ಸಮುದ್ರ ತನ್ನದಲ್ಲದ ಯಾವುದನ್ನು ತನ್ನೊಡಲೊಳಗೆ ಇರಿಸಿಕೊಳ್ಳುವುದಿಲ್ಲ. ಮನುಷ್ಯರ ಹೆಣವನ್ನಾದರೂ ಅಷ್ಟೇ ಸಮುದ್ರದದಾಳದಲ್ಲಿರುವ ಜೀವ ಜಂತುಗಳಾದರೂ ಅಷ್ಟೇ, ಜೀವ ಇರದ ಯಾವುದನ್ನು ತನ್ನೊಳಗೆ ಇರಿಸಿಕೊಳ್ಳದ ಸಮುದ್ರ ಅದನ್ನು ತಂದು ತೀರಕ್ಕೆಸೆದು ಹೋಗುವುದು.
ಸಮುದ್ರದಾಳದಲ್ಲಿ ಭೂಮಿಯ ಒಡಲಲ್ಲಿ ಇರುವಂತೆ ಸಾವಿರಾರು ವಿಭಿನ್ನ ವಿಶೇಷವೆನಿಸಿದ ಜೀವ ಜಂತುಗಳಿವೆ. ಅವು ಕೆಲವೊಮ್ಮ ಅಪರೂಪಕ್ಕೆ ಎಂಬಂತೆ ಸಮುದ್ರ ತೀರಕ್ಕೆ ಬಂದು ಎಲ್ಲರನ್ನು ಅಚ್ಚರಿಗೆ ದೂಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಮುಂಜಾನೆಯ ತಂಪಾದ ಹವೆಗೆ ವಾಕ್ ಮಾಡಲೆಂದು ಬೀಚ್‌ಗೆ ಹೋದ ಮಹಿಳೆಯೊಬ್ಬರು ಅಲ್ಲಿ ಕಂಡ ವಿಚಿತ್ರ ಜೀವಜಂತುಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಅವರು ಅದನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೋಟೋ ಸಮೇತ ಶೇರ್ ಮಾಡಿದ್ದು, ಅನೇಕರು ಇದೇನು ಎಂದು ಅಚ್ಚರಿಗೊಳಗಾಗಿದ್ದಾರೆ.
ಅಂದಹಾಗೆ ಈ ರೀತಿ ವಿಚಿತ್ರ ಜೀವಜಂತುಗಳು ಕಂಡು ಬಂದಿದ್ದು, ನ್ಯೂಜಿಲ್ಯಾಂಡ್‌ನ ಉತ್ತರ ಐಸ್‌ಲ್ಯಾಂಡ್‌ನ ಬೀಚೊಂದರಲ್ಲಿ. ಅನ್ಯಲೋಕದ, ಸಾಮಾನ್ಯವಾಗಿರದ ಈ ವಿಚಿತ್ರ ಜೀವ ಜಂತುವನ್ನು ಕಂಡು ಮಹಿಳೆ ಅಚ್ಚರಿಗೆ ಒಳಗಾಗಿದ್ದು, ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಮೀನುಗಾರರ ಬಲೆಗೆ ಬಿತ್ತು ಅತೀ ಅಪರೂಪದ ನೀಲಿ ಸಿಗಡಿ
ಕೈಲಿ ಮಾರ್ಮನ್ (Kyley Morman) ಎಂಬ ಮಹಿಳೆಗೆ ಈ ವಿಚಿತ್ರ ಜೀವಜಂತುಗಳು ಕಾಣಿಸಿಕೊಂಡಿವೆ. ದಿನವೂ ಮುಂಜಾನೆ ಪಾಪಮೋವಾ ಬೀಚ್‌ನಲ್ಲಿ ವಾಕ್ ಹೋಗುವ ಕೈಲಿ ಮಾರ್ಮನ್‌ಗೆ ಮೇ 7 ರಂದು ಅಶ್ಚರ್ಯ ಕಾದಿತ್ತು. ಬೀಚ್‌ನ ಮರಳಲ್ಲಿ ಎಡವಿ ಬಿದ್ದ ಅವರಿಗೆ ಅಲ್ಲಿ ಈ ವಿಶೇಷವೆನಿಸಿದ ಜೀವಜಂತುಗಳು ಕಾಣಿಸಿದವು. ಈ ಬಗ್ಗೆ ನ್ಯೂಜಿಲ್ಯಾಂಡ್‌ನ (New Zealand) ವೆಬ್‌ಸೈಟೊಂದಕ್ಕೆ ಮಾತನಾಡಿದ ಅವರು, ನಾನು ಈ ಘಟನೆ ನಡೆದಾಗ ಮುಂಜಾನೆ ವಾಕ್‌ನಲ್ಲಿದ್ದೆ. ಇವು ನನ್ನ ಕಣ್ಣಿಗೆ ಬಿದ್ದಾಗ ಅಚ್ಚರಿಯ ಜೊತೆ ಒಂತರ ಅನುಭವ ಆಯ್ತು. ಹುಳಗಳಂತಿರುವ ಜೊತೆಗೆ ಚಿಪ್ಪನ್ನು ಹೊಂದಿರುವ ವಿಚಿತ್ರ ಜೀವಜಂತುಗಳು ಇವುಗಳಾಗಿದ್ದವು ಎಂದು ಅವರು ಹೇಳಿದ್ದಾರೆ.
5 ಮೀಟರ್ ಉದ್ದವಿದ್ದ ಈ ಜೀವಿಗಳು ಸಂಪೂರ್ಣವಾಗಿ ಬಹಳ ನಾಜೂಕು ಮೇಲ್ಮೆಯನ್ನು ಹೊಂದಿದ್ದವು, ಅವುಗಳ ಒಂದು ಭಾಗದಲ್ಲಿ ಚಿಪ್ಪಿನ ಆಕಾರವಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಈ ವಿಚಿತ್ರವನ್ನು ನೋಡಿರುವ ಮತ್ತೊಬ್ಬ ಸ್ಥಳೀಯರಾದ ಅನಿತಾ ಬೆಥೂನ್ (Anita Bethune)ಕೂಡ ಇದೇನು ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದರು.
Lobster ಎಂಬ ವಿಚಿತ್ರ ಸಮುದ್ರ ಜೀವಿ ತಿನ್ನೋ ತಟ್ಟೆಯಲ್ಲಿ ಬಂದದ್ದು ಹೇಗೆ?
ಈ ವಿಚಿತ್ರ ಜಂತುಗಳ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಜನ ಅದೇನೆಂದು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ. ಕೆಲವು ಬಳಕೆದಾರರು ಜೀವಿಗಳು ವಾಸ್ತವವಾಗಿ ಇದು 'ಗೂಸೆನೆಕ್ ಬಾರ್ನಾಕಲ್ಸ್' ಎಂಬ ಜೀವಿ ಎಂದು ಹೇಳಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಕೂಡ ಈ ಬಗ್ಗೆ ವರದಿ ಮಾಡಿದ್ದು, ಕೆಲವು ತಜ್ಞರು ಇವು ಸಮುದ್ರದಾಳದಲ್ಲಿರುವ ಅಕಶೇರುಕ ಕ್ಯುರೇಟರ್ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದೆ.
ಇವು ವಿಲಕ್ಷಣವಾದ ಗ್ರಹಣಾಂಗಗಳನ್ನು ಹೊಂದಿದ್ದು ಲೆಪಾಡಿಡೆ ಕುಟುಂಬದಲ್ಲಿ ಬರ್ನಾಕಲ್ ಜಾತಿಗೆ ಸೇರಿದ್ದವಾಗಿವೆ. ಮೆಡಿಟರೇನಿಯನ್ ಪ್ರದೇಶದವರು ಇದನ್ನು ತಿನ್ನುತ್ತಾರೆ. ಆದಾಗ್ಯೂ, ನಾನು ಅವುಗಳನ್ನು ಎಂದಿಗೂ ತಿನ್ನಲಿಲ್ಲ ಎಂದು ತಜ್ಞರೊಬ್ಬರು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ ಇದು ನ್ಯೂಜಿಲೆಂಡ್‌ನ (New Zealand) ಸುತ್ತಲೂ ಕಾರಣಾಂತರಗಳಿಂದ ಸಾಮಾನ್ಯವೆಂದು ಕೆಲವರು ಹೇಳಿದ್ದಾರೆ.
ಈ ಚಿತ್ರದಲ್ಲಿರುವ ಪ್ರತಿಯೊಂದು ಕೂಡ ಪ್ರತ್ಯೇಕವಾದ ಜೀವ ಜಂತಾಗಿದ್ದು, ಇವರು ತಿರುಳಿರುವವ ಕಾಂಡ ಅಥವಾ ಪುಪ್ಷಮಂಜರಿಯಷ್ಟು ಅಂದರೆ 1.5 ರಿಂದ 30 ಇಂಚಿನಷ್ಟು ಉದ್ದ ಬೆಳೆಯುತ್ತದೆ ಮತ್ತುಇವು ನೀರಲ್ಲಿ ತೇಲುವ ಅವಶೇಷಗಳಿಗೆ ಅಂಟಿಕೊಳ್ಳುತ್ತವೆ ಟೆಕ್ಸಾಸ್ ಉದ್ಯಾನವನಗಳು (Texas Parks and Wildlife Department) ಮತ್ತು ವನ್ಯಜೀವಿ ಇಲಾಖೆಯ ಪ್ರಕಾರ, ಇದರ ಕೊನೆಯಲ್ಲಿ ಕ್ಯಾಪಿಟುಲಮ್ ಇದೆ, ಇದು ಶೆಲ್ ಪ್ಲೇಟ್‌ಗಳಿಂದ ಆವೃತವಾದ ದೇಹವಾಗಿದೆ ಎಂದು ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ