Muhammad Name: ಇಂಗ್ಲೆಂಡ್‌ನಲ್ಲಿ ಮತ್ತೆ 'ಮೊಹಮ್ಮದ್' ಹವಾ! ಹುಡುಗರ ಜನಪ್ರಿಯ ಹೆಸರುಗಳಲ್ಲಿ ಸತತ ಮೂರನೇ ವರ್ಷವೂ ಟಾಪ್

Published : Jul 11, 2026, 09:39 PM IST
Muhammad Most popular boys name in England and Wales for third consecutive year

ಸಾರಾಂಶ

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2025ರಲ್ಲಿ ಜನಿಸಿದ ಗಂಡು ಮಕ್ಕಳಿಗೆ ಇಡಲಾದ ಹೆಸರುಗಳ ಪೈಕಿ 'ಮೊಹಮ್ಮದ್' ಸತತ ಮೂರನೇ ವರ್ಷವೂ ಮೊದಲ ಸ್ಥಾನದಲ್ಲಿದೆ. ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ (ONS) ವರದಿ ಪ್ರಕಾರ, ಸುಮಾರು 6,000 ಮಕ್ಕಳಿಗೆ ಈ ಹೆಸರನ್ನು ಇಡಲಾಗಿದೆ.

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಗಂಡು ಮಕ್ಕಳಿಗೆ ಇಡಲಾಗುವ ಹೆಸರುಗಳ ಪಟ್ಟಿಯಲ್ಲಿ 'ಮೊಹಮ್ಮದ್'(Muhammad Name) ಹೆಸರು ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ. ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ (ONS) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, 2025ರಲ್ಲಿ ಜನಿಸಿದ ಗಂಡು ಮಕ್ಕಳಲ್ಲಿ ಈ ಹೆಸರೇ ಅತ್ಯಂತ ಹೆಚ್ಚು ನಾಮಕರಣ ಮಾಡಲಾಗಿದೆ. ಇದು ಒಂದೋ ಎರಡೋ ವರ್ಷಗಳ ಟ್ರೆಂಡ್ ಅಲ್ಲ, ಬರೋಬ್ಬರಿ ಸತತ ಮೂರನೇ ವರ್ಷವೂ 'ಮೊಹಮ್ಮದ್' ಹೆಸರು ಮೊದಲ ಸ್ಥಾನದಲ್ಲಿರುವುದು ವಿಶೇಷ.

ವಿಶೇಷ. ವರದಿಯ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಸುಮಾರು 6,000 ನವಜಾತ ಗಂಡು ಶಿಶುಗಳಿಗೆ 'ಮೊಹಮ್ಮದ್' ಎಂದು ಹೆಸರಿಡಲಾಗಿದೆ. ಈ ಮೂಲಕ, ಇಂಗ್ಲೆಂಡ್ ಮತ್ತು ವೇಲ್ಸ್‌ನಾದ್ಯಂತ ಪೋಷಕರ ಮೊದಲ ಆಯ್ಕೆಯಾಗಿ ಈ ಹೆಸರೇ ಫೇವರಿಟ್ ಆಗಿದೆ. ಈ ಅಂಕಿಅಂಶಗಳು ದೇಶದಲ್ಲಿನ ಹೆಸರಿಡುವ ಸಂಪ್ರದಾಯಗಳು, ಸಾಂಸ್ಕೃತಿಕ ಪದ್ಧತಿಗಳ ಮೇಲೆ ಬೆಳಕು ಚೆಲ್ಲುತ್ತವೆ. ಈ ಜನಪ್ರಿಯತೆಯು ಕೇವಲ ಆಕಸ್ಮಿಕವಲ್ಲ, ಬದಲಾಗಿ ಕಳೆದ ಮೂರು ವರ್ಷಗಳಿಂದ ಸತತ ಮೊದಲ ಸ್ಥಾನ ಕಾಯ್ದುಕೊಳ್ಳಬೇಕಾದರೆ ಆ ಸಮುದಾಯದಲ್ಲಿನ ಸ್ಥಿರವಾದ ನಂಬಿಕೆಯನ್ನ ತೋರಿಸುತ್ತಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ಹೆಸರು ಮೊದಲ ಸ್ಥಾನದಲ್ಲಿರುವುದರಿಂದ ಆ ಹೆಸರನ್ನೇ ಹೆಚ್ಚು ನಾಮಕರಣ ಮಾಡಿರುವುದಕ್ಕೆ ಸಾಕ್ಷಿಯಾಗಿದೆ. ONSನಂತಹ ಅಧಿಕೃತ ಸಂಸ್ಥೆಯು ಈ ಡೇಟಾವನ್ನು ಬಿಡುಗಡೆ ಮಾಡಿರುವುದರಿಂದ, ಇದು ಅಲ್ಲಿನ ಸಾಮಾಜಿಕ ಚಿತ್ರಣವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ.

ಸತತ ಮೂರನೇ ವರ್ಷವೂ ಟಾಪ್!

ಒಂದು ಹೆಸರು ಜನಪ್ರಿಯತೆಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವುದು ಸಾಮಾನ್ಯ. ಆದರೆ ಸತತ ಮೂರು ವರ್ಷಗಳ ಕಾಲ ಅದೇ ಸ್ಥಾನವನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ 'ಮೊಹಮ್ಮದ್' ಹೆಸರು ಈ ಸಾಧನೆ ಮಾಡಿದ್ದು, ಅದರ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ONS ವರದಿಯು ಕೇವಲ ಹೆಸರುಗಳ ಪಟ್ಟಿಯನ್ನಷ್ಟೇ ನೀಡುವುದಿಲ್ಲ, ಬದಲಾಗಿ ಸಮಾಜದಲ್ಲಿನ ಬದಲಾಗುತ್ತಿರುವ ಆದ್ಯತೆಗಳನ್ನು ಸಹ ದಾಖಲಿಸುತ್ತದೆ. 2025ರಲ್ಲೂ 'ಮೊಹಮ್ಮದ್' ಹೆಸರು ಅಗ್ರಸ್ಥಾನದಲ್ಲಿತ್ತು. ಈ ಹೆಸರಿನ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಮಹತ್ವವನ್ನು ಎತ್ತಿ ತೋರಿಸಿತ್ತು. ಈ ಅಂಕಿಅಂಶಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಗ್ರಾಸವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪತ್ನಿಗೆ ಬಿಕಿನಿ ಧರಿಸೋ ಆಸೆ ಆಯ್ತೆಂದು 500 ಕೋಟಿಗೆ ಪೂರ್ತಿ ದ್ವೀಪವನ್ನೇ ಖರೀದಿಸಿದ ಉದ್ಯಮಿ
ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ