ಪ್ರತಿಭಟನೆ ಹತ್ತಿಕ್ಕಲು ಗುಂಡಿನ ದಾಳಿ; ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿ ನಿಂತ ಮಹಿಳೆ!

Published : Sep 08, 2021, 06:26 PM IST
ಪ್ರತಿಭಟನೆ ಹತ್ತಿಕ್ಕಲು ಗುಂಡಿನ ದಾಳಿ; ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿ ನಿಂತ ಮಹಿಳೆ!

ಸಾರಾಂಶ

ತಾಲಿಬಾನ್ ಸರ್ಕಾರದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ಹಲವೆಡೆ ಪ್ರತಿಭಟನೆ ಬಿಸಿ ಪಾಕಿಸ್ತಾನವನ್ನು ದೇಶದಿಂದ ಹೊರಗಿಡುವಂತೆ ಮಹಿಳೆಯರು ಸೇರಿ ಹಲವರ ಪ್ರತಿಭಟನೆ ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗಂಡಿನ ದಾಳಿ, ಉಗ್ರನ ಮುಂದೆ ಧೈರ್ಯದಿಂದ ನಿಂತ ಮಹಿಳೆ

ಕಾಬೂಲ್(ಸೆ.08): ಆಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಸರ್ಕಾರ ರಚನೆಯಾಗಿದೆ. ಪಂಜಶೀರ್ ಮೇಲೆ ಪಾಕಿಸ್ತಾನ ಸೇನೆ ನೆರವಿನಿಂದ ತಾಲಿಬಾನ್ ದಾಳಿ ನಡೆಸಿ ಸಂಪೂರ್ಣ ಆಫ್ಘಾನಿಸ್ತಾನವನ್ನು ಉಗ್ರರು ಕೈವಶ ಮಾಡಿದ್ದಾರೆ. ಇದರ ಬಳಿಕ ಕಾಬೂಲ್ ಸೇರಿದಂತೆ ಹಲವೆಡೆ ಪಾಕಿಸ್ತಾನ ಕೈವಾಡದ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ. ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗುಂಡಿನ ಮಳೆ ಸುರಿಸಿದೆ. ಇದರ ನಡುವೆ ದಿಟ್ಟ ಮಹಿಳೆ ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿ ನಿಂತ ಫೋಟೋ ವೈರಲ್ ಆಗಿದೆ.

ಪಾಕ್‌ ವಿನಾಶವಾಗಲೆಂದು ಕಾಬೂಲ್‌ನಲ್ಲಿ ಪ್ರತಿಭಟನೆ

ಕಾಬೂಲ್ ನಗರದ ಹಲೆವೆಡೆ ಮಹಿಳೆಯರು ಸೇರಿದಂತೆ ಆಫ್ಘಾನ್ ನಿವಾಸಿಗಳು ಪಾಕಿಸ್ತಾನ ಪ್ರವೇಶ ಹಾಗೂ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲ್ಲು ತಾಲಿಬಾನ್ ಉಗ್ರರು ಸತತ ಗುಂಡಿನ ದಾಳಿ ನಡೆಸಿದ್ದಾರೆ. ಕಾಬೂಲ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗುಂಡು ಹಾರಿಸಲು ಮುಂದಾಗಿದೆ. ಆದರೆ ತಾಲಿಬಾನ್ ಉಗ್ರ ಮಹಿಳೆಗೆ ನೇರವಾಗಿ ಬಂದೂಕು ಹಿಡಿದು ಪ್ರತಿಭಟನೆ ನಿಲ್ಲಿಸುವಂತೆ ಎಚ್ಚರಿಸಿದ್ದಾರೆ. ಆದರೆ ಮಹಿಳೆ ಯಾವುದೇ ಅಳುಕಿಲ್ಲದೆ ಉಗ್ರನ ಬಂದೂಕಿನ ನಳಿಕೆ ಮುಂದೆ ದಿಟ್ಟವಾಗಿ ಘೋಷಣೆ ಕೂಗಿದ ಘಟನೆ ನಡೆದಿದೆ.

ಈ ಫೋಟೋ ವೈರಲ್ ಆಗಿದೆ ಉಗ್ರ ಬಂದೂಕು ಹಿಡಿದು ಮಹಿಳೆಗೆ ಗುರಿಟ್ಟು ನಿಂತಿದ್ದಾರೆ. ಇತ್ತ ಮಹಿಳೆ ಧೈರ್ಯವಾಗಿ ಪ್ರತಿಭಟನೆ ಮುಂದುವರಿಸಿದ ಫೋಟೋ ಭಾರಿ ವೈರಲ್ ಆಗಿದೆ. ಹಲವು ಪತ್ರಕರ್ತರು 1989ರಲ್ಲಿ ಚೀನಾದ ಟಿಯಾನನ್‌ಮೆನ್ ಸ್ಕ್ವೇರ್‌ನಲ್ಲಿ ನಡೆದ ಹತ್ಯಾಕಾಂಡ ನೆನೆಪಿಸುವಂತಿದೆ ಎಂದು ಉಲ್ಲೇಖಿಸಿದ್ದಾರೆ.

 

ತಾಲಿಬಾನಿ ಆಫ್ಘನ್‌ನಿಂದ ಭಾರತಕ್ಕೆ ಉಗ್ರ ಅಪಾಯ!

ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲಿಬಾನ್ ಆಡಳಿತದಲ್ಲಿ ಹೆಣ್ಣುಮಕ್ಕಳು ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಷರಿಯಾ ನಿಯಮದ ವಿರುದ್ಧ ಹೆಣ್ಣು ಮಕ್ಕಳು ಓಡಾಡಿದರೆ ಅಲ್ಲೆ ಸಮಾಧಿ. ಅದೆಷ್ಟೇ ಹಣ್ಣು ಮಕ್ಕಳು ಕಳೆದೊಂದು ತಿಂಗಳಲ್ಲಿ ತಾಲಿಬಾನ್ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ