ನಲಾ ಈಕೆ ಸಾಮಾನ್ಯಳಲ್ಲ... ಫೋರ್ಬ್ಸ್ ಪಟ್ಟಿಯಲ್ಲಿ ಜಾಗ ಪಡೆದಿರುವ ವಿಶ್ವದ ಶ್ರೀಮಂತ ಬೆಕ್ಕು

By Anusha Kb  |  First Published Sep 2, 2024, 10:32 PM IST

ತನ್ನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿರುವ ಜಗತ್ತಿನ ಶ್ರೀಮಂತ ಬೆಕ್ಕಿನ ಬಗ್ಗೆ ನಾವಿಲ್ಲಿ ನಿಮಗೆ ಹೇಳ್ತಿದ್ದಿವಿ. ಈ ಬೆಕ್ಕಿನ ಹೆಸರು ನಾಲಾ. ಇದು ಜಾಗತಿಕವಾಗಿ 100 ಮಿಲಿಯನ್ ನೆಟ್‌ವರ್ತ್‌ ಅನ್ನು ಹೊಂದಿದೆ


ಇತ್ತೀಚೆಗೆ ಅನೇಕರು ಮನೆಯ ಸಾಕುಪ್ರಾಣಿಗಳಲ್ಲಿ ಮಕ್ಕಳ ಪ್ರೀತಿಯನ್ನು ಕಾಣುತ್ತಿದ್ದಾರೆ, ನಗರ ಪ್ರದೇಶಗಳಲ್ಲಿ ಶ್ರೀಮಂತ ಕುಟುಂಬಗಳು ಶ್ವಾನಗಳನ್ನು ಹಾಗೂ ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ಎಲ್ಲಾ ವಿಶೇಷ ಸೌಲಭ್ಯವನ್ನು ನೀಡಿ ಸಾಕುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು. ಕೆಲವು ಮನುಷ್ಯರಿಗಿಲ್ಲದ ಸೌಲಭ್ಯಗಳು ಈ ಪ್ರಾಣಿಗಳಿವೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ಮುದ್ದಿನ ಶ್ವಾನವೊಂದಕ್ಕೆ ಲಕ್ಷಾಂತರ ರೂಪಾಯಿಯ ಚಿನ್ನದ ಸರವನ್ನು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಬೆಕ್ಕಿನ ಸರದಿ. ತನ್ನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿರುವ ಜಗತ್ತಿನ ಶ್ರೀಮಂತ ಬೆಕ್ಕಿನ ಬಗ್ಗೆ ನಾವಿಲ್ಲಿ ನಿಮಗೆ ಹೇಳ್ತಿದ್ದಿವಿ. ಈ ಬೆಕ್ಕಿನ ಹೆಸರು ನಾಲಾ. ಇದು ಜಾಗತಿಕವಾಗಿ 100 ಮಿಲಿಯನ್ ನೆಟ್‌ವರ್ತ್‌ ಅನ್ನು ಹೊಂದಿದೆ. 100 ಮಿಲಿಯನ್ ಎಂದರೆ ಭಾರತೀಯ ರೂಪಾಯಿಗಳಲ್ಲಿ  839 ಸಾವಿರ ಕೋಟಿ ರೂಪಾಯಿಗಳು. ಹೀಗಾಗಿ ಈ ಬೆಕ್ಕು ಜಗತ್ತಿನ ಅತ್ಯಂತ ಶ್ರೀಮಂತ ಬೆಕ್ಕು ಎನಿಸಿದೆ ಎಂದು ಕ್ಯಾಟ್  ಡಾಟ್ ಕಾಮ್ ವರದಿ ಮಾಡಿದೆ. 

ನಲಾ ಹೀಗೆ ಸೂಪರ್ ರಿಚ್ ಆಗಿದ್ದೇಗೆ?

Tap to resize

Latest Videos

undefined

ನಲಾ ಅಮೆರಿಕಾದ ಕ್ಯಾಲಿಫೋರ್ನಿಯಾದ ಯಾಮೀಸ್-ಟ್ಯಾಬಿ ಮಿಶ್ರ ಪ್ರಬೇಧದ ಬೆಕ್ಕು. 2010ರಲ್ಲಿ  ವಾರಿಸಿರಿ ಮೆಥಾಚಿಟ್ಟಿಫಾನ್ (Varisiri Methachittiphan) ಎಂಬುವವರು  ಈ ಬೆಕ್ಕನ್ನು ಪ್ರಾಣಿಗಳ ಆಶ್ರಯತಾಣದಿಂದ ದತ್ತು ಪಡೆದಾದ ನಲಾಗೆ ಕೇವಲ ಐದು ತಿಂಗಳು ವಯಸ್ಸಾಗಿತ್ತು. 2012ರಲ್ಲಿ   ವಾರಿಸಿರಿ ಅವರು ಈ ಬೆಕ್ಕಿನ ಫೋಟೋಗಳನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳುವುದಕ್ಕಾಗಿ ಇನ್ಸ್ಟಾಗ್ರಾಮ್‌ನಲ್ಲಿ ಅದರ ಹೆಸರಿನಲ್ಲಿ ಖಾತೆಯೊಂದನ್ನು ತೆರೆದರು. ಇದು ಸ್ವಲ್ಪ ಸಮಯದಲ್ಲೇ ಜನರ ಗಮನವನ್ನು ಸೆಳೆಯಿತು. ಕ್ರಮೇಣ ದಿನ ಕಳೆಯುತ್ತಿದ್ದಂತೆ ನಲಾಗೆ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯ್ತು. ಅಲ್ಲದೇ ಕ್ರಮೇಣ ಈ ಫಾಲೋವರ್‌ಗಳ ಸಂಖ್ಯೆ ಎಷ್ಟು ಹೆಚ್ಚಾಯ್ತೆಂದರೆ 4.5 ಮಿಲಿಯನ್ ಫಾಲೋವರ್‌ಗಳನ್ನು ಈ ಬೆಕ್ಕು ಗಳಿಸಿತು. ಇದರಿಂದ ನಲಾಗೆ ಇನ್ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವದಾಖಲೆ ಮಾಡಲು ಸಾಧ್ಯವಾಯ್ತು. 2020ರ ಮೇ ತಿಂಗಳಲ್ಲಿ ನಲಾಗೆ ಗಿನ್ನೆಶ್ ವಿಶ್ವದಾಖಲೆ ಸಂಸ್ಥೆ ಈ ಬಿರುದು ನೀಡಿ ಗೌರವಿಸಿದೆ.

ಅದೃಷ್ಠ ಬಂದರೆ ಹೀಗಿರಬೇಕು, ಈ ನಾಯಿ ಆಸ್ತಿ ಬರೋಬ್ಬರಿ 3,3356 ಕೋಟಿ ರೂ!

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲೂ ನಲಾ ಹೆಸರು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನಲ್ಲಿಯೂ ಈ ನಲಾ ಬೆಕ್ಕಿನ ಬಗ್ಗೆ ಮಾಹಿತಿ ಇದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಈ ಬೆಕ್ಕಿಗೆ ಅತಿ ಹೆಚ್ಚು ಅಂದರೆ  4,361,519 ಫಾಲೋವರ್ಸ್ ಆಗಿದ್ದಾರೆ. ಮತ್ತು 13 ಮೇ 2020 ರಂದು ಪರಿಶೀಲಿಸಿದಾಗ nala_cat ಎಂಬ ಇನ್ಸ್ಟಾ ಖಾತೆಯಿಂದ ಇದನ್ನು ಸಾಧಿಸಲಾಗಿದೆ. ಬೆಕ್ಕಿನ ಮಾಲೀಕ ವರಿಸಿರಿ ಮೆಥಾಚಿಟ್ಟಿಫಾನ್ ಇದನ್ನು ಆಶ್ರಯ ತಾಣದಿಂದ ದತ್ತು ತೆಗೆದುಕೊಂಡಿದ್ದರು. ಸಯಾಮಿ-ಟ್ಯಾಬಿ ಮಿಕ್ಸ್ ತಳಿಯ ಈ ಬೆಕ್ಕು ತನ್ನ ಅಗಲವಾದ, ನೀಲಿ ಕಣ್ಣುಗಳು, ಮುದ್ದಾದ ಶಿರಸ್ತ್ರಾಣ ಮತ್ತು ರಟ್ಟಿನ ಪೆಟ್ಟಿಗೆಗಳಲ್ಲಿ ಮುದುಡಿ ಮಲಗುವ ಕಾರಣದಿಂದ ಜನರ ಗಮನ ಸೆಳೆದಿದೆ ಎಂದು ಬರೆಯಲಾಗಿದೆ. 

ಪೋರ್ಬ್ಸ್ ಲಿಸ್ಟ್‌ನಲ್ಲೂ ಸ್ಥಾನ ಗಿಟ್ಟಿಸಿಕೊಂಡ ನಲಾ

ನಲಾ ಹೊಂದಿರುವ ಭಾರಿ ಜನಪ್ರಿಯತೆಯಿಂದಾಗಿ ಇದು ಪೋರ್ಬ್ಸ್‌ ಲಿಸ್ಟ್‌ನಲ್ಲಿಯೂ ಸ್ಥಾನ ಪಡೆದಿದೆ. ಸಾಕುಪ್ರಾಣಿಗಳ ವಿಭಾಗದಲ್ಲಿ ಫೋರ್ಬ್ಸ್ ಟಾಪ್ ಪ್ರಭಾವಶಾಲಿ ಪ್ರಾಣಿಗಳ ಪಟ್ಟಿಯಲ್ಲಿ ನಲಾ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಬೆಕ್ಕಿನ ಮುದ್ದಾದ ಚಟುವಟಿಕೆ, ಆಟಾಟೋಪಗಳು ಪ್ರಪಂಚದೆಲ್ಲೆಡೆಯ ಜನರನ್ನು ಸೆಳೆದಿದ್ದು, ಅದು ತನ್ನದೇ ಬೆಕ್ಕಿನ ಫುಡ್ ಬ್ರಾಂಡ್ ಅನ್ನು ಹೊಂದಿದೆ. ಇದರ ಜೊತೆಗೆ ನಲಾ ತನ್ನದೇ ಹೆಸರಿನ ಬಟ್ಟೆ ಬ್ರಾಂಡ್ ಅನ್ನ ಹೊಂದಿದೆ. ಲವ್ ನಲಾ ಹೆಸರಿನ ಈ ಫುಡ್ ಬ್ರಾಂಡ್ ಪ್ರೀಮಿಯಂ ಸರಣಿಯ ಕ್ಯಾಟ್ ಫುಡ್ ಬ್ರಾಂಡ್ ಆಗಿದೆ. ವರದಿಗಳ ಪ್ರಕಾರ ಈ ಲವ್ ನಲಾ ಕ್ಯಾಟ್ ಫುಡ್, ಹೆಸರಾಂತ ಹಸ್ಬ್ರೋ, ರಿಯಲ್ ವೆಂಚರ್ಸ್ ಮತ್ತು ಸೀಡ್ ಕ್ಯಾಂಪ್ ಮುಂತಾದ ಪ್ರಮುಖ ಹೂಡಿಕೆದಾರರನ್ನು ಹೊಂದಿದ್ದು, ಇವರಿಂದ 12 ಮಿಲಿಯನ್ ಸಂಗ್ರಹಿಸಿದೆ. ಅಲ್ಲದೇ 2020ರಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಈ ನಲಾ ಬೆಕ್ಕಿನ ಹೆಸರಲ್ಲಿ ಇ-ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ. ಲೀವಿಂಗ್ ಯುವರ್ ಬೆಸ್ಟ್ ಲೈಫ್ ಅಕಾರ್ಡಿಂಗ್ ಟು ನಲಾ ಕ್ಯಾಟ್ ಎಂಬುದು ಈ ಪುಸ್ತಕದ ಹೆಸರಾಗಿದೆ. 

ಐಷಾರಾಮಿ ಬಂಗಲೆಯಲ್ಲಿ ವಾಸ, ಬಿಎಂಡಬ್ಲ್ಯು ಕಾರಲ್ಲಿ ಓಡಾಟ.. ಎಷ್ಟು ಲಕ್ಕಿ ಈ ನಾಯಿ!

ನಲಾಗೆ ಇಷ್ಟೊಂದು ಆದಾಯ ಎಲ್ಲಿಂದ?

ಇಷ್ಟೊಂದು ಫೇಮಸ್ ಆಗಿರು ನಲಾ ಬೆಕ್ಕಿನ ಬಹುತೇಕ ಗಳಿಕೆಗಳೆಲ್ಲವೂ ಅದರ ಸೋಶಿಯಲ್ ಮೀಡಿಯಾ ಆಕ್ಟಿವಿಟಿಸ್‌ಗಳಿಂದಲೇ ಬಂದಿದೆ. ಪೈಡ್ ಪ್ರಮೋಷನ್‌ಗಳು, ವಿವಿಧ ಬ್ರಾಂಡ್‌ಗಳ ಪಾರ್ಟನರ್‌ ಶಿಪ್ ಹಾಗೂ ಬಟ್ಟೆ ಉದ್ಯಮದಿಂದಲೂ ಈ ನಲಾಗೆ ಕೋಟ್ಯಂತರ ರೂ ಆದಾಯ ಬರುತ್ತಿದೆ. ಇನ್ಸ್ಟಾಗ್ರಾಮ್ ಮಾತ್ರವಲ್ಲದೇ ನಲಾ ತನ್ನ ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಟಿಕ್‌ಟಾಕ್‌ ಹಾಗೂ ಯೂಟ್ಯೂಬ್‌ಗಳಲ್ಲಿಯೂ ತನ್ನ ಖಾತೆಯನ್ನು ಹೊಂದಿದ್ದು, ಈಕೆಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದಕ್ಕೆ ನಿಧಿ ಸಂಗ್ರಹಿಸುವುದಕ್ಕೆ ಬಳಕೆಯಾಗುತ್ತಿದೆ.

 
 
 
 
 
 
 
 
 
 
 
 
 
 
 

A post shared by Nala Cat ™ (@nala_cat)

 

click me!