ತರಬೇತಿ ಪಡೆದ ನಾಯಿಗಳಿಂದ ಕೋವಿಡ್-19 ಪತ್ತೆ ಕಾರ್ಯ, 1 ಗಂಟೆಯಲ್ಲಿ 750 ಮಂದಿ ತಪಾಸಣೆ !

By Suvarna NewsFirst Published Apr 23, 2020, 2:59 PM IST
Highlights

ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಡಿಟೆಕ್ಟ್ ಬೂಥ್, ಆಯಾ ಜಿಲ್ಲೆಗಳಲ್ಲಿ ಕೋವಿಡ್-19 ಸೆಂಟರ್‌ಗಳನ್ನು ತರೆಯಲಾಗುತ್ತಿದೆ. ಆದರೂ ಯಾರಿಗೆ ಕೊರೋನಾ ಇದೆ ಅನ್ನೋದನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಾಗಿದೆ. ಇದೀಗ ಕೊರೋನಾ ಸೋಂಕಿತರ ಪತ್ತೆಗೆ ತರಬೇತಿ ಪಡೆದ ನಾಯಿಯಗಳು ಅಖಾಡಕ್ಕಿಳಿದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಲಂಡನ್(ಏ.23): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಇಂಗ್ಲೆಂಡ್, ಇಟಲಿ, ಅಮೆರಿಕಾಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಸೋಂಕಿತರ ಪತ್ತೆ ಸರ್ಕಾರಕ್ಕೆ ತಲೆನೋವಾಗಿದೆ. ಇದೀಗ ಲಂಡನ್‌, ಕೊರೋನಾ ಸೋಂಕಿತರ ಪತ್ತೆಗೆ ತರಬೇತಿ ಪಡೆದ ನಾಯಿಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ನಾಯಿಗಳಿಂದ ಕ್ಯಾನ್ಸರ್, ಪಾರ್ಕಿಸನ್ ಸೇರಿದಂತೆ ಬ್ಯಾಕ್ಟೀರಿಯಾ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಮೆಡಿಕಲ್ ಡಿಟೆಕ್ಷನ್ ಡಾಗ್ ಸಂಸ್ಥೆ ಇದೀಗ ನಾಯಿಗಳ ಮೂಲಕ ಕೋವಿಡ್ 19 ಪತ್ತೆಹಚ್ಚಲು ಮುಂದಾಗಿದೆ.

ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ

ಹಲವು ವರ್ಷಗಳಿಂದ ಮೆಡಿಕಲ್ ಡಿಟೆಕ್ಷನ್ ಡಾಗ್ ಚಾರಿಟಿ ನಾಯಿಗಳ ಮೂಲಕ ಈ ಪ್ರಯೋಗ ಮಾಡುತ್ತಿದೆ. ವಾಸನೆಗಳನ್ನು ಗ್ರಹಿಸುವ ಮೂಲಕ ನಾಯಿಗಳು ಯಂತ್ರಗಳಿಂತ ಬಹುಬೇಗ ಸೋಂಕಿತರನ್ನು ಪತ್ತೆ ಹಚ್ಚಲಿದೆ ಎಂದು ಮೆಡಿಕಲ್ ಡಿಟೆಕ್ಷನ್ ಡಾಗ್ ಚಾರಿಟಿ ಹೇಳಿದೆ. ಕೊರೋನಾ ಸೋಂಕಿತರ ಪತ್ತೆಗಾಗಿ ಮೆಡಿಕಲ್ ಡಿಟೆಕ್ಷನ್ ಡಾಗ್ ಚಾರಿಟಿ ಈಗಾಗಲೇ 6 ನಾಯಿಗಳಿಗೆ ತರಬೇತಿ ನೀಡಿದೆ. ಈ ಕುರಿತು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದೆ.

 

***CV-19 SUPER SIX***

Norman, Digby, Storm, Star, Jasper and Asher could be trained to detect if someone has and play a vital role in preventing further spread of the pandemic in future. https://t.co/xuheY7OOz6 pic.twitter.com/vOdTuekdaW

— Medical Detection Dogs (@MedDetectDogs)

ನಾರ್ಮನ್, ಡಿಗ್ಬಿ, ಸ್ಟೋರ್ಮ್, ಸ್ಟಾರ್, ಜಾಸ್ಪರ್ ಹಾಗೂ ಆ್ಯಶರ್ ಅನ್ನೋ 6 ನಾಯಿಗಳು ಇದೀಗ ಕೋವಿಡ್-19 ಸೋಂಕಿತರ ಪತ್ತೆ ರೆಡಿಯಾಗಿದೆ. ಈ ನಾಯಿಗಳು ಕೊರೋನಾ ವೈರಸ್ ಹರಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಮಾತ್ರವಲ್ಲ, ಭವಿಷ್ಯದಲ್ಲೂ ನಾಯಿಗಳು ನೆರವು ಅಗತ್ಯ ಎಂದ ಡಾಗ್ ಚಾರಿಟಿ ಹೇಳಿದೆ.

ಮೆಡಿಕಲ್ ಡಿಟೆಕ್ಷನ್ ಡಾಗ್ ಚಾರಿಟಿ ಸಂಸ್ಥೆ ಲಂಡನ್‌ನ ಸ್ಕೂಲ್ ಆಫ್ ಹೈಜಿನ್, ಟ್ರೋಪಿಕಲ್ ಮೆಡಿಸಿನ್, ದುರ್ಹಾಮ್ ಯುನಿವರ್ಸಿಟಿ ಜೊತೆಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಡಾಗ್ ಚಾರಿಟಿ ಹಾಗೂ ಇತರ 3 ಸಂಸ್ಥೆಗಳು ಜೊತೆಯಾಗಿ ಮಲೇರಿಯಾ ರೋಗಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕೊರೋನಾ ಸೋಂಕಿತರ ಪತ್ತೆಗೆ ಇದೇ ರೀತಿ ನಾಯಿಗಳನ್ನು ತರಬೇತಿ ಮಾಡಿದೆ. ವಾಸನೆ ಹಾಗೂ ಉಷ್ಣತೆ ಗ್ರಹಿಸೋ ಮೂಲಕ ಜ್ವರವಿರುವ ಸೋಂಕಿತರನ್ನು ನಾಯಿಗಳು ಪತ್ತೆ ಹಚ್ಚಲಿದೆ.

 

COVID-19 Detection Dog #1

Norman is one of the dogs that could soon be assessed as a detection dog.

His nose could pick up on the scent in as little as 6-8 weeks.https://t.co/xuheY7OOz6
Nigel Harper Photography pic.twitter.com/RUsHugH3R7

— Medical Detection Dogs (@MedDetectDogs)

ಈ ರೀತಿ ತರಬೇತಿ ಪಡೆದ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಪ್ರಯಾಣಿಕರ ತಪಾಸಣೆ ಸೇರಿದಂತೆ ಹಲವು ಕಡೆಗಳಲ್ಲಿ ಬಳಸಬಹುದು. ತರಬೇತಿ ನೀಡಿದ ನಾಯಿಗಳು ಕೊರೋನಾ ಸೋಂಕಿತರನ್ನು ಯಾವುದೇ ಸಂದೇಹವಿಲ್ಲದೆ ಪತ್ತೆ ಹಚ್ಚಲಿದೆ. ಇದೀಗ ನಾವು ನಾಯಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸೋಂಕಿತರ ಪತ್ತೆ ಮಾಡುವುದು ಹೇಗೆ ಅನ್ನೋ ಕುರಿತು ಅಧ್ಯಯನ ನಡೆಯುತ್ತಿದೆ ಎಂಜು ಮೆಡಿಕಲ್ ಡಿಟೆಕ್ಷನ್ ಡಾಗ್ ಚಾರಿಟಿ ಸಿಇಒ ಕ್ಲೈರ್ ಗೆಸ್ಟ್ ಹೇಳಿದ್ದಾರೆ. ಒಂದು ಗಂಟೆಯಲ್ಲಿ ಒಂದು ನಾಯಿ ಸುಮಾರು 750 ಸೋಂಕಿತರನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. 

click me!