
ಕೆನಡಾ(ಸೆ.08): ವಿದೇಶದಲ್ಲಿರುವ ಭಾರತೀಯರ ಮೇಲಿನ ಹಲ್ಲೆ ಪ್ರಕರಣಗಳು ಇತ್ತೀಚೆಗೆ ಕೊಂಚ ಕಡಿಮೆಯಾಗಿತ್ತು. ಭಾರತ ವಿದೇಶಾಂಗ ಸಚಿವಾಲಯ ವಿದೇಶದಲ್ಲಿರುವ ಭಾರೀಯರ ರಕ್ಷಣೆಗೆ ಹಲವು ಅಗತ್ಯದ ಕ್ರಮಗಳ್ನು ತೆಗೆದುಕೊಂಡಿದೆ. ಇದರ ನಡುವೆ ಇದೀಗ ಕೆನಾಡದಲ್ಲಿ ಭಾರತೀಯ ಮೂಲದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಜನಾಂಗೀಯ ದ್ವೇಷದಿಂದ ನಡೆದ ಕೊರೆಯಾಗಿದೆ ಎಂದು ಸಿಖ್ ಸಮುದಾಯ ಶಂಕೆ ವ್ಯಕ್ತಪಡಿಸಿದೆ.
ಪೋನ್ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ, ವಿದೇಶಿ ಗಂಡನ ಹುಚ್ಚಾಟ!
ನೋವಾ ಸ್ಕೊಟಿಯಾ ಪ್ರಾಂತ್ಯದ ಟ್ರುರೋ ನಗರದಲ್ಲಿ ಟ್ಯಾಕ್ಸಿ ಚಾಲನಕಾಗಿ ಕೆಲಸ ಮಾಡುತ್ತಿದ್ದ 23ರ ಹರೆಯದ ಪ್ರಬ್‌ಜ್ಯೋತ್ ಸಿಂಗ್ ಕಾತ್ರಿ ಮೇಲೆ ದುರ್ಷರ್ಮಿಗಳು ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ. ಸೈಂಟ್ ರಾಬಿ ಅಪಾರ್ಟ್‌ಮೆಂಟ್‌ನಲ್ಲಿ ಪ್ರಬ್‌ಜ್ಯೋತ್ ಮೇಲೆ ಹಲ್ಲೆ ಮಾಡಲಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳು ಹಲ್ಲೆಯಾಗುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಿಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಬ್‌ಜ್ಯೋತ್ ಸಿಂಗ್‌ನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಪ್ರಬ್‌ಜ್ಯೋತ್ ಸಾವನ್ನಪ್ಪಿದ್ದಾನೆ..
ಪ್ರಬ್‌ಜ್ಯೋತ್ ಸಿಂಗ್ ಕೊಲೆ ಪ್ರಕರಣ ಸಂಭಂಧ ಕೆನಾಡ ಪೊಲೀಸರು ಓರ್ವನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದರ ನಡುವೆ ಪ್ರಬ್‌ಜ್ಯೋತ್ ಸಿಂಗ್ ಕುಟುಂಬಸ್ಥರು ಹಾಗೂ ಸಮುದಾಯವನ್ನು ಭೇಟಿ ಮಾಡಿದ ಪೊಲೀಸ್ ಅಧಿಕಾರಿ ಮೆಕ್‌ನೈಲ್, ಸಾಂತ್ವನ ಹೇಳಿದ್ದಾರೆ.
ನಾಯಿ ಬೆಲ್ಟ್ ಹಾಕಿ ಗಂಡನ ತಿರುಗಾಡಿಸುತ್ತಿದ್ದ ಹೆಂಡತಿಗೆ ಬಿತ್ತು 2 ಲಕ್ಷ ರೂ. ದಂಡ!
ಪ್ರಬ್‌ಜ್ಯೋತ್ ಕೊಲೆ ಜನಾಂಗೀಯ ದ್ವೇಷದಿಂದ ನಡೆದಿರುವ ಕೃತ್ಯ. ಟ್ಯಾಕ್ಸಿ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವ ವೇಳೆ ಪ್ರಬ್‌ಜ್ಯೋತ್ ಸಿಂಗ್ ಮೇಲೆ ದಾಳಿ ನಡೆದಿದೆ. ಆಪ್ತನನ್ನು ಕಳೆದುಕೊಂಡು ನೋವು ಒಂದೆಡೆಯಾದರೆ, ಜನಾಂಗೀಯ ದಾಳಿ ಮತ್ತೊಂದು ಆತಂಕ ಎಂದು ಪ್ರಬ್‌ಜ್ಯೋತ್ ಸಿಂಗ್ ಗೆಳೆಯ ಜಿತೇಂದ್ರ ಕುಮಾರ್‌ದೀಪ್ ಹೇಳಿದ್ದಾರೆ.
ಕೆನಾಡದಲ್ಲಿರುವ ಭಾರತೀಯರಿಗೆ ಅಭದ್ರತೆ ಕಾಡುತ್ತಿದೆ. ಜನಾಂಗೀಯ ನಿಂದನೆ ಕಾರಣದಿಂದ ಹಲ್ಲೆಗಳಾಗುತ್ತಿದೆ. ಭಾರತೀಯರ ಪ್ರಾಣಕ್ಕೆ ಅಪಾಯವಿದೆ ಎಂದು ಅಂಗಪಾಲ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ