ಅವಳಿಗಳಾದರೂ ಹುಟ್ಟಿದ ವರ್ಷವೇ ಬೇರೆ... ಏನೀ ಅಚ್ಚರಿ

Suvarna News   | Asianet News
Published : Jan 04, 2022, 05:35 PM ISTUpdated : Jan 04, 2022, 05:41 PM IST
ಅವಳಿಗಳಾದರೂ ಹುಟ್ಟಿದ ವರ್ಷವೇ ಬೇರೆ... ಏನೀ ಅಚ್ಚರಿ

ಸಾರಾಂಶ

  ಅವಳಿಗಳಾದರೂ ಬೇರೆ ಬೇರೆ ದಿನ ಹುಟ್ಟುಹಬ್ಬ 15 ನಿಮಿಷ ತಡವಾಗಿದ್ದಕ್ಕೆ ಇಷ್ಟೊಂದು ವ್ಯತ್ಯಾಸ 15 ನಿಮಿಷದ ಅಂತರದಲ್ಲಿ ಹುಟ್ಟಿದ ಮಕ್ಕಳು

ಕ್ಯಾಲಿಪೋರ್ನಿಯಾ(ಡಿ.4): ಅಮೆರಿಕಾದ  ಕ್ಯಾಲಿಫೋರ್ನಿಯಾದಲ್ಲಿ ಅವಳಿ ಮಕ್ಕಳ ಜನನವಾಗಿದ್ದು, ಎರಡು ಮಕ್ಕಳ ಹುಟ್ಟಿದ ವರ್ಷ ಬೇರೆ ಬೇರೆಯಾಗಿದೆ. ಅವಳಿಗಳಾಗಿದ್ದರೂ ನನ್ನ ಮಕ್ಕಳು ಬೇರೆ ಬೇರೆ ಹುಟ್ಟಿದ ದಿನವನ್ನು ಹೊಂದಿರುವುದು ನನಗೆ ಕ್ರೇಜಿ ಎನಿಸುತ್ತಿದೆ ಎಂದು ಈ ಅವಳಿ ಮಕ್ಕಳ ತಾಯಿ ಹೇಳಿ ಕೊಂಡಿದ್ದಾರೆ. ಟ್ವಿನ್‌ಗಳು ಅಥವಾ ಅವಳಿ ಮಕ್ಕಳು ಬೇರೆ ಬೇರೆ ವರ್ಷದಲ್ಲಿ ಜನಿಸುವುದನ್ನು ನೀವೆಂದಾದರು ಕೇಳಿದ್ದೀರಾ. ಆದರೆ ಇದು ಇತ್ತೀಚೆಗೆ ಸಂಭವಿಸಿದೆ. 

ಅವಳಿ ಮಕ್ಕಳಿಬ್ಬರು 15 ನಿಮಿಷದ ವ್ಯತ್ಯಾಸದಲ್ಲಿ ಹುಟ್ಟಿದ್ದರಿಂದ ಅವಳಿಗಳಾದರೂ ಈ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಬೇರೆ ಬೇರೆ ವರ್ಷದಲ್ಲಿ ಆಚರಿಸುವಂತಾಗಿದೆ. ಈ ಅವಳಿಗಳಲ್ಲಿ ಮೊದಲ ಮಗು 2021ರ ರಾತ್ರಿ 11:45 PM ಕ್ಕೆ ಜನಿಸಿದೆ. ಹಾಗೂ ಮತ್ತೊಂದು ಮಗು 15 ನಿಮಿಷದ ನಂತರ 2022 ರ ರಾತ್ರಿ ಸರಿಯಾಗಿ 12 ಗಂಟೆಗೆ ಈ ಭೂಮಿಗೆ ಬಂದಿದೆ. 

Mangaluru 11 Pairs Twin Students: ಮಂಗಳೂರಿನ ಈ ಶಾಲೆಯಲ್ಲಿ 11 ಜೋಡಿ ಅವಳಿ ವಿದ್ಯಾರ್ಥಿಗಳೇ ಆಕರ್ಷಣೆ!

ಈ ಅವಳಿ ಮಕ್ಕಳಲ್ಲಿ ಒಂದು ಮಗು ಹೆಣ್ಣು ಹಾಗೂ ಇನ್ನೊಂದು ಮಗು ಗಂಡು. ಗಂಡು ಮಗುವಿಗೆ ಆಲ್ಫ್ರೆಡೋ (Alfredo) ಎಂದು ಹೆಸರಿಡಲಾಗಿದ್ದು,ಹೆಣ್ಣು ಮಗುವಿಗೆ ಐಲಿನ್ (Aylin) ಎಂದು ಹೆಸರಿಡಲಾಗಿದೆ. ಈ ಮಕ್ಕಳು ಕ್ಯಾಲಿಫೋರ್ನಿಯಾದ ಗ್ರೀನ್‌ಫೀಲ್ಡ್ (Greenfield city)ನಗರದ ಫಾತಿಮಾ ಮ್ಯಾಡ್ರಿಗಲ್ (Fatima Madrigal) ಮತ್ತು ರಾಬರ್ಟ್ ಟ್ರುಜಿಲ್ಲೊ (Robert Trujillo) ಎಂಬ ದಂಪತಿಗೆ ಜನಿಸಿದೆ.

ಒಂದು ದೇಹ ಎರಡು ಜೀವ, ಅವಳಿಗಳ ವಿಶಿಷ್ಟ ಜೋಡಿ: ಸರ್ಕಾರದಿಂದಲೂ ಸಿಕ್ತು ನ್ಯೂ ಇಯರ್ ಗಿಫ್ಟ್!

ಬೇಬಿ ಅಯ್ಲಿನ್ ಯೊಲಾಂಡಾ ಟ್ರುಜಿಲ್ಲೊ ನಿಖರವಾಗಿ 2022 ರ ಮಧ್ಯರಾತ್ರಿಯಲ್ಲಿ ಜನಿಸಿದಳು. ಆದರೆ ಅವಳ ಅವಳಿ ಸಹೋದರ ಆಲ್ಫ್ರೆಡೋ ಆಂಟೋನಿಯೊ ಟ್ರುಜಿಲ್ಲೊ 2021 ರಂದು ಸಹೋದರಿಗಿಂತ 15 ನಿಮಿಷಗಳ ಮೊದಲು ಜನಿಸಿದ ಎಂದು ನಾಟಿವಿಡಾಡ್ ಮೆಡಿಕಲ್ ಸೆಂಟರ್(Natividad Medical Center) ತನ್ನ ಫೇಸ್‌ಬುಕ್ ಪುಟದಲ್ಲಿ ಈ ಅವಳಿಗಳ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

ಇಬ್ಬರೂ ಮಕ್ಕಳು ಆರೋಗ್ಯಪೂರ್ಣವಾಗಿದ್ದು, ಚಟುವಟಿಕೆಯಿಂದಿವೆ. ಹುಟ್ಟಿದ ವೇಳೆ ಅಯ್ಲಿನ್‌ 2.66 ಕೆಜಿ ತೂಕವಿದ್ದು, ಈಕೆಯ ಹಿರಿಯ ಸಹೋದರ 2.75 ಕೆಜಿ ತೂಕವಿದ್ದ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇನ್ನು ತಮ್ಮ ಮಕ್ಕಳು ಅವಳಿಗಳಾದರೂ ಬೇರೆ ಬೇರೆ ಹುಟ್ಟಿದ ದಿನಾಂಕವನ್ನು ಹೊಂದಿರುವುದಕ್ಕೆ ಈ ಮಕ್ಕಳ ತಾಯಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನನಗೆ ಆಶ್ಚರ್ಯ ಹಾಗೂ ಖುಷಿ ಎರಡನ್ನೂ ನೀಡಿದೆ ಎಂದು ಅವರು ಹೇಳಿದ್ದಾರೆ. 

ಅವಳಿ ಜವಳಿ (Twin Babies) ಮಕ್ಕಳು ಕಡಿಮೆ ಸಮಯದ ಅಂತರದಲ್ಲಿ ಜನಿಸುವುದು ಸಾಮಾನ್ಯ. ಆದರೆ, ಈ ಅವಳಿ ಮಕ್ಕಳು ಮಾತ್ರ ಬೇರೆ ಬೇರೆ ವರ್ಷದಲ್ಲಿ (Different Year) ಜನಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ ಈ ಅವಳಿ ಜೋಡಿಯು ವಿಭಿನ್ನ ವರ್ಷಗಳಲ್ಲಿ ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಈ ಅವಳಿ ಮಕ್ಕಳು ಇದೀಗ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ. ಇನ್ನು ಈ ಮಕ್ಕಳ ಹೆರಿಗೆ ಮಾಡಿಸಿದ ವೈದ್ಯರು ಕೂಡ ಹರ್ಷ ವ್ಯಕ್ತಪಡಿಸಿದ್ದು, ಇದು ಖಂಡಿತವಾಗಿಯೂ ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಹೆರಿಗೆಯಾಗಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!