
ವಾಷಿಂಗ್ಟನ್ (ಆ.13): ನ್ಯಾಟೋ ಶೃಂಗಸಭೆಗೆಂದು ಟರ್ಕಿಗೆ ತೆರಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald trump) ಅವರು ಅಲ್ಲಿಂದ ಮರಳುವ ವೇಳೆ, ಕತಾರ್‌ನಿಂದ ಉಡುಗೊರೆಯಾಗಿ ಸಿಕ್ಕಿದ್ದ ಏರ್‌ಫೋರ್ಸ್ ಒನ್ ವಿಮಾನದ ಬದಲು ಇನ್ನೊಂದು ವಿಮಾನ ಹತ್ತಿದ್ದರು ಹಾಗೂ ಅಲ್ಲಿಯ ವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು ಎಂದು ಅಮೆರಿಕದ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು. ಇದನ್ನೀಗ ಸ್ವತಃ ಟ್ರಂಪ್ ಒಪ್ಪಿಕೊಂಡಿದ್ದಾರೆ.
‘ನನ್ನನ್ನು ಹತ್ಯೆ ಮಾಡುವ ಉದ್ದೇಶದಿಂದ ಇರಾನ್ ದಾಳಿ ಮಾಡಬಹುದು ಎಂಬ ಗುಪ್ತಚರ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸೀಕ್ರೆಟ್ ಸರ್ವಿಸ್ ಹಾಗೂ ಸೇನೆ ನನ್ನನ್ನು ಏರ್‌ಫೋರ್ಸ್ ಒನ್ ವಿಮಾನದಿಂದ ಇಳಿಸಿತು ಹಾಗೂ ಕೇಟರಿಂಗ್ ಟ್ರಕ್ ಮೂಲಕ ಇನ್ನೊಂದು ವಿಮಾನಕ್ಕೆ ಹತ್ತಿಸಿತು’ ಎಂದು ಟ್ರಂಪ್ ಹೇಳಿದರು. ಜತೆಗೇ, ‘ಇಂಥ ಬೆದರಿಕೆಗಳು ಆಗಾಗ ಬರುತ್ತಿರುವ ಕಾರಣ ನನಗೇನೂ ಭಯವಿರಲಿಲ್ಲ’ ಎಂದೂ ಹೇಳಿದರು.
ಹೋರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ‘ಸಂಪೂರ್ಣ ನಿಯಂತ್ರಣ’ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿಕೊಂಡಿದ್ದಾರೆ.
ಅಮೆರಿಕದ ನೌಕಾ ದಿಗ್ಬಂಧನವನ್ನು ಶ್ಲಾಘಿಸಿದ ಟ್ರಂಪ್, ಅದನ್ನು ಉಕ್ಕಿನ ಗೋಡೆ ಎಂದು ಬಣ್ಣಿಸಿದರು,ಇದೇ ವೇಳೆ ಇರಾನ್ ದಿವಾಳಿಯಾಗಿದೆ. ಆ ದೇಶದಲ್ಲಿ ಹಣವಿಲ್ಲ. ಮಧ್ಯಪ್ರಾಚ್ಯದ ಗೂಂಡಾಗಿರಿ ಇನ್ನು ಮುಂದೆ ನಡೆಯಲ್ಲ ಎಂದ ಅವರು, ‘ಅಲ್ಲಾಹನಿಗೆ ಸ್ತುತಿ!’ಎಂದು ತಮ್ಮ ಮಾತು ಮುಗಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ