ಯಾರನ್ನೂ ಬಿಡದಷ್ಟು ದೊಡ್ಡ ಮಟ್ಟದಲ್ಲಿ ಬೆಳದ ಕೊರೋನಾ ವೈರಸ್| ಮಾನವರ ರಕ್ತದ ರುಚಿ ಕಂಡಿರುವ ಕೊರೋನಾ ವೈರಸ್| ಇಡೀ ಮಾನವ ಕುಲವೇ ಕೊರೋನಾ ವೈರಸ್ ಟಾರ್ಗೆಟ್| ಮಾರಕ ವೈರಸ್‌ಗೆ ಬಲಿಯಾದ ವುಹಾನ್ ಆಸ್ಪತ್ರೆ ಮುಖ್ಯಸ್ಥ| ವುಚಾಂಗ್ ಆಸ್ಪತ್ರೆ ಮುಖ್ಯಸ್ಥ ಲಿಯು ಜಿಮಿಂಗ್ ಕೊರೋನಾ ವೈರಸ್‌ಗೆ ಬಲಿ|
ಬಿಜಿಂಗ್(ಫೆ.18): ಕೊರೋನಾ ವೈರಸ್ ಯಾರನ್ನೂ ಬಿಡದಷ್ಟು ದೊಡ್ಡ ಮಟ್ಟದಲ್ಲಿ ಬೆಳದಿದೆ. ಮಾನವರ ರಕ್ತದ ರುಚಿ ಕಂಡಿರುವ ಕೊರೋನಾ ವೈರಸ್ ಎಲ್ಲರನ್ನೂ ಬಲಿ ಪಡೆದೇ ಸಿದ್ಧ ಎಂಬಷ್ಟು ವೇಗದಲ್ಲಿ ಹರಡುತ್ತಿದೆ.
ಅದರಲ್ಲೂ ಕೊರೋನಾ ವೈರಸ್ ಪತ್ತೆಯಾದ ಚೀನಾದ ವುಹಾನ್ ಇದೀಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಇದುವರೆಗೂ ಸಮಾರು 79,000 ಜನರಿಗೆ ಈ ಮಾರಕ ವೈರಸ್ ಅಂಟಿದ್ದು, 1,900 ಜನ ಈಗಾಗಲೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ.
undefined
ಇನ್ನು ಕೊರೋನಾ ವೈರಸ್‌ನ್ನು ಸೋಲಿಸಲು ಸಜ್ಜಾದ ಚೀನಾ, ವುಹಾನ್‌ನಲ್ಲಿ ಕೇವಲ 10 ದಿನದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿ ಕೊರೋನಾಗೆ ಚಾಲೆಂಜ್ ಮಾಡಿದೆ. ಆದರೆ ಇದಕ್ಕೂ ಬಗ್ಗದ ಕೊರೋನಾ ವೈರಸ್ ಇದೀಗ ಆಸ್ಪತ್ರೆಯ ಮುಖ್ಯಸ್ಥನನ್ನೇ ಬಲಿ ಪಡೆದಿದೆ.
Very sad to hear if true: “the director of Wuchang Hospital in Wuhan, Liu Zhiming, died Tuesday morning after "all-out rescue efforts failed," state broadcaster CCTV reported.” So many top doctors are dying of this. https://t.co/DjOfCoAb6Q
— Eric Feigl-Ding (@DrEricDing)ಹೌದು, ಕೊರೋನಾ ವಿರುದ್ಧ ಹೋರಾಡಲು ವುಹಾನ್‌ನಲ್ಲಿ ಕಟ್ಟಲಾಗಿದ್ದ ವುಚಾಂಗ್ ಆಸ್ಪತ್ರೆ ಮುಖ್ಯಸ್ಥ ಲಿಯು ಜಿಮಿಂಗ್ ಅದೇ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಚೀನಿ ಮಾಧ್ಯಮಗಳು ಬಜಿರಂಗಪಡಿಸಿವೆ.
ವುಚಾಂಗ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಲಿಯು ಜಿಮಿಂಗ್ ಅದೇ ವೈರಸ್‌ಗೆ ಬಲಿಯಾಗಿರುವುದು ವಿಪರ್ಯಾಸ.