ತಾಂತ್ರಿಕ ದೋಷದಿಂದಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ 6 ತಿಂಗಳಿಗೂ ಹೆಚ್ಚು ಕಾಲ ಉಳಿದುಕೊಂಡಿದ್ದಾರೆ. ಮಾರ್ಚ್‌ವರೆಗೂ ಭೂಮಿಗೆ ವಾಪಸಾಗುವುದು ಅನುಮಾನ, ಹೊಸ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ತಯಾರಿ ವಿಳಂಬವಾಗಿದೆ.
ನವದೆಹಲಿ (ಡಿ.18): ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬಚ್ ವಿಲ್ಮೋರ್, ಈಗಾಗಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡು 6 ತಿಂಗಳ ಮೇಲಾಗಿದೆ. ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಎದುರಾದ ತಾಂತ್ರಿಕ ದೋಷದ ಕಾರಣದಿಂದಾಗಿ ಸ್ಟಾರ್‌ಲೈನರ್ ಗಗನನೌಕೆ ಗಗನಯಾತ್ರಿಗಳಿಲ್ಲದೆ ಭೂಮಿಗೆ ವಾಪಾಸಾಗಿತ್ತು. ಕೇವಲ 8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬ್ಯಾರಿ ವಿಲ್ಮೋರ್ ಈಗಾಗಲೇ ಬಾಹ್ಯಾಕಾಶದಲ್ಲಿ 6 ತಿಂಗಳಿಗೂ ಅಧಿಕ ಕಾಲ ಉಳಿದುಕೊಂಡಿದ್ದಾರೆ. ಅವರು ಮುಂದಿನ ಫೆಬ್ರವರಿಯಲ್ಲಿ ಭೂಮಿಗೆ ವಾಪಾಸಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ನಾಸಾ, ಮತ್ತೊಂದು ಸಮಸ್ಯೆ ಎದುರಾದ ಕಾರಣ ಅವರ ಗಗನಯಾತ್ರಿಗಳನ್ನು ಭೂಮಿಗೆ ವಾಪಾಸ್ ಕರೆತರುವ ಕಾರ್ಯಾಚರಣೆಯನ್ನು ಇನ್ನೊಂದು ತಿಂಗಳ ಕಾಲ ಮುಂದೂಡಿದೆ.
ಕಳೆದ ಜೂನ್‌ನಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯೊಂದಿಗೆ ಐಎಸ್‌ಎಸ್‌ಗೆ ಸುನೀತಾ ಹಾಗೂ ಬ್ಯಾರಿ ವಿಲ್ಮೋರ್ ಪ್ರಯಾಣ ಮಾಡಿದ್ದರು. ಆದರೆ, ಇದರಲ್ಲಿ ಸಮಸ್ಯೆ ಎದುರಾಗಿತ್ತ. ಹೀಲಿಯಂ ಲೀಕ್ ಸೇರಿದಂತೆ, ಸ್ಟಾರ್‌ಲೈನರ್ ನೌಕೆಯಲ್ಲಿದ್ದ 28 ಥ್ರಸ್ಟರ್‌ಗಳ ಪೈಕಿ 5 ಥ್ರಸ್ಟರ್‌ಗಳ ವಿಫಲವಾಗಿದ್ದವು. ಇದರಿಂದಾಗಿ 2025ರ ಫೆಬ್ರವರಿವರೆಗೂ ಇವರು ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಆ ನಂತರವೇ ಭೂಮಿಗೆ ಪಾವಾಸಾಗಲಿದ್ದಾರೆ ಎಂದು ನಾಸಾ ತಿಳಿಸಿತ್ತು.
undefined
ಸ್ಪೇಸ್‌ಎಕ್ಸ್‌ನ ಕ್ರೂವ್-9 ಡ್ರ್ಯಾಗನ್ ಕ್ಯಾಪ್ಸೂಲ್‌ನೊಂದಿಗೆ ಸುನೀತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಭೂಮಿಗೆ ಫೆಬ್ರವರಿ ವೇಳೆಯಲ್ಲಿ ವಾಪಾಸಾಗುವುದು ನಿಶ್ಚಯವಾಗಿತ್ತು. ಆದರೆ, ಸುನೀತಾ ಹಾಗೂ ಬ್ಯಾರಿ ವಿಲ್ಮೋರ್‌ರೊಂದಿಗೆ ನಿಲ್ದಾಣದಲ್ಲಿರುವ ಕ್ರೂವ್-9 ಸಿಬ್ಬಂದಿಯನ್ನು ರಿಲೀವ್ ಮಾಡುವ ಕ್ರೂವ್-10, 2025ರ ಮಾರ್ಚ್‌ಗೂ ಮುನ್ನ ನಭಕ್ಕೆ ಹಾರುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಹ್ಯಾಂಡ್‌ಓವರ್ ಪೀರಿಯಡ್‌ವರೆಗೂ ಎರಡೂ ಟೀಮ್‌ಗಳು ಅಲ್ಲಿಯೇ ಕೆಲಸ ಮಾಡಲಿವೆ ಎಂದು ತಿಳಿಸಿದೆ.
"ಈ ಬದಲಾವಣೆಯು ನಾಸಾ ಮತ್ತು ಸ್ಪೇಸ್‌ಎಕ್ಸ್ ತಂಡಗಳಿಗೆ ಮಿಷನ್‌ಗಾಗಿ ಹೊಸ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯವನ್ನು ನೀಡುತ್ತದೆ" ಎಂದು NASA ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. ಇದರರ್ಥ ವಿಲಿಯಮ್ಸ್ ಮತ್ತು ವಿಲ್ಮೋರ್ ಎಂಟು ದಿನಗಳ ಬದಲಿಗೆ ಹತ್ತು ತಿಂಗಳ ಬಾಹ್ಯಾಕಾಶದಲ್ಲಿ ಕಳೆಯಲಿದ್ದಾರೆ.
"ಹೊಸ ಬಾಹ್ಯಾಕಾಶ ನೌಕೆಯ ತಯಾರಿಕೆ, ಜೋಡಣೆ, ಪರೀಕ್ಷೆ ಮತ್ತು ಅಂತಿಮ ಏಕೀಕರಣವು ಶ್ರಮದಾಯಕ ಪ್ರಯತ್ನವಾಗಿದೆ, ಇದು ವಿವರಗಳಿಗೆ ಹೆಚ್ಚಿನ ಗಮನವನ್ನು ಬಯಸುತ್ತದೆ" ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದರು.
ಟೊಯೋಟಾಗೆ ಟಕ್ಕರ್ ನೀಡಲು ವಿಲೀನವಾಗಲಿದ್ಯಾ ವಿಶ್ವಪ್ರಸಿದ್ಧ ಕಾರ್ ಬ್ರ್ಯಾಂಡ್‌ಗಳಾದ ಹೊಂಡಾ-ನಿಸ್ಸಾನ್-ಮಿತ್ಸುಬಿಷಿ?
ನಾಸಾದ ಪ್ರಕಾರ, ಹೊಸ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಪೂರ್ಣಗೊಳಿಸಿದ ನಂತರ ಮಾರ್ಚ್ ಅಂತ್ಯದಲ್ಲಿ ಕ್ರ್ಯೂ-10 ಅನ್ನು ಉಡಾವಣೆ ಮಾಡುವುದು ನಾಸಾದ ಅವಶ್ಯಕತೆಗಳನ್ನು ಪೂರೈಸಲು ಮತ್ತು 2025 ಕ್ಕೆ ಬಾಹ್ಯಾಕಾಶ ನಿಲ್ದಾಣದ ಉದ್ದೇಶಗಳನ್ನು ಸಾಧಿಸಲು ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಂಡವು ನಿರ್ಧರಿಸಿದೆ. ಇದರ ನಡುವೆ, ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದರಿಂದ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಚಿತ್ರಗಳು ತೀವ್ರ ತೂಕ ನಷ್ಟವನ್ನು ತೋರಿಸಿದ್ದವು.
ನೆನಪನ್ನ ಸೋಪಾಕಿ ತೊಳ್ಕೊಳ್ಳೋದು ಬಿಟ್ಟು, ಜೀವ ಕಳ್ಕೊಂಡ ವಿವಾಹಿತ ಪ್ರೇಮಿಗಳು!