
ನವದೆಹಲಿ (ಜೂ.13): ಬೀಚ್‌ಗಳನ್ನು ಇಷ್ಟಪಡದವರು ಯಾರಿದ್ದಾರೆ? ಬೀಚ್‌ಗಳಲ್ಲಿ ಕುಳಿತು, ನಡೆದಾಡುತ್ತಾ ರಿಲಾಕ್ಸ್ ಆಗುವ ಅನುಭವವೇ ಮನೋಹರ. ಆದರೆ, ಕೆಲವೊಂದು ದೇಶಗಳಲ್ಲಿ ಬೀಚ್‌ಗಳಲ್ಲಿ ಹೊಸ ಹೊಸ ಸಂಪ್ರದಾಯಗಳನ್ನು ತರಲಾಗುತ್ತಿದೆ. ಸನ್‌ಬಾತ್ ಅಥವಾ ಸೂರ್ಯಸ್ನಾನ ಮಾಡುವುದಕ್ಕಾಗಿಯೇ ಕೆಲವೊಂದು ಬೀಚ್‌ಗಳನ್ನು ನಿಗದಿ ಮಾಡಲಾಗುತ್ತದೆ. ಇನ್ನೂ ಕೆಲವು ದೇಶಗಳಲ್ಲಿ ಬೆತ್ತಲೆ ಬೀಚ್‌ಗಳು ಇವೆ. ಇಲ್ಲಿ ಹೋಗಬೇಕಾದಲ್ಲಿ ಮೈಮೇಲೆ ಯಾವುದೇ ಬಟ್ಟೆ ಕೂಡ ಇರಬಾರದು. ಸಂಪೂರ್ಣ ನಗ್ನವಾಗಿ ಸೂರ್ಯನಿಗೆ ಮೈಯೊಡ್ಡುವುದು ಕೂಡ ಇಂಥ ಬೀಚ್‌ಗಳಲ್ಲಿ ಮಾಮೂಲಿಯಾಗಿದೆ. ಇದನ್ನು ಸನ್‌ಬಾತ್ ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತದೆ. ಇಂಥ ಬೀಚ್‌ಗಳಿಗೆ ನೆದರ್ಲೆಂಡ್ ಕೂಡ ಹೆಸರುವಾಸಿ. ಆದರೆ, ನೆದರ್ಲೆಂಡ್‌ನ ದಕ್ಷಿಣದಲ್ಲಿರುವ ಬಹುತೇಕ ನೇಕೆಡ್ ಬೀಚ್‌ಗಳಲ್ಲಿ ಹೊಸ ಸಮಸ್ಯೆಗಳು ತಲೆದೋರಿದೆಯಂತೆ. ಈ ಬೀಚ್‌ಗಳಲ್ಲಿ ಸನ್ ಬಾತ್ ಮಾಡುವುದು ಮಾತ್ರವಲ್ಲದೆ, ಲೈಂಗಿಕ ಚಟುವಟಿಕೆಗಳು ಕೂಡ ಜಾಸ್ತಿಯಾಗಿದೆಯಂತೆ. ಬೀಚ್‌ನಲ್ಲಿ ಸೆಕ್ಸ್ ಮಾಡುವುದು, ಇಲ್ಲವೇ ಬೀಚ್‌ನ ಮರಳಿನಲ್ಲಿ ಲೈಂಗಿಕ ಕ್ರಿಯೆಗಳಲ್ಲಿ ಭಾಗಿಯಾಗುವುದು ಅತಿಯಾಗಿ ಏರಿಕೆಯಾಗಿದೆ. ಇದು ಬೀಚ್‌ನ ಅಕ್ಕಪಕ್ಕದಲ್ಲಿಯೇ ಇರುವ ನಿವಾಸಿಗಳಿಗೆ ಇರಿಸುಮುರಿಸು ಉಂಟು ಮಾಡಿದೆ. ಈ ಕುರಿತಾಗ ಅವರು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು, ಸನ್‌ಬಾತ್‌ಗಳನ್ನು ಬೀಚ್‌ನಲ್ಲಿ ನಿಷೇಧಿಸಿ ಎಂದು ಮನವಿ ಮಾಡಿದೆ. ಸರ್ಕಾರ ಕೂಡ ಇವರ ಮನವಿಗೆ ಸ್ಪಂದಿಸಿದ್ದು, ಇಡೀ ಬೀಚ್‌ನ ಎಲ್ಲೆಂದರಲ್ಲಿ ಎಚ್ಚರಿಕೆಯ ಬೋರ್ಡ್‌ಗಳನ್ನು ಹಾಕಲಾಗಿದೆ.
ಈ ಕುರಿತಾಗಿ ಗಾರ್ಡಿಯನ್ ವಿವರವಾದ ವರದಿಯನ್ನು ಪ್ರಕಟ ಮಾಡಿದ್ದು, ಕಳೆದ ಗುರುವಾರ ವೀರೇ ನಗರ ಪಾಲಿಕೆ ತನ್ನ ಬೀಚ್‌ಗಳಲ್ಲಿ ಈ ಕುರಿತಾದ ಸೂಚನಾಫಲಕಗಳನ್ನು ಹಾಕಿದೆ. ಈ ಪ್ರದೇಶದಲ್ಲಿ ಪ್ರವಾಸಿಗರು ಸೆಕ್ಸ್ ಮಾಡುವಂತಿಲ್ಲ. ಸೆಕ್ಸ್‌ಗೆ ನಿಷೇಧವಿದೆ ಎನ್ನುವ ಬೋರ್ಡ್‌ಗಳನ್ನು ಹಾಕಿದೆ. ನೆದರ್ಲೆಂಡ್ ರಾಜಧಾನಿ ಆಮಸ್ಟರ್‌ಡ್ಯಾಂನಿಂದ 160 ಕಿಲೋಮೀಟರ್ ದೂರದಲ್ಲಿರುವ ವೀರೇ ಪಟ್ಟಣ, ಈ ಯೋಜನೆಯನ್ನು 'ಪ್ರಾಜೆಕ್ಟ್ ಆರೆಂಜ್ ಸನ್' ಎಂದು ಕರೆದಿದೆ. ಬೀಚ್‌ಗಳಲ್ಲಿ ಸನ್ ಬಾತ್ ಮಾಡಬಹುದು ಆದರೆ, ದೈಹಿಕ ಸಂಪರ್ಕ ಇರುವಂತಿಲ್ಲ ಎಂದು ತಿಳಿಸಿದೆ. ಈ ಲೈಂಗಿಕ ಚಟುವಟಿಕೆಗಳನ್ನು ತಡೆಯಲು ಸರ್ಕಾರ ಕಣ್ಗಾವಲು ಹೆಚ್ಚಿಸಿದೆ ಎಂದು ಅದು ವಿವರಿಸಿದೆ. ಇದರಿಂದಾಗಿ ಸ್ಥಳೀಯ ಜನರು ಬಹಳ ಮುಖ್ಯವಾದ ಬಂಡೆಗಳು, ನೈಸರ್ಗಿಕ ಸಂಪನ್ಮೂಲಗಳು ಮತ್ತು ಕಡಲತೀರಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದೆ.
ಇಲ್ಲಿನ ಬೀಚ್‌ಗಳಲ್ಲಿ ಲೈಗಿಂಕ ಚಟುವಟಿಕೆಗಳು ಹೆಚ್ಚಾಗಿದ್ದು, ಸ್ಥಳೀಯರು ಹಾಗೂ ಇತರೆ ಪ್ರವಾಸಿಗರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ಸ್ಥಳೀಯಾಡಳಿತ, ಜಲಮಂಡಳಿ, ನಿಸರ್ಗ ಸಂಸ್ಥೆಗಳಿಗೆ ದೂರು ನೀಡಿದ್ದಾರೆ. ಈ ಕುರಿತು ನಗರದ ಮೇಯರ್ ಫ್ರೆಡ್ರಿಕ್ ಶಾನರ್ ಹೇಳಿಕೆ ನೀಡಿದ್ದಾರೆ. ಬಂಡೆಗಳು ಮತ್ತು ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳು ಸ್ಥಳೀಯ ಜನರಿಗೆ ಬಹಳ ಮುಖ್ಯ. ಅವುಗಳ ಮೇಲೆ ಸೆಕ್ಸ್ ಮಾಡಬಾರದು. ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಹಾಗೂ ರಜೆ ಕಳೆಯಲು ಬರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದೆ.ಇನ್ನು ಮುಂದೆ ಸರ್ಕಾರ ಯಾವುದೇ ಎಚ್ಚರಿಕೆ ನೀಡುವುದಿಲ್ಲ. ಶಿಕ್ಷೆಯನ್ನು ತಕ್ಷಣವೇ ಜಾರಿ ಮಾಡಲು ತಿಳಿಸಲಾಗುತ್ತದೆ. ಪ್ರವಾಸಿಗರಿಗೆ ನಿಯಮಗಳ ಬಗ್ಗೆ ತಿಳಿಸಲು ಎಂಟು ಹೊಸ ಸೂಚನಾ ಫಲಕಗಳನ್ನು ಸ್ಥಾಪಿಸಲಾಗುವುದು ಎಂದಿದೆ.
ಬೆತ್ತಲೆಯಾಗಿ ಸೂರ್ಯಸ್ನಾನ ಮಾಡೋದಕ್ಕೂ, ಲೈಂಗಿಕ ಕ್ರಿಯೆ ಮಾಡೋದಕ್ಕೂ ವ್ಯತ್ಯಾಸವಿದೆ. ಇದನ್ನು ನಾವು ತಿಳಿಸುವುದು ಅಗತ್ಯವಾಗಿದೆ. ಆದರೆ, ಸದ್ಯದ ಮಟ್ಟಿಗೆ ಅದನ್ನು ತಿಳಿಸುವುದು ಕಷ್ಟವಾಗಿದೆ ಎಂದು ನೆದರ್ಲೆಂಡ್‌ನ ನ್ಯಾಚುರಿಸ್ಟ್ ಅಸೋಸಿಯೇಷನ್ ತಿಳಿಸಿದೆ. ಓಪನ್ ಮತ್ತು ಬೇರ್ ಸಂಸ್ಥೆಯ ಪ್ರತಿನಿಧಿ ಹೊರಾಂಗಣ ಲೈಂಗಿಕತೆ ಮತ್ತು ಬೆತ್ತಲೆ ಚಟುವಟಿಕೆಗಳು ವಿಭಿನ್ನವಾಗಿವೆ ಎಂದು ಹೇಳಿದರು. ಈ ಸೆಕ್ಸ್ ಚಟುವಟಿಕೆಗಳು ಸಾಮಾನ್ಯ ಜನರಿಗೆ, ಕಡಲತೀರವನ್ನು ಆನಂದಿಸಲು ಬರುವವರಿಗೆ, ಬೆತ್ತಲೆಯಾಗಿ ಸನ್‌ಬಾತ್ ಮಾಡುವವರಿಗೆ ತೊಂದರೆಯಾಗಿದೆ ಎಂದು ತಿಳಿಸಿದೆ. ಬೆತ್ತಲೆಯಾಗಿ ಸನ್‌ಬಾತ್ ಮಾಡುವವರು ಮುಕ್ತವಾಗಿ ಮತ್ತು ಆರೋಗ್ಯಕರವಾಗಿ ತಮ್ಮನ್ನು ತಾವು ಕಾಳಜಿ ವಹಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಹೊರಾಂಗಣದಲ್ಲಿ ಸೆಕ್ಸ್ ಮಾಡುವುದು ತಮಗೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಿಕಿನಿ ಧರಿಸಿ ಬೀಚ್‌ಲ್ಲಿ ನಿಂತ ರೈ ಲಕ್ಷ್ಮಿ; ಹೊಸ ವರ್ಷಕ್ಕೆ ಬೆಂಕಿ ಪೋಸ್ ಎಂದ ಫ್ಯಾನ್ಸ್
ಇನ್ನೂ ಕೆಲವರು ನೆದರ್ಲೆಂಡ್‌ನಂಥ ಮುಕ್ತರಾಷ್ಟ್ರದಲ್ಲಿ ಹೊರಾಂಗಣದಲ್ಲಿ ಸೆಕ್ಸ್ ಮಾಡಿದರೆ ಏನು ಸಮಸ್ಯೆ ಎಂದು ಪ್ರಶ್ನೆ ಮಾಡಿದ್ದಾರೆ. ಇವರೆಲ್ಲರೂ ಸಂಪ್ರದಾಯವಾದಿಗಳು ಲೈಂಗಿಕತೆ ಹಾಗೂ ನಗ್ನತೆಯನ್ನು ಅರ್ಥಮಾಡಿಕೊಳ್ಳದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಲೈಂಗಿಕಶಾಸ್ತ್ರಜ್ಞ ಯೂರಿ ಓಲ್ರಿಚ್ಸ್ ಹೇಳಿದ್ದಾರೆ.
ಟಾಪ್‌ಲೆಸ್ ಆಗಿ ಬರ್ಲಿನ್ ಸ್ಪಿಮ್ಮಿಂಗ್ ಪೂಲ್‌ನಲ್ಲಿ ಈಜಾಡಲು ಮಹಿಳೆಯರಿಗೆ ಶೀಘ್ರದಲ್ಲಿ ಅನುಮತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ