ಅಫ್ಘಾನಿಸ್ತಾನ: ಮಹಿಳಾ ಟಿವಿ ನಿರೂಪಕರಿಗೆ ಮುಖ ಮುಚ್ಚಿಕೊಳ್ಳುವಂತೆ ತಾಲಿಬಾನ್ ಆದೇಶ!

By Suvarna News  |  First Published May 19, 2022, 11:19 PM IST

ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಟಿವಿಯಲ್ಲಿನ ಎಲ್ಲಾ ಮಹಿಳಾ ನಿರೂಪಕರಿಗೆ ತಮ್ಮ ಮುಖವನ್ನು ಲೈವ್‌ನಲ್ಲಿ ಮುಚ್ಚುವಂತೆ ಆದೇಶಿಸಿದ್ದಾರೆ


ಕಾಬೂಲ್‌ (ಮೇ 19): ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಟಿವಿ ಚಾನೆಲ್‌ಗಳಲ್ಲಿನ ಎಲ್ಲಾ ಮಹಿಳಾ ನಿರೂಪಕರಿಗೆ ತಮ್ಮ ಮುಖವನ್ನು ಲೈವ್‌ನಲ್ಲಿದ್ದಾಗ ಮುಚ್ಚುವಂತೆ ಆದೇಶಿಸಿದ್ದಾರೆ ಎಂದು ದೇಶದ ಅತಿದೊಡ್ಡ ಮಾಧ್ಯಮ ಸಂಸ್ಥೆ ಗುರುವಾರ ತಿಳಿಸಿದೆ. ಈ ಆದೇಶವನ್ನು ತಾಲಿಬಾನಿನಿ ತೀರ್ಪುಗಳನ್ನು ಜಾರಿಗೊಳಿಸುವ ಕಾರ್ಯವನ್ನು ವಹಿಸಿಕೊಂಡಿರುವ ವರ್ಚು ಆಂಡ್‌ ವೈಸ್‌ (Virtue and Vice Ministry) ಸಚಿವಾಲಯ ನೀಡಿದೆ. ಅಲ್ಲದೇ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದಿಂದ ಕೂಡ ಈ ಆದೇಶ ಬಂದಿದೆ ಎಂದು TOLOnews ಚಾನೆಲ್ ಟ್ವೀಟ್‌ನಲ್ಲಿ ತಿಳಿಸಿದೆ.

ತಾಲಿಬಾನ್‌ ಈ  ಆದೇಶವನ್ನು "ಅಂತಿಮ ಮತ್ತು ನಾನ್ ನೆಗೋಶಬಲ್" ಎಂದು ಕರೆದಿದೆ ಎಂದು ಚಾನಲ್ ಹೇಳಿದೆ. TOLOnews ಮತ್ತು ಹಲವಾರು ಇತರ ಟಿವಿ ಮತ್ತು ರೇಡಿಯೋ ನೆಟ್‌ವರ್ಕ್‌ಗಳನ್ನು ಹೊಂದಿರುವ ಮೊಬಿ ಗ್ರೂಪ್‌ಗೆ ಹೇಳಿಕೆಯನ್ನು ಕಳುಹಿಸಲಾಗಿದೆ ಮತ್ತು ಇದನ್ನು ಇತರ ಅಫ್ಘಾನ್ ಮಾಧ್ಯಮಗಳಿಗೂ ಅನ್ವಯಿಸಲಾಗುತ್ತಿದೆ ಎಂದು ಟ್ವೀಟ್ ಹೇಳಿದೆ.

Tap to resize

Latest Videos

ಅಫಘಾನ್ ಸ್ಥಳೀಯ ಮಾಧ್ಯಮದ ಅಧಿಕಾರಿಯೊಬ್ಬರು ತಮ್ಮ ಸ್ಟೇಷನ್ ಈ ಆದೇಶವನ್ನು ಸ್ವೀಕರಿಸಿದೆ ಎಂದು ದೃಢಪಡಿಸಿದ್ದು ಅದು ಚರ್ಚೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಸ್ಟೇಷನ್‌ಗೆ ಇದನ್ನು ಬಿಟ್ಟು  ಬೇರೆ ದಾರಿಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳ ಭಯದಿಂದ  ಮತ್ತು ತಮ್ಮ ಸ್ಟೇಷನ್ ಹೆಸರನ್ನು ಬಹಿರಂಗೊಳಿಸದ ಷರತ್ತಿನ ಮೇಲೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಅಡಿಯಿಂದ ಮುಡಿವರೆಗೆ ಮಹಿಳೆಯರಿಗೆ ಬುರ್ಖಾ ಕಡ್ಡಾಯ ಮಾಡಿದ ತಾಲಿಬಾನ್!

ಹಲವಾರು ಮಹಿಳಾ ಆ್ಯಂಕರ್‌ಗಳು ಮತ್ತು ನಿರೂಪಕರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ಫೇಸ್ ಮಾಸ್ಕ್‌ಗಳಿಂದ ಮುಖವನ್ನು ಮುಚ್ಚಿರುವ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಒಬ್ಬ ಪ್ರಮುಖ TOLO ನಿರೂಪಕಿ, ಯಾಲ್ಡಾ ಅಲಿ, "ವರ್ಚು ಆಂಡ್‌ ವೈಸ್‌ ಸಚಿವಾಲಯದ ಆದೇಶದ ಮೇರೆಗೆ ಮಹಿಳೆಯನ್ನು ಅಳಿಸಲಾಗುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಮಾಸ್ಕ್ ಹಾಕಿಕೊಂಡು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಸಂಸ್ಥೆಯಾದ ಶಂಶಾದ್ ಟಿವಿಯಲ್ಲಿ, ಆದೇಶದ ಅನುಷ್ಠಾನವು ಮಿಶ್ರಣವಾಗಿದೆ: ಒಬ್ಬ ಮಹಿಳಾ ಆಂಕರ್ ಗುರುವಾರ ಮುಖಕ್ಕೆ ಮಾಸ್ಕ್ ಧರಿಸಿ ಕಾಣಿಸಿಕೊಂಡರೇ ನಂತರ  ಇನ್ನೊಬ್ಬರು ಮುಖ ತೋರಿಸದೆ ಹೋಗಿದ್ದಾರೆ.

1996-2001ರ ಅವಧಿಯಲ್ಲಿ ತಾಲಿಬಾನ್‌ನ ಮೊದಲ ಬಾರಿಗೆ ಅಧಿಕಾರದಲ್ಲಿದ್ದಾಗ, ಅವರು ಮಹಿಳೆಯರ ಮೇಲೆ ಅಗಾಧವಾದ ನಿರ್ಬಂಧಗಳನ್ನು ಹೇರಿತ್ತು. ಮಹಿಳೆಯರು ಸಂಪೂರ್ಣ ಮೈಮುಚ್ಚುವಂತೆ ಬುರ್ಖಾವನ್ನು ಧರಿಸಬೇಕು ಮತ್ತು ಕಣ್ಣುಗಳನ್ನು ಜಾಲರಿಯಿಂದ ಮುಚ್ಚಬೇಕು ಎಂದು ಆದೇಶಿಸಿತ್ತು ಮತ್ತು ಸಾರ್ವಜನಿಕ ಜೀವನ ಮತ್ತು ಶಿಕ್ಷಣದಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿತ್ತು.

ಕಠಿಣ ಕಾನೂನು: ಆಗಸ್ಟ್‌ನಲ್ಲಿ  ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಆರಂಭದಲ್ಲಿ ಮಹಿಳೆಯರಿಗೆ ಯಾವುದೇ ಡ್ರೆಸ್ ಕೋಡ್ ಘೋಷಿಸಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ  ತೀಕ್ಷ್ಣವಾದ, ಕಠಿಣವಾದ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. 

ಈ ತಿಂಗಳ ಆರಂಭದಲ್ಲಿ, ತಾಲಿಬಾನ್ ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕಣ್ಣುಗಳನ್ನು ಮಾತ್ರ ಕಾಣುವಂತೆ ತಲೆಯಿಂದ ಕಾಲಿನವರೆಗೆ ವರೆಗೆ ಬಟ್ಟೆಗಳನ್ನು ಧರಿಸಲು ಆದೇಶಿಸಿತ್ತು. ಮಹಿಳೆಯರು ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬರಬೇಕು ಮತ್ತು ಪುರುಷ ಸಂಬಂಧಿಗಳು ಮಹಿಳೆಯರ ಡ್ರೆಸ್ ಕೋಡ್ ಉಲ್ಲಂಘನೆಗಾಗಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ, ಸಮನ್ಸ್‌ನಿಂದ ಪ್ರಾರಂಭಿಸಿ ನ್ಯಾಯಾಲಯದ ವಿಚಾರಣೆಗಳು ಮತ್ತು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತೀರ್ಪು ಹೇಳಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಟಿಕ್‌ಟಾಕ್, ಪಬ್‌ಜಿ ಬ್ಯಾನ್:‌‌ ಯುವಕರನ್ನ ಆ್ಯಪ್ಸ್ ದಾರಿತಪ್ಪಿಸುತ್ತಿವೆ ಎಂದ ತಾಲಿಬಾನ್

ತಾಲಿಬಾನ್ ನಾಯಕರು ಆರನೇ ತರಗತಿಯ ನಂತರ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಯುವ ಆದೇಶವನ್ನು ಹೊರಡಿಸಿದ್ದಾರೆ, ಎಲ್ಲಾ ವಯಸ್ಸಿನ ಹುಡುಗಿಯರಿಗೆ ಶಿಕ್ಷಣವನ್ನು ಅನುಮತಿಸಲಾಗುವುದು ಎಂಬ ತಾಲಿಬಾನ್ ಅಧಿಕಾರಿಗಳ ಹಿಂದಿನ ಭರವಸೆಯನ್ನು ಇದು ಹುಸಿಗೊಳಿಸಿದೆ.

click me!