ಕಚೇರಿ ಅವಧಿಯಲ್ಲಿ ನಮಾಜ್ ಮಾಡುವಂತಿಲ್ಲ, ಮುಸ್ಲಿಂ ಉದ್ಯೋಗಿಗಳಿಗೆ ಚೀನಾ ಕಂಪನಿ ನಿರ್ಬಂಧ!

By Suvarna NewsFirst Published Jun 30, 2020, 12:48 PM IST
Highlights

ಚೀನಾ ಕಂಪನಿಗಳಿಂದ ಮುಸಲ್ಮಾನ ವಿರೋಧಿ ನಡೆ| ಕಚೇರಿ ಅವಧಿಯಲ್ಲಿ ನಮಾಜ್ ಮಾಡುವುದಕ್ಕೆ ಉದ್ಯೋಗಿಗಳಿಗೆ ನಿರ್ಬಂಧ ಹೇರಿದ ಚೀನಾ| ಮಿತ್ರ ರಾಷ್ಟ್ರದಲ್ಲಿ ಚೀನಾದ ಕಂಪನಿಗಳ ನಡೆಗೆ ವ್ಯಾಪಕ ಆಕ್ರೋಶ

ಇಸ್ಲಮಾಬಾದ್(ಜೂ.30): ಮುಸ್ಲಿಂ ಮೌಲ್ವಿಯೊಬ್ಬರು ಚೀನಾ ಕಂಪನಿಗಳು ಪಾಕಿಸ್ತಾನದಲ್ಲಿರುವ ಮುಸಲ್ಮಾನ ಉದ್ಯೋಗಿಗಳಿಗೆ ನಮಾಜ್ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

ಹೌದು ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೌಲ್ವಿ ಚೀನಾ ಕಂಪನಿಗಳ ಈ ನಡೆಯನ್ನು ಖಂಡಿಸುವಂತೆ ಕರೆ ನೀಡಿದ್ದಾರೆ. ಅಲ್ಲದೇ ಈ ದೇಶ ಅವರದ್ದಲ್ಲ, ಕಂಪನಿಗಳು ಇಲ್ಲಿನ ಸ್ಥಳೀಯ ನಿಯಮವನ್ನು ಪಾಲಿಸಬೇಕು ಎಂಬುವುದನ್ನು ಅವರಿಗೆ ತಿಳಿಸಿ ಎಂದೂ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲದೇ ನಾವು ನಮಾಜ್ ನಿರ್ಲಕ್ಷಿಸುವಂತಿಲ್ಲ. ಆದರೀಗ ತಾವು ಇದರಿಂದ ಉದ್ಯೋಗ ಕಳೆದುಕೊಳ್ಳುತ್ತೇವೆಂಬ ಭೀತಿ ಜನರಲ್ಲಿ ಮೂಡಲಾರಂಭಿಸಿದೆ. ಹೀಗಾಗಿ ಸದ್ಯ ಇದು ಆತ್ಮಾಭಿಮಾನದ ವಿಚಾರವಾಗಿ ಮಾರ್ಪಾಡಾಗಿದೆ ಎಂದೂ ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.

'102 ಹಿಂದೂಗಳು ಇಸ್ಲಾಂಗೆ ಮತಾಂತರ, ಮಸೀದಿಯಾಗಿ ಮಾರ್ಪಾಡಾದ ಮಂದಿರ'

ಚೀನಾ ಪಾಕಿಸ್ತಾನದ ಮಿತ್ರ ರಾಷ್ಟ್ರವೆನಿಸಿಕೊಂಡಿದೆ, ಅಲ್ಲದೇ ಡ್ರ್ಯಾಗನ್ ಪಾಕಿಸ್ತಾನದಲಲಿ ದೀರ್ಘ ಕಾಲದ ಹೂಡಿಕೆಯನ್ನೂ ಮಾಡಿದೆ. ಹೀಗಿರುವಾಗ ಪಾಕಿಸ್ತಾನದಲ್ಲಿರುವ ಚೀನಾ ಮೂಲದ ಕಂಪನಿಗಳು ಇಂತಹ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಆದರೀಗ ಚೀನಾ ಕಂಪನಿಗಳು ಹೇರಿರುವ ಈ ನಿಯಮ ಹಾಗೂ ಪಾಕಿಸ್ತಾನ ಇದನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಶೀಘ್ರವೇ ಉಭಯ ರಾಷ್ಟ್ರಗಳ ನಡುವೆ ಬಿರುಕು ಮೂಡುವ ಸುಳಿವು ನೀಡಿದೆ.

ಕರ್ತಾರ್ಪುರ್ ಕಾರಿಡಾರ್ ಪುನರ್ ಆರಂಭಕ್ಕೆ ಪಾಕ್ ಮನವಿ; ತಿರಸ್ಕರಿಸಿದ ಭಾರತ!

ಇನ್ನು ಈಗಾಗಲೇ ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್ ಚೀನಾದ ಕ್ಸಿನ್‌ಜಿಯಾಂಗ್ ನಗರದ ಕರಮೇಯಲ್ಲಿ ಗಡ್ಡಧಾರಿ ಪುರುಷರು ಹಾಗೂ ತಲೆಗೆ ಶಾಲು ಹೊದ್ದುಕೊಳ್ಳುವ ಸ್ತ್ರೀಯರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವುದನ್ನು ನಿರ್ಬಂಧಿಸಿದ್ದಾರೆ, ಅವರ ಈ ನಡೆ ಮುಸಲ್ಮಾನ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ದಿನೇ ದಿನೇ ಮುಸಲ್ಮಾನರ ವಿರುದ್ಧ ಚೀನಾ ತಾರತಮ್ಯ  ಹೆಚ್ಚುತ್ತಿದ್ದು, ವಿವಾದಾತ್ಮಕ ನೀತಿಗಳನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ.
 

click me!