
ಸ್ವೀಡನ್ (ಅ.05) ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಗರುತಿಸಿಕೊಂಡಿರುವ ನೋಬೆಲ್ ಪ್ರಶಸ್ತಿ ಪ್ರಕಟಗೊಂಡಿದೆ. ನೊಬೆಲ್ ಪ್ರಶಸ್ತಿಗಳ ಪೈಕಿ ವೈದ್ಯಕೀಯ ಕ್ಷೇತ್ರಕ್ಕೆ ನೀಡುವ ನೊಬೆಲ್ ಮೆಡಿಸಿನ್ ಪ್ರಶಸ್ತಿ ಈ ಬಾರಿ ಮೂವರಿಗೆ ಸಿಕ್ಕಿದೆ. ಮೆದುಳಿನ ನರಕೋಶಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಗೌರವ ದಕ್ಕಿದೆ. ವಿಜ್ಞಾನಿಗಳಾದ ಕಾರ್ಲ್ ಡೀಸೆರೋತ್, ಪೀಟರ್ ಹೆಗೆಮನ್ ಹಾಗೂ ಜಾರ್ಗ್ ನಾಗೆಲ್‌ಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.
ಜರ್ಮನಿ ಹಾಗೂ ಅಮೆರಿಕನ್ ವಿಜ್ಞಾನಿಗಳಾದ 54 ವರ್ಷದ ಕಾರ್ಲ್ ಡೀಸೆರೋತ್, 71ರ ಹರೆಯದ ಪೀಟರ್ ಹೆಗೆಮನ್ ಹಾಗೂ 73 ವರ್ಷದ ಜಾರ್ಜ್ ನಾಗೆಲ್ ಗೌರವಕ್ಕೆ ಪಾತ್ರರಾಗಿದ್ದಾರೆ. ಬೆಳಕಿನ ಮೂಲಕ ನರಗಳ ನಿಯಂತ್ರಿಸುವ ಅಯಾನ್ ಹಾಗೂ ಅಪ್ಟೋಜೆನೆಟಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ. ಪ್ರಮುಖವಾಗಿ ವ್ಯಕ್ತಿಗಳ ನರಕೋಶಗಳ ಚಟುವಟಿಕೆಯನ್ನು ಬೆಳಕಿನ ಮೂಲಕ ನಿಯಂತ್ರಿಸುವ ವಿಧಾನವನ್ನು ಅಪ್ಟೋಜೆನೆಟಿಕ್ಸ್ ಎನ್ನಲಾಗುತ್ತದೆ.
ಅಪ್ಟೋಜೆನೆಟಿಕ್ಸ್ ಕ್ಷೇತ್ರದಲ್ಲಿನ ಕೊಡುಗೆಯನ್ನು ಪರಿಗಣಿಸಿ ಅಮೆರಿಕದ ವಿಜ್ಞಾನಿ ಕಾರ್ಲ್ ಡೀಸೆರೋತ್‌ಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಇನ್ನು ಜರ್ಮನಿಯ ವಿಜ್ಞಾನಿ ಪೀಟರ್ ಹೆಗೆಮನ್, ಬೆಳಕಿನಿಂದ ನಿಯಂತ್ರಿಸಬಹುದಾದ ಅಯಾನ್ ಚಾನೆಲ್ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಜರ್ಮನಿಯ ವಿಜ್ಞಾನಿ ಜಾರ್ಜ್ ನಾಗೆಲ್ ಅಯಾನ್ ಚಾನೆಲ್ ಮೂಲಕ ಜಂಟಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನೊಬೆಲ್ ಪ್ರತಿಷ್ಠಿತ ಪ್ರಶಸ್ತಿ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ, ಕೊಡುಗೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ನೊಬೆಲ್ ವೈದ್ಯಕೀಯ ಪ್ರಶಸ್ತಿ, ವೈದ್ಯಕೀಯ ಕ್ಷೇತ್ರದ ಸಾಧಕರ ಪರಿಗಣಿಸಿ ನೀಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ