ನೇಪಾಳ ರಾಷ್ಟ್ರಪತಿ ರಾಮ ಚಂದ್ರ ಪೌದೆಲ್‌ಗೆ ಹೃದಯಾಘಾತ, ಆಸ್ಪತ್ರೆ ದಾಖಲು!

Published : Jun 13, 2023, 09:39 PM ISTUpdated : Jun 13, 2023, 09:43 PM IST
ನೇಪಾಳ ರಾಷ್ಟ್ರಪತಿ ರಾಮ ಚಂದ್ರ ಪೌದೆಲ್‌ಗೆ ಹೃದಯಾಘಾತ, ಆಸ್ಪತ್ರೆ ದಾಖಲು!

ಸಾರಾಂಶ

ಇತ್ತೀಚೆಗೆ ನೇಪಾಳ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮ ಚಂದ್ರ ಪೌದೆಲ್‌ಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಠ್ಮಂಡು(ಜೂ.13): ನೇಪಾಳ ರಾಷ್ಟ್ರಪತಿ ರಾಮ ಚಂದ್ರ ಪೌದೆಲ್‌ಗೆ ಹೃದಯಾತವಾಗಿದೆ. 78 ವರ್ಷದ ಪೌದೆಲ್ ಅವರನ್ನು ನೇಪಾಳದ ಶಹೀದ್ ಗಂಗಾಲಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದೆ. ಇಂದು ಬೆಳಗ್ಗೆ ಪೌದೆಲ್‌ ತೀವ್ರ ಎದೆನೋವಿನಿಂದ ಬಳಲಿದ್ದಾರೆ. ಹೀಗಾಗಿ ತಕ್ಷಣವೇ ಪೌದೆಲ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತವಾಗಿರುವುದನ್ನು ದೃಢಪಡಿಸಿದ್ದಾರೆ. ಹೀಗಾಗಿ ಕುರ್ತು ನಿಘಾತ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. 

ಪೌದೆಲ್ ಹೃದಯದಲ್ಲಿ ಕಾಣಿಸಿಕೊಂಡಿರುವ ಬ್ಲಾಕೇಜ್‌ಗೆ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗಿದೆ. ಇದೀಗ ಮಂದಿನ 2 ದಿನಗಳ ಕಾಲ ಪೌದೆಲ್ ಅವರನ್ನು ಅಬರ್ಸವೇಶನ್‌ನಲ್ಲಿ ಇಡಲಾಗಿದೆ. ಸದ್ಯ ರಾಮ ಚಂದ್ರ ಪೌದೆಲ್ ಆರೋಗ್ಯ ಸ್ಥಿರವಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಬಳಿಕ ಪೌದೆಲ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

'ಅಖಂಡ ಭಾರತ' ಮ್ಯಾಪ್‌ಗೆ ತಿರುಗೇಟು, ಹಿಮಾಚಲ-ಬಂಗಾಳದ ಭಾಗ ತನ್ನದು ಎನ್ನುವ ನಕ್ಷೆ ಪ್ರಕಟಿಸಿದ ನೇಪಾಳ!

ಮಾರ್ಚ್ ತಿಂಗಳಲ್ಲಿ ರಾಮ ಚಂದ್ರ ಪೌದೆಲ್ ನೇಪಾಳ ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ ಎಪ್ರಿಲ್ 19 ರಂದು ರಾಮ ಚಂದ್ರ ಪೌದೆಲ್ ದೆಹಲಿಗೆ ಆಘಮಿಸಿದ 10ಕ್ಕೂ ಹೆಚ್ಚು ದಿನ ಚಿಕಿತ್ಸೆ ಪಡೆದಿದ್ದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಪ್ರಿಲ್ 30 ರಂದು ನೇಪಾಳಕ್ಕೆ ಮರಳಿದ್ದರು. 

ರಾಷ್ಟ್ರಪತಿ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್‌ ಪಕ್ಷದ ರಾಮಚಂದ್ರ ಪೌಡೇಲ್‌(78)  ಸುಭಾಷ್‌ ಚಂದ್ರ ನೇಬ್‌ಮಾಂಗ್‌ ವಿರುದ್ದ ಗೆಲುವು ಸಾಧಸಿದ್ದರು.   ರಾಮಚಂದ್ರ ಅವರು 8 ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅವರ ವಿರುದ್ಧ ಸರ್ಕಾರದಿಂದ ಹೊರಬಿದ್ದ ಸಿಪಿಎನ್‌-ಯುಎಂಎಲ್‌ನ ಸುಭಾಷ್‌ ಕಣಕ್ಕೆ ಇಳಿದಿದ್ದರು.ರಾಮಚಂದ್ರ ಗೆಲುವಿನೊಂದಿಗೆ ಸಿಪಿಎನ್‌ ಜೊತೆ ಮೈತ್ರಿ ಮುರಿದುಕೊಂಡ ಬಳಿಕ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ನಿರಾಳರಾಗುವಂತಾಗಿತ್ತು.

Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!

ಇತ್ತೀಚೆಗೆ ನೇಪಾಳ ಪ್ರಧಾನಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಗಡಿಯಾಚೆಗಿನ ಪೆಟ್ರೋಲಿಯಂ ಪೈಪ್‌ಲೈನ್‌ ವಿಸ್ತರಣೆ, ಸಮಗ್ರ ಚೆಕ್‌ಪೋಸ್ಟ್‌ಗಳ ಅಭಿವೃದ್ಧಿ, ಮತ್ತು ಜಲವಿದ್ಯುತ್‌ ಶಕ್ತಿಯಲ್ಲಿ ಸಹಕಾರವನ್ನು ಹೆಚ್ಚಿಸುವುದು, ಭಾರತ- ನೇಪಾಳ ಸಾರಿಗೆ ಒಪ್ಪಂದ’ ಸೇರಿದಂತೆ ವಿವಿಧ 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಇದೇ ವೇಳೆ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ‘ಸೂಪರ್‌ಹಿಟ್‌’ ಮಾಡುವ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಸಂಬಂಧವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಮುಂದುವರೆಸುತ್ತೇವೆ. ಇದೇ ಉತ್ಸಾಹದಲ್ಲಿ ಗಡಿ ಸೇರಿದಂತೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮೋದಿ ಹೇಳಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ