
ಹಿರೋಶಿಮಾ: ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಯತ್ನದ ಬಗ್ಗೆ ಒಂದಾಗಿ ಧ್ವನಿ ಎತ್ತುವ ಅವಶ್ಯಕತೆ ಇದೆ. ವಿಶ್ವದ ಪ್ರತಿಯೊಂದು ದೇಶಗಳು ಕೂಡಾ ಅಂತಾರಾಷ್ಟ್ರೀಯ ಕಾನೂನು, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಈ ಮೂಲಕ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮತ್ತು ಲಡಾಖ್ ವಲಯದಲ್ಲಿ ಪದೇ ಪದೇ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸುವ ಚೀನಾದ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ಇಲ್ಲಿ ಜಿ7 ಶೃಂಗ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಪ್ರಸಕ್ತ ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ನಾವು ರಾಜಕೀಯ ಅಥವಾ ಆರ್ಥಿಕ ವಿಷಯವಾಗಿ ಪರಿಗಣಿಸಿಲ್ಲ. ಬದಲಾಗಿ ಮಾನವೀಯತೆ ಮತ್ತು ಮಾನವೀಯ ಮೌಲ್ಯದ ವಿಷಯವಾಗಿ ಪರಿಗಣಿಸಿದ್ದೇವೆ. ಯಾವುದೇ ಬಿಕ್ಕಟ್ಟು ಮತ್ತು ವಿವಾದವನ್ನು ಮಾತುಕತೆ ಮೂಲಕವೇ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಈ ವಿಷಯ ಸಂಬಂಧ ಶನಿವಾರ ನಾನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ (Volodymyr Zelensky) ಅವರೊಂದಿಗೆ ಮಾತುಕತೆ ನಡೆಸಿದ್ದೆ. ಬಿಕ್ಕಟ್ಟು ಪರಿಹರಿಸಲು ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ನಾವು ಬದ್ಧ ಎಂದು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ’ ಎಂದರು.
ನಿಮ್ಮ ಬಳಿ ಆಟೋಗ್ರಾಫ್ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್!
ಇದೇ ವೇಳೆ ಆಧುನಿಕ ಯುಗದಲ್ಲಿ ಪರಿಹರಿಸಲಾಗದ ಯಾವುದೇ ಸಮಸ್ಯೆಯೂ ಇಲ್ಲ ಎಂದು ಮೋದಿ, ಬುದ್ಧನ (Budha) ಬೋಧನೆಗಳಲ್ಲಿ ಇವುಗಳಿಗೆ ಪರಿಹಾರವನ್ನು ನಾವು ಕಾಣಬಹುದು. ದ್ವೇಷವನ್ನು ನಾವು ಬಾಂಧವ್ಯದ ಮೂಲಕ ತಣಿಸಬಹುದು ಮತ್ತು ನಾವೆಲ್ಲರೂ ಇದೇ ಸ್ಪೂರ್ತಿಯಲ್ಲಿ ಒಂದಾಗಿ ಮುಂದೆ ಸಾಗಬೇಕು. ಇದೇ ಮಾರ್ಗದಲ್ಲಿ ನಾವು ಬಾಂಗ್ಲಾದೇಶದೊಂದಿಗಿನ ನಮ್ಮ ಗಡಿ ಬಿಕ್ಕಟ್ಟನ್ನು ಇತ್ಯರ್ಥಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ದೇಶದ ಸಂಸ್ಕೃತಿ ಪ್ರಚಾರಕ್ಕೆ ವಿದೇಶ ಯಾತ್ರೆಗಳೇ ಅಸ್ತ್ರ
3 ದೇಶಗಳಿಗೆ 6 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಈ ವಿದೇಶ ಯಾತ್ರೆಯನ್ನು ಭಾರತೀಯ ಸಂಸ್ಕೃತಿಯನ್ನು ಪ್ರಚುರಪಡಿಸುವ ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ವಿದೇಶಗಳಲ್ಲಿ ಭಾರತೀಯ ಕಲೆ, ಸಂಸ್ಕೃತಿಗೆ ಮತ್ತಷ್ಟು ಮನ್ನಣೆ ನೀಡುವ ಕೆಲಸ ಮಾಡಿದ್ದಾರೆ. ಮೊದಲಿಗೆ ಜಿ7 ಶೃಂಗಕ್ಕಾಗಿ ಜಪಾನ್‌ನ ಹಿರೋಶಿಮಾ ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, 2ನೇ ಮಹಾಯುದ್ಧದ ವೇಳೆ ಪರಮಾಣು ಬಾಂಬ್ ದಾಳಿಗೆ ತುತ್ತಾದ ಸ್ಥಳದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸುವ ಭಾರತೀಯ ಮೌಲ್ಯಗಳನ್ನು ಮತ್ತೊಮ್ಮೆ ಜಗತ್ತಿನ ಮುಂದಿಡುವ ಯತ್ನ ಮಾಡಿದರು.
ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ
ಇನ್ನು ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಪ್ರಧಾನಿ ಮೋದಿ ಅವರು ಸ್ಥಳೀಯ ಟೋಕ್ ಪಿಸಿನ್ ಭಾಷೆಗೆ ಭಾಷಾಂತರವಾಗಿರುವ ತಮಿಳು ದ್ವಿಪದಿ (ತಿರುಕ್ಕುಲರ್) ಬಿಡುಗಡೆ ಮಾಡಿದ್ದಾರೆ. ಮತ್ತೊಂದೆಡೆ ತಮ್ಮ ಯಾತ್ರೆ ಕಡೆಯ ಹಂತದಲ್ಲಿ ಮೋದಿ ಆಸ್ಪ್ರೇಲಿಯಾಕ್ಕೆ ಭೇಟಿ ನೀಡುವ ವೇಳೆ ಸಿಡ್ನಿಯಲ್ಲಿ ಭಾರತೀಯರೇ ಹೆಚ್ಚಿರುವ ಪ್ರದೇಶವನ್ನು ಲಿಟಲ್ ಇಂಡಿಯಾ ಎಂದು ಘೋಷಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ