ಹೆತ್ತವರೊಂದಿಗೆ ಊಟ ಮಾಡುತ್ತಲೇ ಪ್ರಾಣಬಿಟ್ಟ ಯುವತಿ; ಪ್ರಪಂಚ ಪರ್ಯಟನೆ ಮಾಡ್ಬೇಕಾದವ್ಳು ಜಗತ್ತನ್ನೇ ತೊರೆದ್ಳು

By BK Ashwin  |  First Published May 27, 2023, 3:53 PM IST

ಆಸ್ಟ್ರೇಲಿಯಾದ ಮಹಿಳೆ ವರ್ಲ್ಡ್‌ ಟೂರ್‌ ಮಾಡುವ ಯೋಜನೆಯನ್ನು ಹೊಂದಿದ್ದಳು. ಆದರೆ, ಮೇ 21 ರಂದು ರಾತ್ರಿ 10 ಗಂಟೆಯ ಬಳಿಕ ಆಕೆ ಹೃದಯ ಸ್ತಂಭನದಿಂದ ನಿಧನಳಾಗಿದ್ದಾಳೆ. 


ಬ್ರಿಸ್ಬೇನ್‌, ಅಸ್ಟ್ರೇಲಿಯಾ (ಮೇ 27, 2023): ಇತ್ತೀಚೆಗೆ ಹೃದಯಾಘಾತದಿಂದ ಯುವ ವಯಸ್ಸಿನವರು ಮೃತಪಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹಾಗೆ, ಇದ್ದಕ್ಕಿದ್ದಂತೆ ಸಾಯುವ ಪ್ರಕರಣಗಳು ಸಹ ಆಗಾಗ್ಗೆ ಕೇಳಿಬರುತ್ತಿರುತ್ತದೆ. ಇದೇ ರೀತಿ, ಆಸ್ಟ್ರೇಲಿಯಾದ ಯುವತಿಯೊಬ್ಬಳು ಹೆತ್ತವರೊಂದಿಗೆ ಊಟ ಮಾಡುತ್ತಲೇ ಮೃತಪಟ್ಟಿದ್ದಾಳೆ. 

ಹೌದು, 26 ವರ್ಷದ ಡ್ಯಾನಿ ಡುಚಾಟೆಲ್ ತನ್ನ ಕುಟುಂಬದೊಂದಿಗೆ ಭೋಜನ ಮಾಡುತ್ತಿದ್ದ ವೇಳೆಯಲ್ಲೇ ದುರಂತವಾಗಿ ಮೃತಪಟ್ಟಿದ್ದಾಳೆ.  News.com.au ನ ವರದಿಯ ಪ್ರಕಾರ ಆಸ್ಟ್ರೇಲಿಯಾದ ಮಹಿಳೆ ವರ್ಲ್ಡ್‌ ಟೂರ್‌ ಮಾಡುವ ಯೋಜನೆಯನ್ನು ಹೊಂದಿದ್ದಳು. ಆದರೆ, ಮೇ 21 ರಂದು ರಾತ್ರಿ 10 ಗಂಟೆಯ ಬಳಿಕ ಆಕೆ ಹೃದಯ ಸ್ತಂಭನದಿಂದ ನಿಧನರಾದರು ಎಂದು ವರದಿಯಾಗಿದೆ.

Tap to resize

Latest Videos

ಇದನ್ನು ಓದಿ: ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ಮೊರೆಟನ್ ಬೇನಲ್ಲಿರುವ ಅವರ ಮನೆಯಲ್ಲಿ ತನ್ನ ಹೆತ್ತವರೊಂದಿಗೆ ರಾತ್ರಿಯ ಊಟ ಮತ್ತು ಇಸ್ಪೀಟ್‌ ಕಾರ್ಡ್ಸ್‌ ಅನ್ನು ತಮ್ಮ ಮನೆಯವರ ಜತೆ ಆಡುತ್ತಿದ್ದ ಡುಚಾಟೆಲ್‌ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾಳೆ. 26 ವರ್ಷದ ಯುವತಿ ಇತ್ತೀಚೆಗೆ ತನ್ನ ಕಾಲು ಮುರಿದುಕೊಂಡಿದ್ದಾಳೆ ಮತ್ತು ತನ್ನ ಶಸ್ತ್ರಚಿಕಿತ್ಸೆಯಿಂದ ಆಕೆ ಚೇತರಿಸಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. 

ಶಸ್ತ್ರಚಿಕಿತ್ಸೆಯ ಕಾರಣ, ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಂಡಿತು ಮತ್ತು ಪಲ್ಮನರಿ ಎಂಬಾಲಿಸಮ್ ಅನ್ನು ಉಂಟುಮಾಡಿದೆ ಎಂದು ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ, ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆದರೂ ಶವಪರೀಕ್ಷೆ ಫಲಿತಾಂಶಗಳಿಗಾಗಿ ಇನ್ನೂ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವತಿಯ ತಾಯಿ ಮಗಳಿಗೆ ಸಿಪಿಆರ್‌ ಅನ್ನು ಮಾಡಿದರೂ ಸಹ ಆಕೆಯ ಆರೋಗ್ಯ ಸುಧಾರಿಸಲಿಲ್ಲ, ಅಷ್ಟರೊಳಗಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೃದಯ ಸ್ತಂಭನದಿಂದ 8ನೇ ತರಗತಿ ವಿದ್ಯಾರ್ಥಿ ಸಾವು: ಯುವ ವಯಸ್ಕರಲ್ಲೇ ಹೃದಯಾಘಾತ ಹೆಚ್ಚುತ್ತಿರೋದೇಕೆ?

ಮಗಳ ದುರಂತ ಸಾವನ್ನು ಆಕೆಯ ತಾಯಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು, "ನಮ್ಮ ಮಗಳು ಡೇನಿಯೆಲ್ಲಾ ಜೇಡ್ ಡುಚಾಟೆಲ್ ಕಳೆದ ರಾತ್ರಿ ಶಾಂತಿಯುತವಾಗಿ ನಿಧನರಾದರು ಎಂದು ನಾನು ನಿಮಗೆ ತಿಳಿಸಲು ಅತ್ಯಂತ ದುಃಖವಾಗಿದೆ. ಮುಂದಿನ ದಿನಗಳಲ್ಲಿ ನಾವು ನಿಮ್ಮೆಲ್ಲರ ಅಂತ್ಯಕ್ರಿಯೆಯ ವಿವರಗಳೊಂದಿಗೆ ಅಪ್‌ಡೇಟ್‌ ಮಾಡುತ್ತೇವೆ. ದಯವಿಟ್ಟು ನಮಗೆ ಸ್ವಲ್ಪ ಸಮಯ ನೀಡಿ’’ ಎಂದು ಅವರು ಬರೆದುಕೊಂಡಿದ್ದಾರೆ.

ಅಲ್ಲದೆ, 20,000 ಡಾಲರ್‌ ಹಣದಲ್ಲಿ 15,000  ಡಾಲರ್‌ಗಿಂತ ಹೆಚ್ಚು ಹಣ ಸಂಗ್ರಹಿಸಲು GoFundMe ಅನ್ನು ಪ್ರಾರಂಭಿಸಿದರು ಎಂದೂ ತಿಳಿದುಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಕುಟುಂಬದ ಸ್ನೇಹಿತ ಚಾಂಟೆಲ್ಲೆ ಲೇ ಬರೆದಿದ್ದು, "ಈ ಸಮಯದಲ್ಲಿ ಅವರ ಕುಟುಂಬವು ನಿಮ್ಮ ಹಣಕಾಸಿನ ಬೆಂಬಲವನ್ನು ಪ್ರಶಂಸಿಸುತ್ತದೆ. ಇದು ಅವರಿಗೆ ಮನೆಯಲ್ಲಿರಲು, ಅವರ ಮಗಳ ನಷ್ಟದ ದುಃಖವನ್ನು ಕಳೆಯಲು ಮತ್ತು ಡ್ಯಾನಿಯ ಅಂತ್ಯಕ್ರಿಯೆಗೆ ಸಂಬಂಧಿಸಿದ ವೆಚ್ಚವನ್ನು ಪಾವತಿಸಲು ಸಹಾಯ ಮಾಡಲು ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆ ನಿಮ್ಮ ಯಾವುದೇ ಸಹಾಯ (ದೊಡ್ಡದು ಅಥವಾ ಚಿಕ್ಕದು) ಬಹಳ ಮೆಚ್ಚುಗೆಯಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು’’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Shocking: ಗೆಳತಿ ಜತೆ ಮಾತಾಡುತ್ತಿದ್ದಂತೆ ಹೃದಯಾಘಾತಕ್ಕೆ ಬಲಿಯಾದ್ಲು 10ನೇ ಕ್ಲಾಸ್‌ ಬಾಲಕಿ..!

click me!