ಅಮೆರಿಕದೆಲ್ಲೆಡೆ ಚೀನಾ ರಹಸ್ಯ ಬೀಜ... ಕೊರೋನಾ ನಂತ್ರ ಇದ್ಯಾವ ಕೆಲಸಕ್ಕೆ ಇಳಿಯಿತು ಡ್ರ್ಯಾಗನ್!

By Suvarna NewsFirst Published Jul 29, 2020, 3:28 PM IST
Highlights

ಅಮರಿಕದಲ್ಲಿ ಚೀನಾ ಬೀಜಗಳೂ/ ಯಾವ ಕಾರಣಕ್ಕು ಸಸಿ ಮಾಡುವ ಯತ್ನ ಮಾಡಬೇಡಿ/ ಜೈವಿಕ ಅಸಮತೋಲನ ಸೃಷ್ಟಿಸಲು ಚೀನಾ ಸಂಚು? ಅಮೆರಿಕದಲ್ಲಿ ಹಲ್ ಚಲ್ ಸೃಷ್ಟಿಸಿದ ಪ್ಯಾಕೇಟ್ ಗಳು

ನ್ಯೂಯಾರ್ಕ್ (ಜು. 29)  ಅಮೆರಿಕದ 27 ಕ್ಕೂ ಅಧಿಕ ರಾಜ್ಯಗಳಲ್ಲಿ  ಚೀನಾದ ಮಾಂತ್ರಿಕ  ಬೀಜಗಳು ಕಂಡು ಬಂದಿದೆ.  ಚೀನಾದ ಪ್ಯಾಕೇಟ್ ಗಳಲ್ಲಿ ಕಂಡುಬಂದಿರುವ ಸಸ್ಯದ ಬೀಜಗಳು ಒಂದು ರೀತಿಯ ಆತಂಕಕಕ್ಕೆ ಕಾರಣವಾಗಿದೆ.

ನಾಗರಿಕರು ಯಾವ ಕಾರಣಕ್ಕೂ ಬೀಜಗಳನ್ನು ಸಸಿ ಮಾಡುವ ಯತ್ನ ಮಾಡಬಾರದು. ಇದು ಪರಿಸರಕ್ಕೆ ಮಾರಕವಾಗಿರಬುದು  ಎಂಬ ಎಚ್ಚರಿಕೆ ನೀಡಲಾಗಿದೆ.

ಅಮೆರಿಕದ ಕೃಷಿ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು  ಆದಷ್ಟೂ ಇದರಿಂದ ದೂರ ಇರಿ ಎಂದು ತಿಳಿಸಿದೆ. ಒಂದು ವೇಳೆ ಇಂಥ ಪ್ಯಾಕೇಟ್ ಕಂಡುಬಂದರೆ ಮಾಹಿತಿ ನೀಡಿ ಅಧಿಕಾರಿಗಳು ಬರುವವರೆಗೂ ಯಾವುದೆ ಸಾಹಸ ಮಾಡಬೇಡಿ ಎಂದು ತಿಳಿಸಲಾಗಿದೆ.

ಚೀನಾ ವಿರುದ್ಧ ಭಾರತದ ಡಿಜಿಟಲ್ ದಾಳಿ.. ನಷ್ಟವೋ ನಷ್ಟ

ಪರಿಸರದಲ್ಲಿ ಅಸಮತೋಲನ ಮಾಡುವ ಜೈವಿಕ ಸಂಚು ಇದರ ಹಿಂದೆ ಇದ್ದರೂ ಇರಬಹುದು.  ಅಮೆರಿಕದ ಆರ್ಥಿಕತೆ ಮೇಲೆಯೇ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.ಚೀನಾದ ವುಹಾನ್ ನಲ್ಲಿ ಹುಟ್ಟಿದ್ದ ಕೊರೋನಾ ಎಂಬ ಮಹಾ ವೈರಸ್ ಈಗ ಇಡೀ ಪ್ರಪಂಚ ವ್ಯಾಪಿಸಿದೆ. ಎಲ್ಲ ದೇಶಗಳ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಈ ಪ್ಯಾಕೇಟ್ ರಹಸ್ಯ ಏನೆಂಬುದು ಎಂಬುದರ ತನಿಖೆ ನಡೆಯುತ್ತಿದೆ.

click me!