
ಲಂಡನ್(ಜು.10) ರೋಗಿಗಳನ್ನು ಸುಶ್ರೂಷೆ ಮಾಡುವುದು, ಆರೈಕೆ ಮಾಡಿ ಗುಣಮುಖವಾಗಿಸುವ ಕೆಲಸದಲ್ಲಿ ನರ್ಸ್ ಪಾತ್ರ ಅತ್ಯಂತ ಮುಖ್ಯ. ಆಸ್ಪತ್ರೆಯಲ್ಲಿ ಡಾಕ್ಟರ್‌ಗಿಂತ ಹೆಚ್ಚು ರೋಗಿಗಳ ಆರೈಕೆ ಮಾಡುವುದು ನರ್ಸ್. ಆದರೆ ಇಲ್ಲೊಬ್ಬ ಮಹಿಳಾ ನರ್ಸ್‌ಗೆ ಆಸ್ಪತ್ರೆ ದಾಖಲಾದ ರೋಗಿ ಜೊತೆಗೆ ಆಫೈರ್ ಶುರುವಾಗಿದೆ. ಕೆಲವೇ ದಿನಗಳಲ್ಲಿ ಅಫೈರ್ ಮತ್ತೊಂದು ಹಂತಕ್ಕೆ ತಲುಪಿದೆ. ರೋಗಿ ಜೊತೆ ದೈಹಿಕ ಸಂಪರ್ಕ ಶುರುಮಾಡಿದ್ದಾಳೆ. ಆದರೆ ಸೆಕ್ಸ್ ವೇಳೆಯೆ ರೋಗಿ ಮೃತಪಟ್ಟ ಘಟನೆ ಯುನೈಟೆಡ್ ಕಿಂಗ್‌ಡಮ್‌ನ ವೇಲ್ಸ್‌ನಲ್ಲಿ ನಡೆದಿದೆ.
ಒಂದು ವರ್ಷದ ಹಿಂದೆ ಆಸ್ಪತ್ರೆ ದಾಖಲಾಗಿದ್ದ ರೋಗಿ ಜೊತೆಗೆ 42 ವರ್ಷದ ನರ್ಸ್ ಪೆನೆಲೋಪ್ ವಿಲಿಯಮ್ಸ್‌ಗೆ ಅಫೈರ್ ಶುರುವಾಗಿದೆ. ಸುದೀರ್ಘ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿ ಜೊತೆಗಿನ ಅಫೈರ್ ಎಲ್ಲೆ ಮೀರಿತ್ತು. ಚಿಕಿತ್ಸೆ ಪಡೆದು ಗುಣಮುಖರಾದ ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ನರ್ಸ್ ಮಾತ್ರ ರೋಗಿಯನ್ನು ಬಿಟ್ಟಿಲ್ಲ.
ಮೈಸೂರು ವೈದ್ಯೆ ಮೇಲೆ ರೇಪ್: ಕೇರಳದ ನರ್ಸ್ ಅರೆಸ್ಟ್
ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ಡಯಾಲಿಸ್ ಸೇರಿದಂತೆ ಹಲವು ಚಿಕಿತ್ಸೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಬರಲೇಬೇಕಿತ್ತು. ಹೀಗೆ ಆಸ್ಪತ್ರೆ ಬಂದ ರೋಗಿ ಜೊತೆ ನರ್ಸ್ ಸೆಕ್ಸ್ ಶುರುವಾಗಿದೆ. ಡಯಾಲಿಸಿಸ್‌ಗಾಗಿ ಆಸ್ಪತ್ರೆ ಬಂದಿದ್ದ ರೋಗಿಯನ್ನು ಕರೆದುಕೊಂಡು ಪಾರ್ಕಿಂಗ್ ಆವರಣಕ್ಕೆ ತೆರಳಿದ ನರ್ಸ್, ಕಾರಿನಲ್ಲಿ ಸೆಕ್ಸ್ ಆಟ ಶುರುಮಾಡಿದ್ದಾಳೆ.
ಕಿಡ್ನಿ ಸಮಸ್ಸೆ ಬಳಸಿದ ರೋಗಿ ಸೆಕ್ಸ್ ವೇಳೆಯೆ ಅಸ್ವಸ್ಥಗೊಂಡಿದ್ದಾನೆ. ಆದರೆ ನರ್ಸ್ ಮಾತ್ರ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾಳೆ. ತೀವ್ರ ಅಸ್ವಸ್ಥನಾಗಿ ಕುಸಿದ ರೋಗಿಯನ್ನು ಆಸ್ಪತ್ರೆ ದಾಖಲಿಸುವ ಪ್ರಯತ್ನಕ್ಕೆ ನರ್ಸ್ ಹೋಗಿಲ್ಲ, ಆ್ಯಂಬುಲೆನ್ಸ್ ಪಕ್ಕದಲ್ಲೇ ಇದ್ದರೂ ನೆರವು ಪಡೆಯಲಿಲ್ಲ. ರೋಗಿಯನ್ನು ಕಾರಿನಲ್ಲೇ ಬಿಟ್ಟು ನರ್ಸ್ ಮತ್ತೆ ತನ್ನ ಕರ್ತವ್ಯಕ್ಕೆ ಮರಳಿದ್ದಾರೆ.
ಮಹಿಳಾ ರೋಗಿಯನ್ನು ಕೂದಲಿಳಿಡಿದು ಎಳೆದೊಯ್ದ ನರ್ಸ್: ವಿಡಿಯೋ ವೈರಲ್
ಕಿಡ್ನಿ ಸಮಸ್ಯೆ ಜೊತೆಗೆ ಹೃದಯಾಘಾತದಿಂದ ರೋಗಿ ಕಾರಿನಲ್ಲೇ ಮೃತಪಟ್ಟಿದ್ದಾನೆ. ಆಸ್ಪತ್ರೆ ಸಿಬ್ಬಂದಿಗಳು ಪಾರ್ಕಿಂಗ್‌ನತ್ತ ತೆರಳಿದಾಗ ವ್ಯಕ್ತಿಯೊಬ್ಬರು ಕಾರಿನಲ್ಲಿ ಮೃತಪಟ್ಟಿರುವುದು ಬೆಳೆಕಿಗೆ ಬಂದಿದೆ. ತಕ್ಷಣ ವೈದ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಯಾಲಿಸ್‌ಗೆ ಬಂದ ರೋಗಿ ಮೃತಪಟ್ಟಿರುವುದು ದೃಢವಾಗಿದೆ. ಆದರೆ ಬೆತ್ತಲಾಗಿ ಕಾರಿನಲ್ಲಿ ಮೃತಪಟ್ಟಿರುವುದು ಅನುಮಾನಕ್ಕೆ ಕಾರಣಾಗಿದೆ. ಹೀಗಾಗಿ ಪೊಲೀಸ್ ವಿಚಾರಣೆ ಆರಂಭಗೊಂಡಿದೆ.
ಆಸ್ಪತ್ರೆ ಇತರ ನರ್ಸ್ ವಿಚಾರಣೆ ವೇಳೆ ಆಫೈರ್ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ನರ್ಸ್ ಹಾಗೂ ರೋಗಿ ಕಾರಿನಲ್ಲಿರುವ ದೃಶ್ಯಗಳು ಪತ್ತೆಯಾಗಿದೆ. ಹೀಗಾಗಿ ನರ್ಸ್ ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ