Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!

By BK Ashwin  |  First Published Feb 12, 2023, 1:16 PM IST

ಭೂಕಂಪದ ಐದು ದಿನಗಳ ನಂತರ ರಕ್ಷಿಸಲ್ಪಟ್ಟವರಲ್ಲಿ 2 ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಮತ್ತು 70 ವರ್ಷದ ಮಹಿಳೆ ಸೇರಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ. ಸೋಮವಾರದ 7.8 ತೀವ್ರತೆಯ ಟರ್ಕಿ ಮತ್ತು ಸಿರಿಯಾದಾದ್ಯಂತ ಸಂಭವಿಸಿರುವ ಈ ಭೂಕಂಪ, ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ.


ಇಸ್ತಾನ್‌ಬುಲ್‌ (ಫೆಬ್ರವರಿ 12, 2023):  ಟರ್ಕಿ ಹಾಗೂ ಸಿರಿಯಾದಲ್ಲಿ ಕಳೆದ ವಾರ ಭೀಕರ ಭೂಕಂಪ ಸಂಭವಿಸಿದ್ದು, ಈವರೆಗೆ ಅಧಿಕೃತವಾಗಿ 28 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅದರಲ್ಲೂ, ಸಿರಿಯಾದಲ್ಲಿ ಶುಕ್ರವಾರದಿಂದ ಸಾವಿನ ಸಂಖ್ಯೆಯ ಇತ್ತೀಚಿನ ಮಾಹಿತಿಯನ್ನು ಕೊಟ್ಟಿಲ್ಲ. ಅವಶೇಷಗಳಡಿ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ಇನ್ನು, ಪವಾಡ ಸದೃಶವೆಂಬಂತೆ ಅವಶೇಷಗಳಡಿ ಸಿಲುಕಿದ್ದರೂ ಕೆಲವರು ಬದುಕಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ಇದೇ ರೀತಿ, 2 ತಿಂಗಳ ಮಗುವೊಂದನ್ನು ಅವಶೇಷಗಳಡಿ ರಕ್ಷಿಸಲಾಗಿದ್ದು, ಮಗು 128 ಗಂಟೆಯಾದರೂ ಬದುಕಿರುವುದು ಪವಾಡವೇ ಸರಿ.

ಹೌದು, ಕಳೆದ ಸೋಮವಾರ 7.8 ತೀವ್ರತೆಯ ಭೂಕಂಪದ ನಂತರ ಟರ್ಕಿ ತತ್ತರಿಸಿದೆ. ಸುಮಾರು 25 ಸಾವಿರ ಸಾವಿನ ಸಂಖ್ಯೆ, 6,000 ಕ್ಕೂ ಹೆಚ್ಚು ಕಟ್ಟಡಗಳ ಕುಸಿತ, ಹಲವು ಬಾರಿ ಭೂಕಂಪಗಳು ಸಂಭವಿಸಿದೆ. ಇಡೀ ಊರಿಗೆ ಊರೇ ಸ್ಮಶಾನದಂತಾಗಿದೆ. ಆದರೆ ವಿನಾಶ ಮತ್ತು ಹತಾಶೆಯ ಮಧ್ಯೆ, ಬದುಕುಳಿದಿರುವ ಅದ್ಭುತ ಕಥೆಗಳು ಹೊರಹೊಮ್ಮತ್ತಿದೆ.

Tap to resize

Latest Videos

ಇದನ್ನು ಓದಿ: Turkey Earthquake 104 ಗಂಟೆ ಬಳಿಕ ಮಹಿಳೆ ರಕ್ಷಣೆ, ಆಸ್ಪತ್ರೆ ದಾಖಲಿಸಿದ ಮರುದಿನ ನಿಧನ!

ಎರಡು ತಿಂಗಳ ಮಗುವನ್ನು ನಿನ್ನೆ ಟರ್ಕಿಯ ಹಟೇಯಲ್ಲಿ ಅವಶೇಷಗಳಡಿಯಿಂದ ರಕ್ಷಿಸಲಾಗಿದ್ದು, ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಏಕೆಂದರೆ, ಭೀಕರ ಭೂಕಂಪ ಸಂಭವಿಸಿ ಸುಮಾರು 128 ಗಂಟೆಗಳ ನಂತರವೂ ಮಗು ಜೀವಂತವಾಗಿ ಪತ್ತೆಯಾಗಿದೆ. ಹೆಪ್ಪುಗಟ್ಟುವ ಹವಾಮಾನದ ಹೊರತಾಗಿಯೂ ಸಾವಿರಾರು ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿ ಸಿಲುಕಿರಬಹುದಾದ ಜನರಿಗಾಗಿ ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ. ಇದು ಸಹಾಯದ ಹತಾಶ ಅಗತ್ಯವಿರುವ ಲಕ್ಷಾಂತರ ಜನರ ದುಃಖವನ್ನು ಹೆಚ್ಚಿಸಿದೆ.

ಭೂಕಂಪದ ಐದು ದಿನಗಳ ನಂತರ ರಕ್ಷಿಸಲ್ಪಟ್ಟವರಲ್ಲಿ 2 ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಮತ್ತು 70 ವರ್ಷದ ಮಹಿಳೆ ಸೇರಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ. ಸೋಮವಾರದ 7.8 ತೀವ್ರತೆಯ ಟರ್ಕಿ ಮತ್ತು ಸಿರಿಯಾದಾದ್ಯಂತ ಸಂಭವಿಸಿರುವ ಈ ಭೂಕಂಪ, ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ. ಭೀಕರ ಭೂಕಂಪ ಸಂಭವಿಸಿದ ನಂತರ ಮತ್ತೆ ಹಲವು ಬಾರಿ ಭೂಮಿ ನಡುಗುತ್ತಲೇ ಇದ್ದು, ಬದುಕುಳಿದಿರುವ ಜನರನ್ನು ಮತ್ತೆ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. 2003 ರಲ್ಲಿ ನೆರೆಯ ಇರಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 31,000 ಜನರು ಮೃತಪಟ್ಟಿದ್ದು, ಕಳೆದ ವಾರದ ಈ ಭೂಕಂಪ ಇದನ್ನು ಸಮೀಪಿಸುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

ಇದನ್ನೂ ಓದಿ: ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

ಟರ್ಕಿಯಲ್ಲಿ ಇದುವರೆಗೆ 24,617 ಜನರು ಸಾವಿಗೀಡಾಗಿದ್ದಾರೆಂದು ಘೋಷಣೆಯಾಗಿದ್ದು, ಇದು 1939 ರಿಂದ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವಾಗಿದೆ. ಇನ್ನೊಂದೆಡೆ, ಸಿರಿಯಾದಲ್ಲಿ 3,500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಶುಕ್ರವಾರದಿಂದ ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎನ್ನಲಾಗಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. 

ಇನ್ನೊಂದೆಡೆ, ಗುರುವಾರ ರಾತ್ರಿ ಟರ್ಕಿಯ ರಕ್ಷಣಾ ಸಿಬ್ಬಂದಿಗಳು ಭೂಕಂಪದ ಕೇಂದ್ರಬಿಂದುವಾದ ದಕ್ಷಿಣ ಗಾಜಿಯಾಟೆಂಪ್‌ ಪ್ರಾಂತ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ನ ಕಟ್ಟಡದ ಕೆಳಗಿನಿಂದ 17 ವರ್ಷದ ಯುವಕನನ್ನು ಜೀವಂತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಭೂಕಂಪ ಸಂಭವಿಸಿದ 94 ಗಂಟೆಗಳ ಬಳಿಕ ಯುವಕನ್ನು ಹೊರತೆಗೆಯಲಾಗಿದೆ. ಇಷ್ಟು ಸಮಯದ ಕಾಲ ಆಹಾರವಿಲ್ಲದೆ, ಆತ ಬದುಕಿದ್ದ ಬಗ್ಗೆಯೇ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆತ, ತನ್ನದೇ ಮೂತ್ರ ಕುಡಿದು ಇಷ್ಟು ದಿನಗಳ ಕಾಲ ಜೀವಂತವಾಗಿದ್ದೆ ಎಂದು ಯುವಕ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಟರ್ಕಿ, ಸಿರಿಯಾ ಭೂಕಂಪಕ್ಕೆ ಮೃತರ ಸಂಖ್ಯೆ 11500ಕ್ಕೇರಿಕೆ; 2 ಡಜನ್‌ ದೇಶಗಳಿಂದ ರಕ್ಷಣಾ ಕಾರ್ಯಾಚರಣೆ

click me!