
ಕಾಬೂಲ್(ಸೆ.09): ಅಫ್ಘಾನಿನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನಿಗಳು ಕತ್ತರಿ ಹಾಕಿದ್ದಾಯ್ತು. ಇನ್ನು ಉನ್ನತ ಶಿಕ್ಷಣಕ್ಕೂ ಕತ್ತರಿ ಹಾಕುವಂಥ ಹೇಳಿಕೆಯನ್ನು ದೇಶದ ಶಿಕ್ಷಣ ಸಚಿವನಾಗಿ ನೇಮಕವಾಗಿರುವ ತಾಲಿಬಾನ್ ನಾಯಕ ಶೇಖ್ ಮೌಲ್ವಿ ನೂರುಲ್ಲಾ ಮುನೀರ್ ನೀಡಿದ್ದಾನೆ.
‘ಪಿಎಚ್‌ಡಿ, ಸ್ನಾತಕೋತ್ತರ ಪದವಿ ಪಡೆದವರಿಗಿಂತ ಮುಲ್ಲಾಗಳು, ತಾಲಿಬಾನಿಗಳೇ ಶ್ರೇಷ್ಠ. ಅವರ ಮುಂದೆ ಯಾವ ಡಿಗ್ರಿಗೂ ಬೆಲೆ ಇಲ್ಲ’ ಎಂದು ನೂರುಲ್ಲಾ ಮುನೀರ್ ಹೇಳಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈತನ ಅಸಂಬದ್ಧ ಹೇಳಿಕೆಯ ವಿಡಿಯೋಗ ಈಗ ನಗೆಪಾಟಲಿಗೆ ಈಡಾಗಿದೆ. ಹಾಗೆಯೇ ಆಕ್ರೋಶ ಕೂಡ ವ್ಯಕ್ತವಾಗಿದೆ.
ಮಂಗಳವಾರವಷ್ಟೇ ರಚನೆಯಾದ ತಾಲಿಬಾನಿಗಳ ಸರ್ಕಾರದಲ್ಲಿ ನೂರುಲ್ಲಾ ಮುನೀರ್‌ಗೆ ಶಿಕ್ಷಣ ಸಚಿವ ಹುದ್ದೆಯನ್ನು ನೀಡಲಾಗಿತ್ತು. ಹುದ್ದೆಯನ್ನು ವಹಿಸಿಕೊಂಡ ಮಾರನೇ ದಿನವೇ ತನ್ನ ಪಾಂಡಿತ್ಯವನ್ನು ಪ್ರದರ್ಶಿಸುವ ಆತ, ‘ಇಂದು ಪಿಎಚ್‌ಡಿ ಡಿಗ್ರಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ಬೆಲೆ ಇಲ್ಲ. ಅಧಿಕಾರದಲ್ಲಿರುವ ಮುಲ್ಲಾಗಳು, ತಾಲಿಬಾನಿಗಳು ಇಂತಹ ಯಾವುದೇ ಡಿಗ್ರಿಯನ್ನು ಪಡೆದಿಲ್ಲ. ಪ್ರೌಢಶಾಲಾ ಶಿಕ್ಷಣವನ್ನೂ ಪಡೆದಿಲ್ಲ. ಶಾಲೆಗೆ ಕೂಡ ಹೋಗಿಲ್ಲ. ಆದರೂ ಅವರು ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆದವರಿಗಿಂತ ಶ್ರೇಷ್ಠ. ಹೀಗಾಗಿ ಡಿಗ್ರಿಗಳಿಗೆ ಬೆಲೆ ಇಲ್ಲ’ ಎಂದು ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ