
ನೆದರ್ಲೆಂಡ್ (ಮೇ.16) ಪ್ರಧಾನಿ ನರೇಂದ್ರ ಮೋದಿ ಹಲವು ಮಾತುಕತೆ, ದ್ವಿಪಕ್ಷೀಯ ಒಪ್ಪಂದ, ವ್ಯಾಪರ ವಹಿವಾಟುಗಳ ನಿಟ್ಟಿನಲ್ಲಿ ವಿದೇಶಿ ಪ್ರವಾಸದಲ್ಲಿದ್ದಾರೆ. ಯುಎಇ ಭೇಟಿ ನೀಡಿದ ಬಳಿಕ ಇಂದು ನೆದರ್ಲೆಂಡ್‌ಗೆ ತಲುಪಿರುವ ಮೋದಿ, ಭಾರತೀಯ ಸಮುದಾಯದ ಜೊತೆ ಮಾತನಾಡಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಭಾರಿ ಸದ್ದು ಮಾಡಿದ ಜಲ್ಮುರಿ ನೆದರ್ಲೆಂಡ್‌ನಲ್ಲೂ ಸದ್ದು ಮಾಡಿದೆ. ಭಾಷಣ ಮಾಡುತ್ತಿದ್ದ ಮೋದಿ ಇಲ್ಲಿಗೂ ಜಲ್ಮುರಿ ತಲುಪಿತಾ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ನೆದರ್ಲೆಂಡ್ ಪ್ರವಾಸದಲ್ಲಿ ಮೋದಿ ನೆದರ್ಲೆಂಡ್‌ನಲ್ಲಿರುವ ಅನವಾಸಿ ಭಾರತೀಯರನ್ನುದ್ದೇಶಿ ಮಾತನಾಡಿದ್ದಾರೆ. ಭಾರಿ ಸಂಖ್ಯೆಯಲ್ಲಿ ಭಾರತೀಯ ಸಮುದಾಯ ಮೋದಿಯನ್ನು ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಿತ್ತು. ಮಾತಿನ ಆರಂಭದಲ್ಲೇ ಮೋದಿ ತನಗೆ ನೆದರ್ಲೆಂಡ್ ಅಲ್ಲ ಭಾರತದಲ್ಲೇ ಇದ್ದೇನೆ ಎಂದು ಭಾವಸವಾಗುತ್ತಿದೆ ಎಂದಿದ್ದಾರೆ. ಮಾತಿನ ನಡುವೆ ಭಾರತದ ಪ್ರಜಾಪ್ರಭುತ್ವ, ಇತ್ತೀಚಿನ ಪಂಚ ರಾಜ್ಯಗಳ ಚುನಾವಣೆ ಕುರಿತು ಉಲ್ಲೇಖಿಸಿದ್ದಾರೆ. ಪಶ್ಚಿಮ ಬಂಗಾಳ ಎಂದಾಗ ನೆರೆದಿದ್ದ ಸಮುದಾಯ ಕಿಕ್ಕಿರಿದು ಶಿಳ್ಳೆ ಚಪ್ಪಾಳೆ ತಟ್ಟಿತ್ತು. ಈ ವೇಳೆ ಹಲವರು ಜಲ್ಮುರಿ ಎಂದು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಜಲ್ಮುರಿ ನೆದರ್ಲೆಂಡ್‌ವರೆಗೂ ತಲುಪಿತಾ ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸಿದ್ದರು. ಇದರ ನಡುವೆ ಸಣ್ಣ ಅಂಗಡಿಗೆ ತೆರಳಿದ ಮೋದಿ 10 ರೂಪಾಯಿ ನೀಡಿ ಜಲ್ಮುರಿ ಸವಿದಿದ್ದರು. ಬಳಿಕ ಪಕ್ಕದಲ್ಲಿದ್ದವರಿಗೂ ಜಲ್ಮುರಿ ನೀಡಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಭಾರಿ ವೈರಲ್ ಆಗಿತ್ತು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಜಲ್ಮುರಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಟಿಎಂಸಿ ನಾಯಕರು, ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಮೋದಿ ಜಲ್ಮುರಿ ಮಾಧ್ಯಮ ಸ್ಟಂಟ್ ಎಂದು ಆರೋಪಿಸಿದ್ದರು.
ಮೋದಿ ಜಲ್ಮುರಿ ಸವಿದ ಎರಡೇ ದಿನಕ್ಕೆ ಮಮತಾ ಬ್ಯಾನರ್ಜಿ ಇದೇ ಕಾಪಿ ಮಾಡಿದ್ದರು. ಪ್ರಚಾರದ ನಡುವೆ ತರಕಾರಿ ಮಾರುಕಟ್ಟೆಗೆ ತೆರಳಿ ತರಕಾರಿ ಖರೀದಿಸಿದ್ದರು. ಆದರೆ ಮಮತಾ ಬ್ಯಾನರ್ಜಿ ಭಾರಿ ಟೀಕೆಗೆ ಗುರಿಯಾಗಿದ್ದರು. ಕಾಪಿ ಮಾಡುವ ಬದಲು ಹೊಸದು ಏನಾದರು ಮಾಡಿ ಎಂದು ಹಲವರು ಸಲಹೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ