ಪ್ರಾಣಿಗಳ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿ ಪ್ರೀತಿ ಎಲ್ಲರಿಗೂ ಒಂದೇ ಮನುಷ್ಯರು ಪ್ರಾಣಿಗಳು ಎಂಬ ಬೇಧವಿಲ್ಲ ಎಂಬುದನ್ನು ಸಾಬೀತುಪಡಿಸಿವೆ.
ತಾಯಿ ಪ್ರೀತಿಗೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ತನ್ನ ಕಂದನ ರಕ್ಷಣೆಗಾಗಿ ಎಂತಹಾ ಸಂಕಷ್ಟ, ಅಡೆತಡೆಗಳನ್ನು ಧೃಡವಾಗಿ ಎದುರಿಸಬಲ್ಲಳು. ತಾಯಿ ಪ್ರೀತಿಗೆ ಸರಿಸಾಟಿ ಬೇರೆ ಯಾವುದು ಇಲ್ಲ ಎಂದು ಹೇಳುವುದಕ್ಕೆ ನಮ್ಮ ಸಮಾಜದಲ್ಲಿ ಈಗಾಗಲೇ ಹಲವು ನಿದರ್ಶನಗಳು ನಡೆದು ಹೋಗಿವೆ. ಪ್ರಾಣಿಗಳು ಕೂಡ ತಮ್ಮ ಕಂದನ ರಕ್ಷಣೆಗಾಗಿ ಎಂತಹ ಅನಾಹುತವನ್ನು ಎದುರಿಸಲು ಸಿದ್ಧವಾಗಿರುತ್ತವೆ. ಅದೇ ರೀತಿ ಇಲ್ಲಿ ಪ್ರಾಣಿಗಳ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿ ಪ್ರೀತಿ ಎಲ್ಲರಿಗೂ ಒಂದೇ ಮನುಷ್ಯರು ಪ್ರಾಣಿಗಳು ಎಂಬ ಬೇಧವಿಲ್ಲ ಎಂಬುದನ್ನು ಸಾಬೀತುಪಡಿಸಿವೆ.
ವಿಡಿಯೋದಲ್ಲಿ ಕಾಣಿಸುವಂತೆ ಸಿಂಹವೊಂದು ಎಮ್ಮೆಯೊಂದರ ಕರುವಿನ ಮೇಲೆ ದಾಳಿ ಮಾಡಿ ಬೇಟೆಯಾಡಲು (Hunting) ಮುಂದಾಗಿದೆ. ಈ ವೇಳೆ ಎಮ್ಮೆಯ ಕರುವಿನ ಜೊತೆ ತಾಯಿಯೂ ಇದ್ದು, ಸಿಂಹ ತನ್ನ ಕಂದನ ಮೇಲೆ ಕಣ್ಣು ಹಾಕಿದೆ ಎಂಬುದು ಗೊತ್ತಾಗುತ್ತಿದ್ದಂತೆ ಎಮ್ಮೆ ತನ್ನ ಪ್ರಾಣದ ಹಂಗು ತೊರೆದು ಸಿಂಹದ ಮೇಲೆ ದಾಳಿ ಮಾಡಲು ಮುಂದಾಗಿ ಅದನ್ನು ಆ ಜಾಗದಿಂದ ದೂರ ಓಡಿಸುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, ತಾಯಿಯ ಮಮತೆಗೆ ಸರಿಸಾಟಿ ಬೇರೇನು ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸಾಮಾನ್ವವಾಗಿ ಸಿಂಹಗಳು ಹಿಂಡಿನಿಂದ ದೂರಾದ ಎಮ್ಮೆಗಳನ್ನು ಹಾಗೂ ಎಮ್ಮೆಗಳ ಕರುವನ್ನು ಬೇಟೆಯಾಡಲು ಬಯಸುತ್ತವೆ ಅಥವಾ ಸುರಕ್ಷಿತ ಅಂತರದಿಂದ ದೂರ ಇದ್ದ ಸಂದರ್ಭದಲ್ಲಿ ಎಮ್ಮೆಗಳ ಮೇಲೆ ದಾಳಿ ಮಾಡುತ್ತವೆ. ಈ ವಿಡಿಯೋದಲ್ಲಿಯೂ ಹಾಗೆ ತಾಯಿಗಿಂತ ಸ್ವಲ್ಪ ಮುಂದೆ ಓಡಿ ಓಡಿ ಬರುತ್ತಿದ್ದ ಎಮ್ಮೆ ಕರುವನ್ನು ಸಿಂಹ ಬೇಟೆಯಾಡಲು ಮುಂದಾಗಿದೆ. ಆದರೆ ಅಷ್ಟರಲ್ಲಿ ತಾಯಿ ಎಮ್ಮೆ ಅದನ್ನು ಓಡಿಸಿದೆ. ಹಾಗೆಯೇ ತಾಯಿ (Mother) ಎಮ್ಮೆಯನ್ನು ನೋಡುತ್ತಿದ್ದಂತೆ ಸಿಂಹವೂ ಕೂಡ ಓಟ ಕಿತ್ತಿದೆ. ಈ ವಿಡಿಯೋವನ್ನು ಬಿಲಾಲ್ ಅಹ್ಮದ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದು, 56 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಂಹದ ದಾಳಿಯಿಂದ ಮರಿಯನ್ನು ರಕ್ಷಿಸಿದ ಜಿರಾಫೆ : ವಿಡಿಯೋ ವೈರಲ್
ಎಮ್ಮೆಗಳು ಸಿಂಹಗಳ ಪಾಲಿನ ನೆಚ್ಚಿನ ಆಹಾರವಾಗಿದ್ದು, ತುಂಬಾ ಮಾಂಸವನ್ನು ಹೊಂದಿರುವ ದೊಡ್ಡ ಗಾತ್ರದ ಪ್ರಾಣಿಗಳಾಗಿರುವುದರಿಂದ ಸಿಂಹಗಳು ಎಮ್ಮೆಗಳ ಮೇಲೆ ದಾಳಿ ನಡೆಸಿದರೆ, ಐದು ದಿನಗಳ ಕಾಲ ಮತ್ತೆ ಬೇಟೆಗೆ ಮುಂದಾಗುವುದಿಲ್ಲ. ಆದರೆ ಎಮ್ಮೆಯೂ ಸಿಂಹಗಳ ಪಾಲಿಗೆ ಸುಲಭದ ಬೇಟೆಯೇನಲ್ಲ.
ಕೆಲ ದಿನಗಳ ಹಿಂದೆ ಸಿಂಹವೊಂದು ಜಿರಾಫೆ ಮರಿಯ ಮೇಲೆ ದಾಳಿ ಮಾಡಲು ಮುಂದಾದಾಗ ತಾಯಿ ಜಿರಾಫೆ ತನ್ನ ಕಂದನ ರಕ್ಷಣೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಕಾಣಿಸುವಂತೆ ಜಿರಾಫೆಯ ಮರಿಯೊಂದರ ಮೇಲೆ ಸಿಂಹ (Lion)ಹೊಂಚು ಹಾಕಿ ದಾಳಿ ನಡೆಸಿತ್ತು. ಈ ವೇಳೆ ದೂರದಲ್ಲಿದ್ದ ತಾಯಿ ಜಿರಾಫೆ ಓಡಿ ಬಂದು ಮರಿಯನ್ನು ರಕ್ಷಣೆ ಮಾಡಿದೆ. ತಾಯಿ ಜಿರಾಫೆ ಬಂದಿದೆ ತಡ ಸಿಂಹ ಎದ್ನೋ ಬಿದ್ನೋ ಅಂತ ಆ ಸ್ಥಳದಿಂದ ಓಡಿ ಹೋಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದ್ದು, ತಾಯಿ ಎಂದಿದ್ದರೂ ತಾಯಿಯೇ ಎಂಬುದನ್ನು ಸಾಬೀತುಪಡಿಸಿದೆ. ಅನಿಮಲ್ಸ್ ಪವರ್ ಎಂಬ ಇನ್ಸ್ಟಾಗ್ರಾಮ್(Instagram Page) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದರು.
ಅಯ್ಯೋ ಕಾಪಾಡಿ... ಪಾರ್ಟಿಗೆ ಬಂದ ಸಿಂಹಿಣಿ: ಮರವೇರಿದ ಅತಿಥಿ video viral