ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತುಕೊಂಡು 4ನೇ ಏರ್ ಇಂಡಿಯಾ ವಿಮಾನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಒಟ್ಟು 274 ಪ್ರಯಾಣಿಕರು ಈ ನಾಲ್ಕನೇ ವಿಮಾನದಲ್ಲಿ ತಾಯ್ನಾಡಿಗೆ ವಾಪಸಾಗಿದ್ದಾರೆ.
ನವದೆಹಲಿ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತುಕೊಂಡು 4ನೇ ಏರ್ ಇಂಡಿಯಾ ವಿಮಾನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಒಟ್ಟು 274 ಪ್ರಯಾಣಿಕರು ಈ ನಾಲ್ಕನೇ ವಿಮಾನದಲ್ಲಿ ತಾಯ್ನಾಡಿಗೆ ವಾಪಸಾಗಿದ್ದಾರೆ. ಸಂಕಷ್ಟ ಸಮಯದಲ್ಲಿ ಆಪರೇಷನ್ ಅಜಯ್ ಕಾರ್ಯಾಚರಣೆ ಮೂಲಕ ತಮ್ಮನ್ನು ತವರಿಗೆ ಕರೆತಂದ ಕೇಂದ್ರ ಸರ್ಕಾರಕ್ಕೆ ಈ ಪ್ರಯಾಣಿಕರು ಧನ್ಯವಾದ ಹೇಳಿದ್ದಾರೆ. ಕೇಂದ್ರದ ರಾಜ್ಯಖಾತೆ ಸಚಿವ ವಿ.ಕೆ. ಸಿಂಗ್ ಇಸ್ರೇಲ್‌ನಿಂದ ಬಂದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಲ್ಲದೇ ಪ್ರತಿಯೊಬ್ಬರಿಗೂ ರಾಷ್ಟ್ರಧ್ವಜ ನೀಡಿ ಶುಭ ಹಾರೈಸಿದರು.
ಇಸ್ರೇಲ್‌ನಲ್ಲಿ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಮಾನಗಳು ಭಾರತೀಯರನ್ನು ಅಲ್ಲಿಂದ ದೇಶಕ್ಕೆ ಕರೆತರಲಿದ್ದಾರೆ ಎಂದು ಸಚಿವ ವಿಕೆ ಸಿಂಗ್ (VK singh) ಇದೇ ವೇಳೆ ಹೇಳಿದರು. ಇದು 4ನೇ ವಿಮಾನ ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಜೀವಕ್ಕೆ ಭಯವಿರುವ ಹಿನ್ನೆಲೆಯಲ್ಲಿ ನಾವು ಮತ್ತಷ್ಟು ವಿಮಾನಗಳು ಅಲ್ಲಿಂದ ಭಾರತೀಯರನ್ನು ಕರೆತರುವ ನಿರೀಕ್ಷೆಯಲ್ಲಿದ್ದೇವೆ. ಅಲ್ಲದೇ ಇಸ್ರೇಲ್‌ನಲ್ಲಿನ ಯುದ್ಧ ಸಿದ್ಧತೆಯ ವಾತಾವರಣದಿಂದ ನಮ್ಮವರು ಅಲ್ಲಿಗೆ ಹೊರೆಯಾಗಬಾರದು ಎಂದು ಬಯಸಿದ್ದರು, ಅಲ್ಲದೇ ಪರಿಸ್ಥಿತಿ ಸರಿ ಹೋದ ಮೇಲೆ ಮತ್ತೆ ಅಲ್ಲಿಗೆ ಹೋಗುವವರಿದ್ದಾರೆ ಎಂದು ಸಿಂಗ್ ಹೇಳಿದರು.
ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್ ದಾಳಿ, ಇಸ್ರೇಲ್ ಯುದ್ಧದ ನಿಯಮ ಪಾಲಿಸುತ್ತಿಲ್ಲ ಎಂದ ವಿಶ್ವಸಂಸ್ಥೆ
ಇನ್ನೊಂದು ವಿಮಾನ ಸೋಮವಾರ ಇಸ್ರೇಲ್‌ನಿಂದ (Israel) ಬರಲಿದ್ದು, ಯಾರು ಹೆದರುವುದು ಬೇಡ ಎಂದು ಸಿಂಗ್ ಜನರಿಗೆ ಮನವಿ ಮಾಡಿದರು. ಭಾರತಕ್ಕೆ ಬರಲು ನೋಂದಣಿ ಮಾಡಿರುವ ಪ್ರತಿಯೊಬ್ಬರನ್ನು ಕರೆತರುವವರೆಗೆ ನಮ್ಮ ಈ ಕಾರ್ಯಾಚರಣೆ ಕೆಲಸ ಮಾಡುತ್ತದೆ. ನೀವು ಇರುವಲ್ಲಿಂದಲೇ ನಾವು ಸೂಚಿಸಿದ ಸಲಹೆಗಳನ್ನು ಪಾಲಿಸಬೇಕು ಹೆದರುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ಇಸ್ರೇಲ್‌ನಿಂದ ಮರಳಿದ ಭಾರತೀಯ ವಿದ್ಯಾರ್ಥಿಯೊಬ್ಬರು ಮಾತನಾಡಿ, ಆರಂಭದಲ್ಲಿ ಸ್ಥಿತಿ ತುಂಬಾ ಭಯಾನಕವಾಗಿತ್ತು. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸರ್ಕಾರ ಹಾಗೂ ಸೇನೆ ತುಂಬಾ ಶಿಸ್ತು ಹಾಗೂ ಚುರುಕಿ ಕ್ರಮ ಕೈಗೊಳ್ಳುತ್ತಿದೆ ಹಾಗೆಯೇ ಈ ಸಂದರ್ಭದಲ್ಲಿ ಆಪರೇಷನ್ ಅಜಯ್ ಕಾರ್ಯಾಚರಣೆ ಮಾಡಿದ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದರು. ಟೆಲ್ ಅವಿವಾ (Tel Aviva) ಸಹಜವಾಗಿದೆ. ಆದರೆ ಇಸ್ರೇಲ್‌ನ ಉತ್ತರ ಹಾಗೂ ದಕ್ಷಿಣದಲ್ಲಿ ಯುದ್ಧದ ಸಾಧ್ಯತೆ ಇದೆ ಹೀಗಾಗಿ ನಾವು ಮರಳಿದೆವು, ಸರ್ಕಾರ ಒಳ್ಳೆ ಕೆಲಸ ಮಾಡಿದೆ, ಕೇವಲ 2 -3 ದಿನದಲ್ಲಿ ನಮಗೆ ಚನ್ನಾಗಿ ಸ್ಪಂದಿಸಿತು ಎಂದು ಸುಮಿತ್ ಎಂಬುವವರು ಹೇಳಿದರು.
ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್ ಉಗ್ರ ಸ್ಫೋಟಕ ಹೇಳಿಕೆ Video
| Delhi: Sumit, an Indian national who returned from Israel says, says, "In Tel Aviv the situation is normal. But in the south and north Israel, there are chances of war. That's why we returned... The government did a very good job. They responded very fast within 2-3… pic.twitter.com/dELnkmGWP0
— ANI (@ANI)ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದ ಮೊಸಾಬ್: ಕ್ರೈಸ್ತ್ರ ಧರ್ಮಕ್ಕೆ ಮತಾಂತರನಾಗಿದ್ದೇಕೆ..?
ನಾನು ಟೆಲ್ ಅವಿವಾ ವಿವಿಯಲ್ಲಿ ಎರಡು ವರ್ಷದಿಂದ ಇದ್ದೇನೆ, ಭಾರತೀಯ ರಾಯಭಾರಿ ತುಂಬಾ ಉತ್ತಮವಾಗಿ ಸಹಕರಿಸಿತು. ಈ ಕಾರ್ಯಾಚರಣೆಗೆ ಭಾರತ ಸರ್ಕಾರಕ್ಕೆ ಧನ್ಯವಾದಗಳು ಇದೊಂದು ತುಂಬಾ ಚುರುಕಾದ ಕಾರ್ಯಾಚರಣೆ ಎಂದು ಭಾರತಕ್ಕೆ ಮರಳಿದ ಪ್ರಿಯಾಗುಪ್ತ ಹೇಳಿದರು. 13 ರಂದು ಮೊದಲ ವಿಮಾನದಲ್ಲಿ 212 ಭಾರತೀಯರು ತಾಯ್ನಾಡಿಗೆ ಆಗಮಿಸಿದ್ದರು. ಇಸ್ರೇಲ್‌ನ ಬೆನ್ ಗುರಿಯೊನ್ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(International Airport) ಬಂದಿಳಿದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrashekar) ಆತ್ಮೀಯವಾಗಿ ಬರಮಾಡಿಕೊಂಡರು.
ಗಾಜಾ ಪಟ್ಟಿಯಲ್ಲಿ 1300 ಕಟ್ಟಡ ನಾಶ, 5540 ಮನೆಗಳಿಗೆ ಹಾನಿ: ವಿಶ್ವಸಂಸ್ಥೆ
| Fourth flight under Operation Ajay, carrying 274 Indian nationals reaches Delhi Airport from Israel. pic.twitter.com/q7c9c5rvG9
— ANI (@ANI)| Delhi: Dipender Pawari, an Indian national who returned from Israel says, "We were in Tel Aviv and that area is very safe. Initially, for the first two days, we were afraid, but the fear was more in the border area. There was no problem in Tel Aviv, but there was little… pic.twitter.com/wlbisM1w4W
— ANI (@ANI)