ್ಯಕ್ಕೆ ತವರಿಗೆ ಹೋಗದೇ ಇರುವುದು ಸೂಕ್ತ ಎಂದು ಭಾವಿಸುತ್ತಾರೆ. ಆದರೆ ಹಮಾಸ್‌ ಉಗ್ರರ ದಾಳಿಗೆ ತುತ್ತಾಗಿರುವ ಇಸ್ರೇಲಿಗಳು ಮಾತ್ರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದೇಶ ತಮ್ಮ ಸೇವೆ ಬಯಸುತ್ತಿದೆ ಎಂದು ಅರ್ಥೈಸಿಕೊಂಡಿರುವ ವಿದೇಶಗಳಲ್ಲಿರುವ ಸಾವಿರಾರು ಇಸ್ರೇಲಿಗಳು ತವರಿನತ್ತು ದೌಡಾಯಿಸುತ್ತಿದ್ದಾರೆ. ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿ ಹೋರಾಡುತ್ತೇವೆ, ಇಲ್ಲವೇ ಇಸ್ರೇಲ್‌ ಸೈನಿಕರಿಗೆ ನೆರವಾಗುತ್ತೇವೆ ಎಂದು ಅಥೆನ್ಸ್‌, ನ್ಯೂಯಾರ್ಕ್‌ ಇನ್ನಿತರ ದೇಶಗಳಲ್ಲಿ ನೆಲೆಸಿರುವ ಇಸ್ರೇಲಿಗರು ವಿಮಾನ ನಿಲ್ದಾಣಗಳತ್ತ ದಾಂಗುಡಿ ಇಡುತ್ತಿದ್ದಾರೆ. ಸಹಾಯ ಮಾಡುವುದಾಗಿ ಆನ್‌ಲೈನ್‌ ಚಾಟ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ನಲ್ಲಿ ಪ್ರತಿ ಪ್ರಜೆಯೂ ಕನಿಷ್ಠ ಸೇನಾ ಕರ್ತವ್ಯ ನಿರ್ವಹಿಸುವುದು ಕಡ್ಡಾಯ.

ಇಸ್ರೇಲ್‌ ಮೇಲೆ ಲೆಬನಾನ್‌ನಿಂದಲೂ ದಾಳಿ: ಇಸ್ರೇಲ್ ದಾಳಿಗೆ ಹಮಾಸ್‌ ಮುಖ್ಯಸ್ಥನ ಕುಟುಂಬವೂ ಫಿನಿಶ್

click me!