
ಇದು ಒಂದೇ ಒಂದು ಆಸ್ಪತ್ರೆಯೂ ಇಲ್ಲದ ಜಗತ್ತಿನ ದೇಶ, ಇಲ್ಲಿ ಕಳೆದ 96 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ, ಅಚ್ಚರಿ ಎನಿಸುತ್ತೆ ಅಲ್ವಾ, ಆಸ್ಪತ್ರೆಯೇ ಇಲ್ಲದೇ ಹೋದರೆ ಜನ ಹುಷಾರು ತಪ್ಪಿದರೆ ಏನ್ ಮಾಡ್ತಾರೆ ಎಂಬ ಕುತೂಹಲವೂ ನಿಮ್ಮನ್ನು ಕಾಡಬಹುದು. ಆದರೂ ಈ ದೇಶದಲ್ಲಿ ಆಸ್ಪತ್ರೆಯೇ ಇಲ್ಲ ಎಂಬುದು ಅಷ್ಟೇ ಸತ್ಯ. ಹಾಗಿದ್ದರೆ ಆ ದೇಶ ಯಾವುದು ಅಂತ ಈಗ ನೋಡೋಣ.
ಅಂದಹಾಗೆ ಈ ಆಸ್ಪತ್ರೆಯೇ ಇಲ್ಲದ ದೇಶ ಇರೋದು ಯುರೋಪ್‌ನಲ್ಲಿ ಯುರೋಪ್‌ನ ವ್ಯಾಟಕನ್ ಸಿಟಿಯೇ ಆಸ್ಪತ್ರೆಯೇ ಇಲ್ಲದ ದೇಶ ಎನಿಸಿದೆ. ಕ್ರೈಸ್ತರ ಧಾರ್ಮಿಕ ಮಹತ್ವದ ಸ್ಥಳವಾಗಿರುವ ವ್ಯಾಟಿಕನ್ ನಗರವು ಪೋಪ್, ಹಾಗೆಯೇ ಇತರ ಪ್ರಮುಖ ಧಾರ್ಮಿಕ ಮುಖಂಡರು ಮತ್ತು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪಾದ್ರಿಗಳ ನೆಲೆಯಾಗಿದೆ ಮತ್ತು ನಗರ ರಾಜ್ಯ ರಚನೆಯಾದಾಗಿನಿಂದಲೂ ಅಲ್ಲಿ ಆಸ್ಪತ್ರೆಯನ್ನು ನಿರ್ಮಿಸುವಂತೆ ಹಲವಾರು ವಿನಂತಿಗಳನ್ನು ಸಲ್ಲಿಸಲಾಗಿದ್ದರೂ, ಅವೆಲ್ಲವನ್ನೂ ತಿರಸ್ಕರಿಸಲಾಗಿದೆ. ಶಾಲೆಗಳು ಆಸ್ಪತ್ರೆಗಳು ಹಾಗೂ ಇತರ ಮೂಲಭೂತ ಅಗತ್ಯಗಳು ಒಂದು ದೇಶ, ನಗರದಲ್ಲಿ ಅಗತ್ಯವಾಗಿ ಬೇಕಾದ ಸೌಲಭ್ಯಗಳಾಗಿವೆ. ಆದರೆ ಈ ಮೂರು ಸೌಲಭ್ಯಗಳು ಆ ದೇಶದಲ್ಲಿ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯವೆನಿಸುತ್ತದೆ. ಹಾಗಿದ್ದರೂ ಇಲ್ಲಿ ಆಸ್ಪತ್ರೆಯೇ ಇಲ್ಲದ ದೇಶವೊಂದಿದೆ ಎಂಬುದನ್ನು ನೀವು ನಂಬಲೇಬೇಕಿದೆ.
ಇದನ್ನೂ ಓದಿ:ಕಣ್ಣಿಲ್ಲದವರಿಗೂ ಸಮುದ್ರ ಫೀಲ್ ಮಾಡಿಕೊಳ್ಳೋ ಚಾನ್ಸ್, ಅಬುಧಾಬಿಯಿಂದ ಹೊಸ ಯತ್ನ
ನಾವು ಮಾತನಾಡುತ್ತಿರುವ ದೇಶ ವ್ಯಾಟಿಕನ್ ನಗರ, ಕ್ರಿಶ್ಚಿಯನ್ ಧರ್ಮದ ಕೇಂದ್ರಬಿಂದು ಮತ್ತು ವಿಶ್ವದ ಅತ್ಯಂತ ಚಿಕ್ಕ ದೇಶವಾಗಿದೆ. ರೋಮನ್ ಕ್ಯಾಥೋಲಿಕ್ ಚರ್ಚ್‌ನ ನೆಲೆ ಮತ್ತು ಕ್ಯಾಥೋಲಿಕ್ ಧರ್ಮದ ಮೆಕ್ಕಾ ಎಂದು ಕರೆಯಲ್ಪಡುವ ಈ ವ್ಯಾಟಿಕನ್ ನಗರವು ತನ್ನ ರಾಷ್ಟ್ರೀಯ ಗಡಿಯೊಳಗೆ ಒಂದೇ ಒಂದು ಆಸ್ಪತ್ರೆಯನ್ನು ಹೊಂದಿಲ್ಲ ಮತ್ತು ಹೆಚ್ಚು ಆಶ್ಚರ್ಯಕರವಾಗಿ, ಈ ಸಣ್ಣ ನಗರ ರಾಜ್ಯದಲ್ಲಿ ಸುಮಾರು 96 ವರ್ಷಗಳಿಂದ ಯಾವುದೇ ಮಗು ಜನಿಸಿಲ್ಲ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ವ್ಯಾಟಿಕನ್ ನಗರವನ್ನು 1929ನೇ ಇಸವಿಯ ಫೆಬ್ರವರಿ 11ರಂದು ಸ್ವಾಯತ್ತ ದೇಶವೆಮದು ಅಧಿಕೃತವಾಗಿ ಘೋಷಿಸಲಾಯ್ತು. ಹೀಗೆ ದೇಶವಾದಾಗಿನಿಂದಲೂ ಈ ನಗರದಲ್ಲಿ ಒಂದೇ ಒಂದು ಮಗು ಜನಿಸಿಲ್ಲ.
ಯಾಕೆ ವ್ಯಾಟಿಕನ್ ಸಿಟಿಯಲ್ಲಿ ಆಸ್ಪತ್ರೆ ಇಲ್ಲ
ವ್ಯಾಟಿಕನ್ ನಗರವು ಪೋಪ್, ಹಾಗೆಯೇ ಇತರ ಪ್ರಮುಖ ಧಾರ್ಮಿಕ ಮುಖಂಡರು ಮತ್ತು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪಾದ್ರಿಗಳ ನೆಲೆಯಾಗಿದೆ, ಮತ್ತು ನಗರ ರಾಜ್ಯದಲ್ಲಿ ಆಸ್ಪತ್ರೆಯನ್ನು ನಿರ್ಮಿಸುವಂತೆ ಹಲವಾರು ವಿನಂತಿಗಳು ಕೇಳಿ ಬಂದರೂ ಆ ಮನವಿಯನ್ನೆಲ್ಲಾ ತಿರಸ್ಕರಿಸಲಾಯ್ತು. ಹೀಗಾಜಗಿ ಇಲ್ಲಿ ಆಸ್ಪತ್ರೆ ಇಲ್ಲ, ಅದೃಷ್ಟವಶಾತ್, ವ್ಯಾಟಿಕನ್ ನಗರವು ಇಟಲಿಯ ರಾಜಧಾನಿ ರೋಮ್‌ನ ಮಧ್ಯದಲ್ಲಿದೆ ಮತ್ತು ಯಾರಿಗಾದರೂ ಆಸ್ಪತ್ರೆ ಆರೈಕೆಯ ಅಗತ್ಯವಿರುವ ಪರಿಸ್ಥಿತಿ ಬಂದಾಗಲೆಲ್ಲಾ ಅವರನ್ನು ಇಟಾಲಿಯನ್ ರಾಜಧಾನಿಗೆ ರೋಮ್‌ಗೆ ಕರೆದೊಯ್ಯಲಾಗುತ್ತದೆ.
ಇದನ್ನೂ ಓದಿ:ನಕಲಿ ವೈದ್ಯನಿಂದ ಪೃಷ್ಠದ ಗಾತ್ರ ಹೆಚ್ಚಿಸುವ ಸರ್ಜರಿಗೆ ಒಳಗಾದ ಮಹಿಳೆ ಸಾವು
ಗರ್ಭಾವಸ್ಥೆಯಲ್ಲೇ ಅಂಡಾಶಯದ ಕ್ಯಾನ್ಸರ್: ತಾಯಿಯ ಚಿಕಿತ್ಸೆಗಾಗಿ ಎರಡೆರಡು ಬಾರಿ ಜನಿಸಿದ ಮಗು
ಅತೀ ಅಪರೂಪವೆನಿಸುವ ವೈದ್ಯಕೀಯ ಅದ್ಭುತವೊಂದರಲ್ಲಿ ಒಂದೇ ಮಗು ತಾಯಿ ಗರ್ಭದಿಂದ ಎರಡು ಬಾರಿ ಜನಿಸಿದೆ. ಇದು ಹೇಗೆ ಸಾಧ್ಯ ಇದೆಂಥಾ ಅಚ್ಚರಿ ಎಂದು ನಿಮಗೂ ಅಶ್ಚರ್ಯವಾಗಬಹುದು. ಆದರೆ ಇದು ನಿಜವಾಗಿಯೂ ನಡೆದಂತಹ ಘಟನೆ. ಆಕ್ಸ್‌ಫರ್ಡ್ ನಿವಾಸಿಯಾಗಿದ್ದ ಶಿಕ್ಷಕಿ ಲೂಸಿ ಇಸಾಕ್ ಎಂಬುವವರು 12 ವಾರಗಳ ಗರ್ಭಿಣಿಯಾಗಿದ್ದ ವೇಳೆಯೇ ಅವರು ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗಿರುವುದು ತಿಳಿದು ಬಂತು ಹೀಗಾಗಿ ಅವರು ಸುಧೀರ್ಘ 5 ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಮಯದಲ್ಲಿ ಶಸ್ತ್ರಚಿಕಿತ್ಸಕರು ಆಕೆಯ ಗರ್ಭಾಶಯವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದರು. ಈ ವೇಳೆ ಆಕೆಯ ಗರ್ಭದಲ್ಲಿ ಇನ್ನಷ್ಟೇ ಸಂಪೂರ್ಣವಾಗಿ ಬೆಳೆದಿರದ ಮಗುವೂ ಇತ್ತು. ನಂತರ ಕ್ಯಾನ್ಸರ್ ಚಿಕಿತ್ಸೆ ಮುಗಿದ ನಂತರ ಅವರ ಮಗು ರಾಫರ್ಟಿ ಐಸಾಕ್ ಅವರನ್ನು ಮತ್ತೆ ತಾಯಿಯ ಗರ್ಭದೊಳಗೆ ಕೂರಿಸಿ ಒಳಗೆ ಕಳುಹಿಸಲಾಯ್ತು. ಮತ್ತು ಜನವರಿ ಅಂತ್ಯದ ವೇಳೆಗೆ ಆತ ನವಮಾಸ ತುಂಬಿ ಮತ್ತೆ ಜನಿಸಿದನು ಹೀಗಾಗಿ ಆ ಮಗುವಿಗೆ ಇದು 2ನೇ ಜನ್ಮವೆಂದೇ ಹೇಳಬಹುದು ಈ ಸಮಯದಲ್ಲಿ ಮಗು 6 ಪೌಂಡ್ 5 ಔನ್ಸ್ ತೂಕವಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ