ಮಲಗಿದ್ದ ಹಿಮ ಕರಡಿಯನ್ನು ಹಾರ್ನ್ ಹಾಕಿ ಎಬ್ಬಿಸಿದ, ವನ್ಯಜೀವಿ ಶಾಪಕ್ಕೆ ಸಿಬ್ಬಂದಿಗೆ ನಿದ್ದೆ ಇಲ್ಲದಾಯಿತು

Published : Aug 15, 2026, 10:55 PM IST
polar bear

ಸಾರಾಂಶ

ಹಿಮ ಕರಡಿ ತನ್ನ ಪಾಡಿಗೆ ಗಾಢ ನಿದ್ದೆಯಲ್ಲಿತ್ತು. ನಿದ್ದೆಯಲ್ಲಿದ್ದ ಹಿಮ ಕರಡಿಯನ್ನು ಉದ್ದೇಶಪೂರ್ವಕವಾಗಿ ಹಡಗಿನ ಹಾರ್ನ್ ಹಾಕಿ ಸಿಬ್ಬಂದಿ ಎಬ್ಬಿಸಿದ್ದ. ಆತಂಕದಿಂದಲೇ ಎದ್ದ ಹಿಮ ಕರಡಿ ನೀಡಿದ ಶಾಪ ಕ್ಯಾಪ್ಟನ್‌ಗೆ ತಟ್ಟಿದೆ.

ನಾರ್ವೆ (ಆ.16) ವನ್ಯಜೀವಿಗಳ ಪೈಕಿ ಹೆಚ್ಚು ಮುದ ನೀಡುವ ಪ್ರಾಣಿಗಳಲ್ಲಿ ಹಿಮಕರಡಿ ಕೂಡ ಒಂದು. ಅದರಲ್ಲೂ ಮರಿ ಹಿಮಕರಡಿಗಳ ಆಟ ನೋಡುವುದೇ ಆನಂದ. ಆರ್ಕ್ಟಿಕ್ ವಲಯದಲ್ಲಿ ಹಡಗು ಸಂಚರಿಸುತ್ತಿದ್ದಂತೆ ಸಿಬ್ಬಂದಿ ದೂರದ ಹೆಪ್ಪುಗಟ್ಟಿದ ಹಿಮದಲ್ಲಿ ಮಲಗಿದ್ದ ಹಿಮಕರಡಿಯನ್ನು ಗಮನಿಸಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಹಿಮಕರಡಿಯನ್ನು ಎಬ್ಬಿಸಲು ಹಾರ್ನ್ ಬಳಕೆ ಮಾಡಿದ್ದಾನೆ. ಹಡಗಿನ ದೈತ್ಯ ಹಾರ್ನ್‌ನಿಂದ ಹಿಮಕರಡಿ ಆತಂಕದಿಂದಲೇ ಎದ್ದಿದೆ. ಎದ್ದು ಸುತ್ತಲು ನೋಡಿದಾಗ ಹಡಗು ಚಲಿಸುತ್ತಿರುವುದು ನೋಡಿ ಗಾಬರಿಯಾಗಿ ದೂರ ಸರಿದಿದೆ. ಆದರೆ ತನ್ನ ನಿದ್ದೆ ಹಾಳು ಮಾಡಿದ ಸಿಬ್ಬಂದಿಗೆ ಹಿಮಕರಡಿ ಶಾಪ ನೀಡಿದೆ. ವಿಶೇಷ ಅಂದರೆ ಇದೀಗ ಸಿಬ್ಬಂದಿ ನಿದ್ದೆ ಹಾಳಾಗಿದೆ.

ಈ ಘಟನೆ ನಾರ್ವೆಯ ಆರ್ಕ್ಟಿಕ್ ಪ್ರದೇಶದ ಸ್ವಾಲ್‌ಬಾರ್ಡ್ ದ್ವೀಪದಲ್ಲಿ ನಡೆದಿದೆ. ಪ್ರವಾಸಿ ಹಡಗಿನಲ್ಲಿದ್ದ ಸಿಬ್ಬಂದಿ ಹಿಮದ ಮೇಲೆ ನಿದ್ದೆ ಮಾಡುತ್ತಿದ್ದ ಹಿಮಕರಡಿಯನ್ನು ಗಮನಿಸಿದ್ದಾನೆ. ಕರಡಿಯನ್ನು ಹತ್ತಿರದಿಂದ ನೋಡಿ ಆನಂದಿಸಲು ಮುಂದಾಗಿದ್ದಾನೆ. ಮಲಗಿದ್ದ ಕಾರಣ ಹಿಮ ಕರಡಿಯನ್ನು ಎಬ್ಬಿಸಿದರೆ ಮತ್ತಷ್ಟು ಹಿತ ಎಂದುಕೊಂಡು ಹಡಗಿನ ದೈತ್ಯ ಹಾರ್ನ್ ಹಾಕಿದ್ದಾನೆ.

ಹಡಿನ ದೈತ್ಯ ಹಾರ್ನ್ ಶಬ್ದಕ್ಕೆ ಹಿಮಕರಡಿ ಆತಂಕದಿಂದ ಎದ್ದಿದೆ. ಬಳಿಕ ಗಾಬರಿಯಿಂದಲೇ ಓಡಿದೆ. ಸಿಬ್ಬಂದಿಯ ಪ್ರಯತ್ನವನ್ನು ಹಡಗಿನಲ್ಲಿದ್ದ ಹಲವು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ. ಎಲ್ಲರೂ ವಾವ್ ಎಂದು ಉದ್ಗರಿಸಿದ್ದಾರೆ. ಹಿಮ ಕರಡಿ, ಅದರ ಓಟ ನೋಡಿದೆವು ಎಂದು ಖುಷಿ ಪಟ್ಟಿದ್ದಾರೆ. ಇತ್ತ ಸಿಬ್ಬಂದಿ ಕೂಡ ತನ್ನ ಬಯಕೆಯಂತೆ ಮಾಡಿದ್ದೇನೆ ಎಂದು ಹಿರಿ ಹಿರಿ ಹಿಗ್ಗಿದ್ದಾನೆ. ಆದರೆ ನಿದ್ದೆಯಿಂದ ಎದ್ದ ಕರಡಿಯ ಶಾಪ ಸಿಬ್ಬಂದಿಗೆ ತಟ್ಟಿದೆ.

ಸಿಬ್ಬಂದಿಗೆ 4.5 ಲಕ್ಷ ರೂಪಾಯಿ ದಂಡ

ಹಿಮ ಕರಡಿಯ ನಿದ್ದೆ ಹಾಳು ಮಾಡಿದ ಸಿಬ್ಬಂದಿಯ ನಿದ್ದೆ ಇದೀಗ ಹಾಳಾಗಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ನಾರ್ವೆ ಸರ್ಕಾರ ಗರಂ ಆಗಿದೆ. ವನ್ಯಜೀವಿ ಮೇಲೆ ದೌರ್ಜನ್ಯ, ಶಬ್ದ ಮಾಲಿನ್ಯ ಹಾಗೂ ಗಾಬರಿ ಹುಟ್ಟಿಸಿದ ಸಿಬ್ಬಂದಿ ವಿರುದ್ದ ಕ್ರಮ ಕೈಗೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವನ್ಯಜೀವಿಯನ್ನು ಅನಗತ್ಯವಾಗಿ ಬೆದರಿಸುವುದು ಹಿಂಬಾಲಿಸುವುದು, ನೈಸರ್ಗಿಕ ನಡವಳಿಕೆಗೆ ಅಡಚಣೆ ತರುವುದು ಅಪರಾಧವಾಗಿದೆ. ಹೀಗಾಗಿ ನಾರ್ವೆ ಸರ್ಕಾರ ಹಡಗಿನ ಸಿಬ್ಬಂದಿಗೆ 4.5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ದಂಡದ ಮೊತ್ತ ಕೇಳಿ ಸಿಬ್ಬಂದಿ ಕಂಗಾಲಾಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರು ಮೂಸ್‌ಗಳು ಬದಲಿಸಿದ ದ್ವೀಪದ ಹಣೆಬರಹ, ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಬೋರಿಯಲ್ ಕಾಡುಗಳು ನಾಶದತ್ತ!
ಬರ್ತ್‌ಡೇ ದಿನವೇ ಹೊರಬಿತ್ತು ನೋವಿನ ಸುದ್ದಿ, ಮಿಸ್ ಅರ್ಥ್ ಕಿರೀಟ ಗೆದ್ದ 26ರ ಹರೆಯದ ಸುಂದರಿ ಸಾವು