ಮಕ್ಕಳಿಗಾಗಿ ಒಂದಾಗ ಬಯಸಿದ್ದ ವಿಚ್ಛೇದಿತ ದಂಪತಿಯ ಬದುಕಲ್ಲಿ ವಿಧಿಯಾಟ

By Anusha Kb  |  First Published May 30, 2022, 7:37 PM IST

ಮಕ್ಕಳಿಗಾಗಿ ಒಂದಾಗ ಬಯಸಿದ್ದ ವಿಚ್ಛೇದಿತ ದಂಪತಿಯ ಬದುಕಿನಲ್ಲಿ ವಿಧಿ ಬೇರೆಯದೇ ಆಟವಾಡಿದೆ. ವಿಧಿಯಾಟಕ್ಕೆ ಕುಟುಂಬದ ವಯೋವೃದ್ಧೆಯೊಬ್ಬರನ್ನು ಬಿಟ್ಟು ಮತ್ತೆಲ್ಲರೂ ಜೀವ ತೆತ್ತಿದ್ದಾರೆ. 
 


ಮುಂಬೈ: ಅವರು ಪರಸ್ಪರ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಪಡೆದು ದೂರಾಗಿದ್ದ ದಂಪತಿ. ಆದರೆ ಇತ್ತೀಚೆಗೆ ಕೇವಲ ಮಕ್ಕಳಿಗೋಸ್ಕರ ಜೊತೆಯಾಗಿ ಪ್ರವಾಸ ಬಯಸಿದ್ದರು. ಆದರೆ ಅವರ ಬದುಕಿನಲ್ಲಿ ವಿಧಿ ಬೇರೆಯದೇ ಆಟವಾಡಿದ್ದು, ಅಪ್ಪ ಅಮ್ಮ ಇಬ್ಬರು ಮಕ್ಕಳು ಒಟ್ಟಿಗೆ ಇಹಲೋಕದ ಪಯಣ ಮುಗಿಸಿದ್ದಾರೆ. 

ಹೌದು ಇದು ನಿನ್ನೆ (ಮೇ.29ರಂದು)ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಭಾರತೀಯ ಕುಟುಂಬವೊಂದರ ದುರಂತ ಕತೆ. ಒಡಿಶಾದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದ 54 ವರ್ಷ ಪ್ರಾಯದ ಅಶೋಕ್ ತ್ರಿಪಾಠಿ (Ashok Tripathi) ಮತ್ತು  ಮುಂಬೈನ ಬಿಕೆಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 51 ವರ್ಷ ಪ್ರಾಯದ ವೈಭವಿ ಬಾಂದೇಕರ್ ​​ತ್ರಿಪಾಠಿ (Vaibhavi Bandekar Tripathi) ತಮ್ಮ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ನ್ಯಾಯಾಲಯದ ಮೂಲಕ ಇಬ್ಬರು ವಿಚ್ಛೇದನ ಪಡೆದಿದ್ದರು. 

Tap to resize

Latest Videos

ಇವರಿಬ್ಬರ ಮಕ್ಕಳಾದ 22 ವರ್ಷ ಪ್ರಾಯದ ಮಗ ಧನುಷ್ (Dhanush) ಮತ್ತು 15 ವರ್ಷ ಪ್ರಾಯದ ಮಗಳು ರಿತಿಕಾ (Ritika) ಥಾಣೆ (Thane) ನಗರದ ಬಲ್ಕಮ್ ಪ್ರದೇಶದ (Balkum area) ರುಸ್ತಮ್ಜಿ ಅಥೇನಾ ಅಪಾರ್ಟ್‌ಮೆಂಟ್‌ನಲ್ಲಿ (Rustomjee Athena apartment) ವಾಸಿಸುತ್ತಿದ್ದರು. 

Nepal Plane ನಾಪತ್ತೆಯಾದ ನೇಪಾಳ ವಿಮಾನ ಲಮ್ಚೆ ನದಿ ಬಳಿ ಅಪಘಾತ, ಪೈಲೆಟ್ ಫೋನ್‌ನಿಂದ ಸ್ಥಳ ಪತ್ತೆ!
 

ವಿಚ್ಛೇದನ ಗೊಂಡಿದ್ದರು ಈ ದಂಪತಿ ತಮ್ಮ ಹದಿ ಹರೆಯದ ಮಕ್ಕಳ ಆಸೆ ಈಡೇರಿಸುವ ಸಲುವಾಗಿ ಮಕ್ಕಳೊಂದಿಗೆ ಜೊತೆಯಾಗಿ ನೇಪಾಳ ಪ್ರವಾಸ ಹೊರಟಿದ್ದರು. ಆದರೆ ವಿಧಿಯಾಟಕ್ಕೆ ಸಿಲುಕಿ ಇವರು ದುರಂತ ಸಾವಿಗೀಡಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿರುವ ವೈಭವಿ ಬಾಂದೇಕರ್ ​​ತ್ರಿಪಾಠಿ ಅವರ 80 ವರ್ಷದ ತಾಯಿ ಮಾತ್ರ ಪ್ರಸ್ತುತ ಇವರ ಕುಟುಂಬದಲ್ಲಿ ಜೀವಂತ ಇರುವರಾಗಿದ್ದು, ಸದ್ಯದ ಅವರ ಆರೋಗ್ಯ ಸ್ಥಿತಿಯ ಕಾರಣಕ್ಕೆ ಅವರಿಗಿನ್ನೂ ವಿಚಾರ ತಿಳಿಸಿಲ್ಲ ಎಂದು ತಿಳಿದು ಬಂದಿದೆ. ವೈಭವಿ ಅವರ ಕಿರಿಯ ಸಹೋದರಿ ಪ್ರಸ್ತುತ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ನೇಪಾಳದಲ್ಲಿ 4 ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನ ನಾಪತ್ತೆ!
 

ಅಶೋಕ್ ತ್ರಿಪಾಠಿ, ವೈಭವಿ ಮತ್ತು ಅವರ ಇಬ್ಬರು ಮಕ್ಕಳು ಭಾನುವಾರ ತಾರಾ ಏರ್‌ಲೈನ್ಸ್ ವಿಮಾನದಲ್ಲಿ ನೇಪಾಳಕ್ಕೆ ಹೊರಟಿದ್ದರು. ಬೆಳಗ್ಗೆ ನೇಪಾಳದ ಪ್ರವಾಸಿ ನಗರವಾದ ಪೊಖರಾದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಈ ವಿಮಾನ ನಾಪತ್ತೆಯಾಗಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ಟರ್ಬೊಪ್ರೊಪ್ ಟ್ವಿನ್ ಓಟರ್ 9N-AET ಸಂಖ್ಯೆಯ ಈ ದುರಾದೃಷ್ಟಕಾರಿ ವಿಮಾನವು ನಾಲ್ವರು ಭಾರತೀಯ ಪ್ರಜೆಗಳು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರನ್ನು ಹೊಂದಿತ್ತು. ಜೊತೆಗೆ ಮೂವರು ನೇಪಾಳಿ ವಿಮಾನ ಸಿಬ್ಬಂದಿ ಇದ್ದರು.

ನೇಪಾಳದ ತಾರಾ ಏರ್‌ NAET ವಿಮಾನ ನಿನ್ನೆ (ಮೇ.29) ಬೆಳಗ್ಗೆ 9.55ಕ್ಕೆ ನೇಪಾಳದ ಫೋಖರಾದಿಂದ ಜೋಮ್ಸ್‌ಗೆ ಪ್ರಯಾಣ ಬೆಳೆಸಿತ್ತು. ಕೆಲ ಹೊತ್ತಲ್ಲೆ ಅದು ರಾಡಾರ್‌ ಸಂಪರ್ಕ ಕಡಿದುಕೊಂಡಿತ್ತು. ನಂತರ ವಿಮಾನದ ಅವಶೇಷಗಳು ಲಮ್ಚೆ ನದಿ ಬಳಿ ಪತ್ತೆಯಾಗಿವೆ ಎಂದು ನೇಪಾಳ (Nepal) ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿತ್ತು. ತಾರಾ ಏರ್ ವಿಮಾನದಲ್ಲಿದ್ದ ಪೈಲೆಟ್ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿತ್ತು. ಹೀಗಾಗಿ ಮೊಬೈಲ್ ಟವರ್ ಲೋಕೆಶನ್ ಆಧರಿಸಿ ನಿಯೋಜಿಸಲಾದ ಎರಡು ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನದಿ ಬಳಿ ವಿಮಾನ ಅಪಘಾತವಾಗಿರುವುದು ಪತ್ತೆಯಾಗಿತ್ತು .
 

click me!