
ಢಾಕಾ(ಆ.10): ನಾಲ್ಕು ಹಿಂದೂ ದೇವಾಲಯ ಸೇರಿದಂತೆ ಕೆಲವು ಅಂಗಡಿಗಳು ಮತ್ತು ಮನೆಗಳನ್ನು ದುಷ್ಕರ್ಮಿಗಳು ಬಾಂಗ್ಲಾದೇಶದ ಕಹುಲ್ನಾ ಜಿಲ್ಲೆಯಲ್ಲಿ ನಾಶ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.
ಪಾಕ್ ಹಿಂದೂ ದೇಗುಲ ಧ್ವಂಸ: 50 ಜನ ಅರೆಸ್ಟ್, 150 ಮಂದಿ ಮೇಲೆ ಕೇಸ್
ಶಿಯಾಲಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದೆ. ಮೊದಲಿಗೆ ದುಷ್ಕರ್ಮಿಗಳು ಶಿಯಾಲಿ ಮಹಾಸಂಸ್ಥಾನ ದೇವಾಲಯಕ್ಕೆ ನುಗ್ಗಿ ಅಲ್ಲಿರುವ ವಿಗ್ರಹಗಳನ್ನು ಒಡೆದುಹಾಕಿ ಬೆಂಕಿ ಹಚ್ಚಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ: ವಿಗ್ರಹಗಳು ನುಚ್ಚು ನೂರು!
ನಂತರ ಶಿಯಾಲಿ ಪುರ್‌ಬಪರದಲ್ಲಿರುವ ಹರಿ ದೇವಾಲಯದಲ್ಲಿರುವ ಮೂರ್ತಿಗಳನ್ನು ನಾಶಪಡಿಸಿದ್ದಾರೆ. ಸುಮಾರು ನಾಲ್ಕು ದೇವಸ್ಥಾನಗಳಿಂದ 10 ಮೂರ್ತಿಗಳನ್ನು ದುಷ್ಕರ್ಮಿಗಳು ನಾಶಗೊಳಿಸಿದ್ದಾರೆ. ಸ್ಥಳೀಯ ಆಡಳಿತ ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ