
ನ್ಯೂಯಾರ್ಕ್(ಜ.4): ಕಳೆದ ವರ್ಷ ಹ್ಯಾಲೋವೀನ್‌ಗಾಗಿ ಬ್ರಿಟನ್ ರಾಣಿ ಎಲಿಜಬೆತ್ ವೇಷ ಧರಿಸಿದ್ದ ಒಂದು ವರ್ಷದ ಮಗುವಿನ ಫೋಟೋವನ್ನು ಈಗ ಬ್ರಿಟನ್ ರಾಜ ಮನೆತನ ಗುರುತಿಸಿದ್ದು, ರಾಣಿ ಎಲಿಜಬೆತ್ II ಅವರು ಈ ಮಗುವಿಗೆ ಪತ್ರ ಬರೆದಿದ್ದಾರೆ. ಅಮೆರಿಕಾದ ಓಹಿಯೋದ ಜಲೈನ್ ಸದರ್‌ಲ್ಯಾಂಡ್ (Jalayne Sutherland) ಎಂಬ ಒಂದು ವರ್ಷದ ಮಗುವೇ ರಾಜಮನೆತನದ ಗಮನ ಸೆಳೆದ ಮುದ್ದು ಕಂದ. ಜಲೈನ್ ಸದರ್‌ಲ್ಯಾಂಡ್‌ನ ತಾಯಿ, ಕ್ಯಾಟ್ಲಿನ್ ಸದರ್‌ಲ್ಯಾಂಡ್ (Katelyn Sutherland), ಹ್ಯಾಲೋವೀನ್‌ಗಾಗಿ ತನ್ನ ಮಗಳು ಧರಿಸಿದ ವೇಷಭೂಷಣದ ಮುದ್ದಾದ ಫೋಟೋಗಳನ್ನು ಬ್ರಿಟನ್ ರಾಣಿ ಎಲಿಜಬೆತ್ IIಗೆ ಕಳುಹಿಸಿದ್ದಳು.
ಇದನ್ನು ನೋಡಿದ ರಾಣಿ ಅಚ್ಚರಿಯ ಜೊತೆ ಖುಷಿ ವ್ಯಕ್ತಪಡಿಸಿದ್ದಾರೆ. ಮುದ್ದಾದ ಮಗುವಿನ ಫೋಟೋಗೆ ಪ್ರತಿಯಾಗಿ ಪತ್ರ ಬರೆದ ರಾಣಿ ಆ ಪುಟ್ಟ ಮಗುವಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ. ತಾಯಿ ಕ್ಯಾಟ್ಲಿನ್ ತನ್ನ ಮಗಳ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಪುಟ್ಟ ಬಾಲಕಿ ಡಬ್ಬಲ್ ಬ್ರೆಸ್ಟೆಡ್ ಓವರ್ ಕೋಟ್ ಧರಿಸಿದ್ದು ರಾಣಿಯಂತೆ ಕಾಣಿಸುತ್ತಿದ್ದಾಳೆ. ಜೊತೆಗೆ ಅದಕ್ಕೆ ಮ್ಯಾಚ್ ಆಗುವಂತೆ ಹ್ಯಾಟ್(ಟೋಪಿ) ಧರಿಸಿದ್ದಾಳೆ. ಬಿಳಿ ಬಣ್ಣದ ವಿಗ್ ಜೊತೆ ಕೊರಳಿನ ಸುತ್ತ ರಾಣಿ ಎಲಿಜಬೆತ್ ಧರಿಸಿರುವಂತೆ ಮುತ್ತಿನ ಹಾರ ಧರಿಸಿದ್ದಾಳೆ. ಈಕೆಯ ಆಚೀಚೆ ಎರಡು ಕೊರ್ಗಿ ನಾಯಿಗಳಿದ್ದು, ಮುದ್ದಾದ ರಾಣಿಯಂತೆ ಬಾಲಕಿ ಕಾಣಿಸುತ್ತಿದ್ದಾಳೆ.
ಕಳೆದ ವರ್ಷ ಡಿಸೆಂಬರ್ 9 ರಂದು ರಾಣಿ ಪತ್ರ ಬರೆದಿದ್ದಾರೆ. ನಿಮ್ಮ ಪತ್ರಕ್ಕಾಗಿ ಮತ್ತು ನೀವು ಚಿಂತನಶೀಲವಾಗಿ ಇದರೊಂದಿಗೆ ಇಟ್ಟ ಛಾಯಾಚಿತ್ರಕ್ಕಾಗಿ ನಾನು ಬರೆಯಲು ಮತ್ತು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಿಮ್ಮ ಪುಟ್ಟ ಮಗಳು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ ಎಂದು ರಾಣಿ ಬರೆದಿದ್ದರು.
ಇದಲ್ಲದೆ, ಪತ್ರದಲ್ಲಿ ಸಾಕುಪ್ರಾಣಿಗಳ ಬಗ್ಗೆಯೂ ಉಲ್ಲೇಖಿಸಲಾಗಿತ್ತು. ನಿಮಗೆಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಮತ್ತು ನಾನು ರಾಯಲ್ ಸಾಕುಪ್ರಾಣಿಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸುತ್ತಿದ್ದೇನೆ, ಅದನ್ನು ಬಾಲಕಿ ಜಲೈನ್ ಹೊಂದಲು ಇಷ್ಟಪಡಬಹುದು ಎಂದು ಪತ್ರದಲ್ಲಿದೆ ಎಂದು ವರದಿಯಾಗಿದೆ. ಇನ್ನು ಈ ಫೋಟೋಗಳ ಬಗ್ಗೆ ಮಾತನಾಡಿದ ಬಾಲಕಿಯ ತಾಯಿ, ನಮ್ಮ ನಾಯಿಗಳು ನಮ್ಮ ಮಗಳ ಉತ್ತಮ ಸ್ನೇಹಿತರು, ಮತ್ತು ಇವುಗಳು ಈ ಉಡುಪಿಗೆ ದೊಡ್ಡ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
ರಾಜಪ್ರಭುತ್ವಕ್ಕೆ ಗುಡ್‌ಬೈ: ಹ್ಯಾರಿ ದಂಪತಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು ಹೀಗೆ!
ಎಲ್ಲರೂ ಒಂದೇ ಸಮಯದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿ ಕೊಡುವ ಏನನ್ನಾದರೂ ಮಾಡಲು ನಾವು ಬಯಸಿದ್ದೇವೆ. ನಾವು ರಾಜಮನೆತನವನ್ನು ಆರಾಧಿಸುತ್ತೇವೆ ಮತ್ತು ರಾಣಿಯ ನಂಬಿಕೆಯನ್ನು ಮೆಚ್ಚುತ್ತೇವೆ ಎಂದು ಅವರು ಹೇಳಿದ್ದಾರೆ. ಇವರು ತಮ್ಮ ಪುತ್ರಿ ಕ್ಯಾಟ್ಲಿನ್ ಫೋಟೋಗಳನ್ನು ಕ್ವೀನ್ ಎಲಿಜಬೆತ್ II ಮತ್ತು ಅವರ ಕಾರ್ಗಿಸ್ ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
Jallianwala Bagh: ಜಲಿಯನ್ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್ ರಾಣಿ ಹತ್ಯೆ ಬೆದರಿಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ