ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸ್ಥಿತಿ ಗಂಭೀರ?

By Kannadaprabha News  |  First Published Apr 24, 2020, 7:28 AM IST

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಕಿಮ್‌ಗೆ ಏನಾಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 


ಸೋಲ್(ಏ.24)‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಕಿಮ್‌ ಜಾಂಗ್‌ ಆರೋಗ್ಯ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ. ಹೃದಯ ಸಂಬಂಧಿ ಆಸ್ಪತ್ರೆಗೆ ಕಿಮ್‌ ಜಾಂಗ್‌ ದಾಖಲಾಗಿದ್ದು, ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇದೇ ವೇಳೆ ಕಿಮ್‌ ಜಾಂಗ್‌ ಉನ್‌ ಅವರ ಹಾರ್ಟ್‌ ಕೇರ್‌ ಸೆಂಟರ್‌ ಜರ್ಮನಿ ಮತ್ತು ಜಪಾನ್‌ನಿಂದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಹಾಗೂ ವಿದೇಶದಲ್ಲಿ ತರಬೇತಿ ಪಡೆದ ವೈದ್ಯರನ್ನು ಕರೆಸಿಕೊಂಡಿದೆ.

ಭಾರೀ ಪ್ರಮಾಣದ ಸಿಗರೆಟ್‌ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವ ಕಿಮ್‌ ಜಾಂಗ್‌, ಕಳೆದ ತಿಂಗಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಆ ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.

Latest Videos

undefined

ಕಿಮ್ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹೀಗ್ ಮಾಡುತ್ತಿದ್ದನಂತೆ !

ಈ ಮಧ್ಯೆ ಕಿಮ್‌ ಆರೋಗ್ಯದ ಬಗ್ಗೆ ಹಲವಾರು ವದಂತಿಗಳು ಹರಡುತ್ತಿದ್ದು, ಒಂದು ವೇಳೆ ಕಿಮ್‌ ನಿಧನದ ಬಳಿಕ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ತಲೆದೋರಿದೆ. ಕಿಮ್‌ ಜಾಂಗ್‌ ಕುಟುಂಬವೇ ಕಳೆದ 7 ದಶಕಗಳಿಂದ ಉತ್ತರ ಕೊರಿಯಾವನ್ನು ಆಳುತ್ತಿದೆ. ಇದೇ ಉತ್ತರ ಕೊರಿಯಾ ರಾಜಧಾನಿ ಪ್ಯೋಂಗ್ಯಾಂಗ್‌ನಲ್ಲಿ ಜನರು ರಾಷ್ಟೀಯ ಬಿಕ್ಕಟ್ಟು ಎದುರಾಗುವ ಭೀತಿಯಿಂದ ಅಗತ್ಯ ವಸ್ತುಗಳ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದು, ಆಹಾರ ದಾಸ್ತಾನುಗಳು ಬರಿದಾಗುತ್ತಿವೆ.
 

click me!