ಬೈಬಲ್‌ ಇರಿಸಿಕೊಂಡಿದ್ದ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ ನೀಡಿದ ಕಿಮ್ ಜಾಂಗ್‌ ಉನ್‌!

By Santosh NaikFirst Published May 27, 2023, 7:24 PM IST
Highlights

ಕೇವಲ ಬೈಬಲ್‌ ಇರಿಸಿಕೊಂಡಿದ್ದ ಕಾರಣಕ್ಕೆ 2 ವರ್ಷದ ಮಗುವಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 2022ರಲ್ಲಿ ಅಂದಾಜು 70 ಸಾವಿರ ಕ್ರಿಶ್ಚಿಯನ್ನರನ್ನು ಕಿಮ್‌ ಜಾಂಗ್‌ ಉನ್‌ ಜೈಲಿಗೆ ಅಟ್ಟಿದ್ದಾರೆ ಎನ್ನಲಾಗಿದೆ.
 

ನವದೆಹಲಿ (ಮೇ.27):  ಉತ್ತರ ಕೊರಿಯಾದ ಕ್ರಿಶ್ಚಿಯನ್ ಕುಟುಂಬವೊಂದು ತಮ್ಮ ಧರ್ಮವನ್ನು ಆಚರಿಸಿದ ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದೆ. ಶಿಕ್ಷೆಯಲ್ಲಿ ಕುಟುಂಬದ 2 ವರ್ಷದ ಮಗು ಕೂಡ ಸೇರಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ. ಈ ಘಟನೆ ನಡೆದಿದ್ದು 2009ರಲ್ಲಿ ಎಂದು ವರದಿ ಬಹಿರಂಗ ಮಾಡಿದೆ. ಉತ್ತರ ಕೊರಿಯಾದಲ್ಲಿ ಬೈಬಲ್ ಅನ್ನು ಇಟ್ಟುಕೊಂಡಿದ್ದಕ್ಕಾಗಿ ಜನರಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ವರದಿ ಹೇಳಿದೆ. 2022ರಲ್ಲಿ ಉತ್ತರ ಕೊರಿಯಾ 70 ಸಾವಿರಕ್ಕೂ ಹೆಚ್ಚು ಕ್ರೈಸ್ತರನ್ನು ಜೈಲಿಗೆ ಹಾಕಿದೆ. 'ಕೊರಿಯಾ ಫ್ಯೂಚರ್' ಎಂಬ ಎನ್‌ಜಿಒದಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ತನ್ನ ವರದಿಯನ್ನು ಸಿದ್ಧಪಡಿಸಿದೆ. ಉತ್ತರ ಕೊರಿಯಾದಲ್ಲಿ ಕ್ರಿಶ್ಚಿಯನ್ನರು ಧರ್ಮವನ್ನು ಆಚರಣೆ ಮಾಡಿದರೆ ಅವರಿಗೆ ದೊಡ್ಡ ಪ್ರಮಾಣದಲ್ಲಿ ಹಿಂಸೆ ನೀಡಲಾಗುತ್ತಿದೆ ಎಂದು ಎನ್‌ಜಿಒಗಳು ಹೇಳಿಕೊಂಡಿವೆ. ಕ್ರಿಶ್ಚಿಯನ್‌ ಧರ್ಮವನ್ನು ಆಚರಣೆ ಮಾಡಿದಲ್ಲಿ ಅವರನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದ್ದರೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.

2021 ರಲ್ಲಿ 151 ಮಹಿಳೆಯರೊಂದಿಗೆ ನಡೆಸಿದ ಸಂದರ್ಶನದಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ. ಅದೇ ಸಮಯದಲ್ಲಿ, ಉತ್ತರ ಕೊರಿಯಾವನ್ನು ತೊರೆದ ಜನರು ಕ್ರಿಶ್ಚಿಯನ್ನರ ಬಗ್ಗೆ ಉತ್ತರ ಕೊರಿಯಾದಲ್ಲಿ ಕೆಟ್ಟದಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಎನ್‌ಜಿಒಗೆ ತಿಳಿಸಿದ್ದಾರೆ. ಮಿಷನರಿಗಳನ್ನು ರಕ್ತ ಕುಡಿಯುವವರು, ಕೊಲೆಗಾರರು ಮತ್ತು ಅತ್ಯಾಚಾರಿಗಳು ಎಂದು ಕರೆಯಲಾಗುತ್ತದೆ.

ಉತ್ತರ ಕೊರಿಯಾ ನಾಸ್ತಿಕ ದೇಶ: ಕಮ್ಯುನಿಸ್ಟ್ ದೇಶವಾಗಿರುವ ಕಾರಣ ಉತ್ತರ ಕೊರಿಯಾ ನಾಸ್ತಿಕ ರಾಷ್ಟ್ರವಾಗಿದೆ. ಯಾವುದೇ ಧರ್ಮವನ್ನು ಅಲ್ಲಿ ನಂಬೋದಿಲ್ಲ. ಅಲ್ಲಿ ಎಲ್ಲ ಜನರಿಗೂ ಅವರವರ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ ಎಂದು ಹೇಳಲಾಗಿದ್ದರೂ. ಇಲ್ಲಿನ ಶೇ.50ರಷ್ಟು ಜನ ನಾಸ್ತಿಕರು. 25% ಜನರು ಬೌದ್ಧರು ಮತ್ತು ಉಳಿದ 25% ಕ್ರಿಶ್ಚಿಯನ್ನರು ಮತ್ತು ಇತರ ಧರ್ಮಗಳಾಗಿವೆ. ಈ ಹಕ್ಕುಗಳ ಹೊರತಾಗಿಯೂ, ದೇಶವು ಧಾರ್ಮಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕೆಳಭಾಗದಲ್ಲಿದೆ. ಡಿಸೆಂಬರ್ 2022 ರಲ್ಲಿ, ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವಿಶ್ವಸಂಸ್ಥೆಯಲ್ಲಿ ನಿರ್ಣಯವನ್ನು ತರಲಾಯಿತು, ಇದನ್ನು ಯುಎಸ್ ಸೇರಿದಂತೆ ಡಜನ್‌ಗಟ್ಟಲೆ ದೇಶಗಳು ಬೆಂಬಲಿಸಿದವು.

ಗರ್ಭಿಣಿ, ಸಲಿಂಗಿಗಳಿಗೆ ನೇಣುಶಿಕ್ಷೆ, ಅಂಗವಿಕಲರಿಗೆ ವಿಷ, ಕಿಮ್‌ ಜಾಂಗ್‌ಗೆ ಕ್ರೌರ್ಯಕ್ಕಿಲ್ಲ ಕೊನೆ!

ಉತ್ತರ ಕೊರಿಯಾದಲ್ಲಿ ಹಾಲಿವುಡ್ ಚಲನಚಿತ್ರಗಳು ಅಥವಾ ಸರಣಿಗಳನ್ನು ಮಕ್ಕಳು ನೋಡುವುದು ಕೂಡ ಅಪರಾಧವಾಗಿದೆ. ಕಿಮ್‌ ಜಾಂಗ್‌ ಉನ್‌ ತನ್ನ ಹೊಸ ಆದೇಶದಲ್ಲಿ ಮಕ್ಕಳು ಹಾಲಿವುಡ್ ಚಲನಚಿತ್ರಗಳು ಅಥವಾ ಸರಣಿಗಳನ್ನು ವೀಕ್ಷಿಸಿದರೆ ಅವರು ಮತ್ತು ಅವರ ಪೋಷಕರನ್ನು ಜೈಲಿಗೆ ಹಾಕಲಾಗುತ್ತದೆ. ಅಷ್ಟೇ ಅಲ್ಲ, ಅವರ ಪೋಷಕರನ್ನು 6 ತಿಂಗಳ ಕಾಲ ಕಾರ್ಮಿಕ ಶಿಬಿರಗಳಿಗೆ ಕಳುಹಿಸಿ ಕೂಲಿ ಕೆಲಸ ಮಾಡಿಸಲಾಗುತ್ತದೆ.

ಮಗಳ ಹೆಸರು ಯಾರು ಇಡುವಂತಿಲ್ಲ, ಈಗಾಗಲೇ ಹೆಸರಿಟ್ಟಿದ್ದರೆ ಬದಲಿಸಿ; ಕಿಮ್ ಜಾಂಗ್ ಹೊಸ ಆದೇಶ!

click me!