ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್‌ ದಾಳಿ, ಇಸ್ರೇಲ್‌ ಯುದ್ಧದ ನಿಯಮ ಪಾಲಿಸುತ್ತಿಲ್ಲ ಎಂದ ವಿಶ್ವಸಂಸ್ಥೆ

By Kannadaprabha News  |  First Published Oct 15, 2023, 11:24 AM IST

ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ ಯುದ್ಧ ನಿಯಮವನ್ನು ಪಾಲಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಕಿಡಿಕಾರಿದೆ


ವಿಶ್ವಸಂಸ್ಥೆ: ಹಮಾಸ್‌ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ ಯುದ್ಧ ನಿಯಮವನ್ನು ಪಾಲಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಕಿಡಿಕಾರಿದೆ. ಈ ಕುರಿತು ಮಾತನಾಡಿದ ವಿಶ್ವ ಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರಸ್‌, ‘ಗಾಜಾ ಪಟ್ಟಿಯ ಉತ್ತರ ಭಾಗದ ಜನರನ್ನು 24 ತಾಸಿನಲ್ಲಿ ಸ್ಥಳ ಖಾಲಿ ಮಾಡಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಗಾಜಾದಲ್ಲಿ ಜನರು ಆಹಾರ, ನೀರು, ವಸತಿ ಇಲ್ಲದೇ ಪರದಾಡುತ್ತಿದ್ದಾರೆ. ಅಲ್ಲಿನ ಆಸ್ಪತ್ರೆಗಳು ಈಗಾಗಲೇ ತುಂಬಿಹೋಗಿದ್ದು, ಹೊಸ ರೋಗಿಗಳಿಗೆ ಜಾಗವಿಲ್ಲ. ಎಂದು ಕಳವಳ ವ್ಯಕ್ತಪಡಿಸಿದರು.

ಜೊತೆಗೆ ಇಸ್ರೇಲ್‌ನಿಂದ ಆಕ್ರಮಿತವಾಗಿರುವ ನಡುವೆ ಲಕ್ಷ ಜನರ ಸ್ಥಳಾಂತರ ಅಸಾಧ್ಯ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನುಗಳನ್ನು ಇಸ್ರೇಲ್‌ ಪಾಲಿಸಬೇಕು. ಯುದ್ಧಕ್ಕೂ ಒಂದು ನಿಯಮ ಇರುತ್ತದೆ. ಇಸ್ರೇಲ್‌ ಅದನ್ನು ಪಾಲಿಸುತ್ತಿಲ್ಲ. ಯುದ್ಧದಲ್ಲಿ ಸಾಮಾನ್ಯ ಜನರ ಸುರಕ್ಷತೆಯನ್ನು ಕಾಪಾಡಬೇಕು ಹೊರತು ಜನರು, ಮಕ್ಕಳನ್ನು ಕವಚವಾಗಿ ಉಪಯೋಗಿಸಿಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಾಜಾ ಪಟ್ಟಿಗೆ ವಿಶ್ವ ಸಂಸ್ಥೆ ಪರಿಹಾರವನ್ನು ಒದಗಿಸಲಿದೆ ಎಂದರು.

Tap to resize

Latest Videos

ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್‌ ಉಗ್ರ ಸ್ಫೋಟಕ ಹೇಳಿಕೆ Video

ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್‌ ದಾಳಿ: ವೀಡಿಯೋ

ಇತ್ತ ಆಕ್ಟೋಬರ್‌7 ರಂದು ಇಸ್ರೇಲ್‌ ಗಡಿಯೊಳಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದ್ದ ಹಮಾಸ್‌ ಉಗ್ರರು (Hamas Terrorist) ಈ ವೇಳೆ ತಮ್ಮ ಎದುರಿಗೆ ಸಿಕ್ಕವರ ಪೈಕಿ ಒಬ್ಬರೂ ಬದುಕಬಾರದೆಂಬ ಹೀನ ಮನಸ್ಥಿತಿಯಿಂದ ದಾಳಿ ಮಾಡಿದ್ದರು. ಶೌಚಾಲಯದಲ್ಲಿ ಯಾರಾದರೂ ಇದ್ದರೆ ಅವರೂ ಸಾಯಬೇಕೆಂದು ದಾಳಿ ನಡೆಸಿದ್ದರು ಎಂಬ ವಿಷಯವು ವಿಡಿಯೋವೊಂದರಿಂದ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ಗಾಜಾಪಟ್ಟಿ ಪ್ರದೇಶದ ಬಳಿ ನೋವಾ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅದರ ಮೇಲೆ ದಾಳಿ ನಡೆಸಿದ್ದ ಉಗ್ರರು ಅದೊಂದೇ ಸ್ಥಳದಲ್ಲಿ ಮನಬಂದಂತೆ ಗುಂಡಿನ ದಾಳಿ  ನಡೆಸಿ 260 ಜನರ ಬಲಿ ಪಡೆದಿದ್ದರು. ಆ ಸ್ಥಳದಲ್ಲಿ ಒಬ್ಬರೇ ಒಬ್ಬರು ಕೂಡಾ ಉಳಿಯಬಾರದು ಎನ್ನುವ ಕಾರಣಕ್ಕೆ ಅಲ್ಲಿದ್ದ ತಾತ್ಕಾಲಿಕ ಶೌಚಾಲಯಗಳ ಮೇಲೂ ಗುಂಡು ಹಾರಿಸಿದರು. ದಾಳಿ ಬಳಿಕ ಶೌಚಾಲಯದೊಳಗೆ ಇದ್ದವರು ಬದುಕಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿ ತೆರಳಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದ ವಿಡಿಯೋವೊಂದರಿಂದ ಬಹಿರಂಗವಾಗಿದೆ.

ಗಾಜಾ ಪಟ್ಟಿಯಲ್ಲಿ 1300 ಕಟ್ಟಡ ನಾಶ, 5540 ಮನೆಗಳಿಗೆ ಹಾನಿ: ವಿಶ್ವಸಂಸ್ಥೆ

ಮಕ್ಕಳ ರಕ್ಷಿಸಿ ಪ್ರಾಣ ಬಿಟ್ಟ ದಂಪತಿ

ಟೆಲ್‌ ಅವಿವ್‌: ಹಮಾಸ್‌ ಉಗ್ರರು ದಾಳಿ ನಡೆಸುವ ಮುನ್ನ 10 ತಿಂಗಳ ಅವಳಿ ಮಕ್ಕಳನ್ನು ಬಚ್ಚಿಟ್ಟು ಅವರನ್ನು ಇಸ್ರೇಲಿನ ದಂಪತಿ ರಕ್ಷಿಸಿದ ಘಟನೆ ಇಸ್ರೇಲಲ್ಲಿ ನಡೆದಿದೆ. ಆದರೆ ಈ ದಾಳಿಯಲ್ಲಿ ದಂಪತಿ ಅಸುನೀಗಿದ್ದು, ಮಕ್ಕಳನ್ನು 12 ಗಂಟೆಗಳ ಬಳಿಕ ಭದ್ರತಾ ಪಡೆಗಳು ರಕ್ಷಿಸಿವೆ. ಹಮಾಸ್‌ ಉಗ್ರರು ಇಸ್ರೇಲ್‌ ಪ್ರವೇಶಿಸಿದ ಬಳಿಕ ಮನೆ ಮನೆಗೆ ನುಗ್ಗಿ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ಮನೆಯ ಮೇಲೆ ದಾಳಿಯಾಗುವ ಮೊದಲು ಇಟಾಯ್‌ ಮತ್ತು ಹದಾರ್‌ ಬೆರ್ಡಿಚೆಸ್ಕಿ ಎಂಬ ದಂಪತಿ ತಮ್ಮ 10 ತಿಂಗಳ ಅವಳಿ ಮಕ್ಕಳನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾರೆ. ಆದರೆ ದುರದೃಷ್ಟವಶಾತ್‌ ಉಗ್ರರು ನಡೆಸಿದ ದಾಳಿಯಲ್ಲಿ ಈ ಇಬ್ಬರು ಮೃತಪಟ್ಟಿದ್ದಾರೆ. ಉಗ್ರರನ್ನು ಹಿಮ್ಮೆಟ್ಟಿಸಿದ ಬಳಿಕ ರಕ್ಷಣಾ ಕರ್ಯಾಚರಣೆಯ ವೇಳೆ 12 ಗಂಟೆಗಳ ಬಳಿಕ ಈ ಮಕ್ಕಳನ್ನು ಸೈನಿಕರು ರಕ್ಷಿಸಿದ್ದು, ಮಕ್ಕಳಿಬ್ಬರು ಸುರಕ್ಷಿತವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

'ಬಿಸ್ಮಿಲ್ಲಾ' ಎಂದರೆ ಮಾತ್ರ ಮಗುವಿಗೆ ನೀರು: ಇಸ್ರೇಲ್‌ ಮಕ್ಕಳ ಒತ್ತೆಯಾಗಿರಿಸಿ ಹಮಾಸ್‌ ಉಗ್ರರ ಕ್ರೌರ್ಯ

ಶನಿವಾರ ಹಮಾಸ್‌ ಉಗ್ರರು ದಾಳಿ ನಡೆಸಬಹುದೆಂಬ ಸೂಚನೆಯೂ ಇಲ್ಲದ ಜನ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಹಠಾತ್‌ ದಾಳಿ ನಡೆಸಿದ ಉಗ್ರರು ಮಾರಣಹೋಮ ನಡೆಸಿದ್ದರು.

click me!