10 ಸಾವಿರ ಒಂಟೆಗಳ ಮಾರಣಹೋಮ| ಒಂಟೆ ಹತ್ಯೆಗೆ ಅಧಿಕೃತ ಆದೇಶ| 5 ದಿನಗಳಲ್ಲಿ 10 ಸಾವಿರ ಒಂಟೆ ಕೊಲ್ಲಲಿದ್ದಾರೆ ವೃತ್ತಿಪರ ಶೂಟರ್ಸ್
ಕ್ಯಾನ್‌ಬೆರಾ[ಜ.07]: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿಗೆ ಸುಮಾರು 50 ಕೋಟಿ ವನ್ಯ ಜೀವಿಗಳು ಸುಟ್ಟು ಕರಕಲಾಗಿವೆ. ವರದಿಗಳನ್ವಯ ಆಸ್ಟ್ರೇಲಿಯಾದ ಅರಣ್ಯಕ್ಕೆ ತಗುಲಿರುವ ಬೆಂಕಿಯು ಕೋಲಾ ಪ್ರಾಣಿಗಳ ಮೇಲೆ ಅತ್ಯಂತ ಕೆಟ್ಟ ಪ್ರಭಾವ ಬೀರಿದೆ. ಹೇರಳ ಮಟ್ಟದಲ್ಲಿ ಕೋಲಾ ಪ್ರಾಣಿಗಳು ಬೆಂಕಿಗಾಹುತಿಯಾಗಿದ್ದು, ಕೇವಲ ಅರ್ಧದಷ್ಟು ಮಾತ್ರ ಬದುಕುಳಿದಿವೆ ಎನ್ನಲಾಗಿದೆ. ವನ್ಯಜೀವಿಗಳನ್ನು ಕಾಪಾಡುವ ಹಾಗೂ ಬೆಂಕಿ ನಿಯಂತ್ರಿಸಲು ಬಹುದೊಡ್ಡ ಕಾರ್ಯಾಚರಣೆ ನಡೆಯುತ್ತಿದ್ದು, ಈ ಸಂಬಂಧ ಹಲವಾರು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ನಡುವೆ ಇಲ್ಲಿನ ಸುಮಾರು 10 ಸಾವಿರ ಒಂಟೆಗಳನ್ನು ಕೊಲ್ಲಲು ಆದೇಶಿಸಲಾಗಿದೆ. ಇದಕ್ಕೇನು ಕಾರಣ?
ಆಸ್ಟ್ರೇಲಿಯಾ ಕಾಡ್ಗಿಚ್ಚು ನಿಯಂತ್ರಣಕ್ಕೆ 1 ಮಿಲಿಯನ್ ನೀಡಿದ ನಟ!
ವೃತ್ತಿಪರ ಶೂಟರ್ಸ್ ಒಂಟೆಗಳನ್ನು ಕೊಲ್ಲುತ್ತಾರೆ
ದೇಶ ನೀರಿನ ಸಮಸ್ಯೆ ಎದುರಿಸಬಾರದೆಂಬ ನಿಟ್ಟಿನಲ್ಲಿ ಸಾವಿರಾರು ಕಾಡು ಒಂಟೆಗಳನ್ನು ಕೊಲ್ಲಲು ಆದೇಶ ಹೊರಡಿಸಿದೆ.ಈ ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಸೇವಿಸುತ್ತವೆ. ಹೀಗಾಗಿ ಬುಧವಾರದಿಂದ ವೃತ್ತಿಪರ ಶೂಟರ್ಸ್ ಹೆಲಿಕಾಪ್ಟರ್ ಮೂಲಕ ಈ ಒಂಟೆಗಳನ್ನು ಕೊಲ್ಲಲಿದ್ದಾರೆ. ಈ ಆದೇಶ ದಕ್ಷಿಣ ಆಸ್ಟ್ರೇಲಿಯಾ ಕ್ಷೇತ್ರದ ಆದಿವಾಸಿ ನಾಯಕರು ಹೊರಡಿಸಿದ್ದಾರೆ ಎಂಬುವುದು ಉಲ್ಲೇಖನೀಯ.
ಇಲ್ಲಿನ ಆಸು ಪಾಸಿನ ಸಮುದಾಯದ ಜನರೂ ಕಾಡು ಒಂಟೆಗಳು ನೀರು ಹುಡುಕುತ್ತಾ ತಾವು ವಾಸಿಸುವ ಪ್ರದೇಶಕ್ಕೆ ದಾಳಿ ಮಾಡುತ್ತವೆ ಎಂದು ದೂರಿದ್ದಾರೆ. ಅಲ್ಲದೇ ಇವುಗಳಿಂದ ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ ಎಂಬುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಇನ್ನು ಈ ಒಂಟೆಗಳು ಒಂದು ವರ್ಷದಲ್ಲಿ ಸುಮಾರು ಒಂದು ಟನ್ ಕಾರ್ಬನ್ ಡೈಆಕ್ಸೈಡ್ ನಷ್ಟು ಮಿಥೇನ್ ಗ್ಯಾಸ್ ಹೊರ ಸೂಸುತ್ತವೆ.
ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!
5 ದಿನಗಳಲ್ಲಿ ಒಂಟೆಗಳ ಮಾರಣಹೋಮ
ಇನ್ನು 5 ದಿನಗಳಲ್ಲಿ 10 ಸಾವಿರ ಒಂಟೆಗಳನ್ನು ಕೊಲ್ಲಲು ವರದಿಯಲ್ಲಿ ಆದೇಶಿಸಲಾಗಿದೆ. ಇವುಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಪ್ರತೀ 9 ವರ್ಷದಲ್ಲಿ ಇವುಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.
ಭಾರತ ಪ್ರವಾಸ ರದ್ದುಗೊಳಿಸಿದ ಆಸಿಸ್ ಪ್ರಧಾನಿ?: ಕಾರಣ ಏನು?