
ವಿಯೆಟ್ನಾಂ (ಜು.11) ವಿಯೆಟ್ನಾಂ ಐಲ್ಯಾಂಡ್ ಪ್ರವಾಸಿ ತಾಣದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಬೋಟಿನಲ್ಲಿ ಅತೀ ಹೆಚ್ಚು ಭಾರತೀಯರು ಪ್ರಯಾಣ ಬೆಳೆಸಿದ್ದರು. ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಭಾರತದ ವಿವಿದೆಡೆಯಿಂದ ಪ್ರವಾಸಕ್ಕಾಗಿ ವಿಯೆಟ್ನಾಂ ತೆರಳಿದ್ದರು. ಬೋಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಮಗುಚಿ ದುರಂತ ಸಂಭವಿಸಿದೆ. ಈ ಬೋಟ್‌ನಲ್ಲಿ ಒಟ್ಟು 36 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಪೈಕಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇನ್ನುಳಿದವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಾಗಿದೆ.
ವಿಯೆಟ್ನಾಂನ ಫು ಕಾಕ್ ಐಸ್‌ಲ್ಯಾಂಡ್‌ನಲ್ಲಿ ದುರಂತ ಸಂಭವಿಸಿದೆ. ಸಮುದ್ರದಲ್ಲಿ ಏಕಾಏಕಿ ಅಲೆಗಳ ಅಬ್ಬರ ಹಾಗೂ ಗಾಳಿ ಹೆಚ್ಚಾಗಿದೆ. ಪರಿಣಾಮ ಬೋಟ್ ಮಗುಚಿ ದುರಂತ ಸಂಭವಿಸಿದೆ. ಅಕ್ಕ ಪಕ್ಕದಲ್ಲಿ ಇತರ ಕೆಲ ಪ್ರವಾಸಿಗರು ದೋಣಿಗಳಿತ್ತು. ಇತ್ತ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸುವಷ್ಟರಲ್ಲೇ ಹಲವರು ಮೃತಪಟ್ಟಿದ್ದಾರೆ. ನಾಪತ್ತೆಯಾದವರಿಗೆ ಹುಡುಕಾಟ ತೀವ್ರಗೊಂಡಿದೆ. ಇತ ವಿಯೆಟ್ನಾಂ ಭಾರತೀಯ ರಾಯಭಾರ ಕಚೇರಿ ಕಂಟ್ರೋಲ್ ರೂಂ ತೆರೆದಿದೆ.
ಭಾರತೀಯ ಪ್ರವಾಸಿಗರಿದ್ದ ಬೋಟು ಫು ಕಾಕ್ ವಿಯೆಟ್ನಾಂನ ಐಸ್‌ಲ್ಯಾಂಡ್ ಬಳಿ ದುರಂತಕ್ಕೀಡಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಸಾಗಿದೆ. ಘಟನೆಯ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಸ್ಥಳೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. ಸಂತ್ರಸ್ತ ಕುಟುಂಬಗಳಿಗೆ ಮಾಹಿತಿ ಹಾಗೂ ನೆರವು ನೀಡುವ ಸಲುವಾಗಿ ಭಾರತದ ಕಾನ್ಸಲೇಟ್ ಜನರಲ್ ವಿಯೆಟ್ನಾಂ ಕಂಟ್ರೋಲ್ ರೂಂ ತೆರೆದಿದಿದೆ. ಸಹಾಯವಾಣಿ ಸಂಖ್ಯೆ +84 36 281 7930, +84 91 552 37 14 ಹಾಗೂ +84 33 452 0414 ಈ ನಂಬರ್‌ಗೆ ಕರೆ ಮಾಡಿ ಸಂತ್ರಸ್ತ ಕುಟುಂಬಗಳು ನೆರವು ಪಡೆಯಲು ಸೂಚಿಸಿದೆ. ಹನೋಯ್ ಬಳಿಯ ಕಂಟ್ರೋಲ್ ಸಂಖ್ಯೆ +84 91 308 9165 ನೀಡಲಾಗಿದೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕಡಲಿನ ತೀವ್ರ ಅಬ್ಬರದ ನಡುವೆ ರಕ್ಷಣಾ ಕಾರ್ಯಾಚರಣೆಗಳಿಗೂ ತೊಡಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ