ಟರ್ಕಿಯಲ್ಲಿ 300 ಕಿ.ಮಿ.ಉದ್ದದ ಬಿರುಕು: ಸಿರಿಯಾದಲ್ಲಿ 53 ಲಕ್ಷ ಜನ ನಿರಾಶ್ರಿತ

Published : Feb 12, 2023, 07:49 AM IST
ಟರ್ಕಿಯಲ್ಲಿ 300 ಕಿ.ಮಿ.ಉದ್ದದ ಬಿರುಕು:  ಸಿರಿಯಾದಲ್ಲಿ 53 ಲಕ್ಷ ಜನ ನಿರಾಶ್ರಿತ

ಸಾರಾಂಶ

ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರವಾದ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಶನಿವಾರ ಒಟ್ಟು ಸಾವಿನ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ.

ಇಸ್ತಾಂಬುಲ್‌: ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರವಾದ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಶನಿವಾರ ಒಟ್ಟು ಸಾವಿನ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 21,848 ಮಂದಿ ಬಲಿಯಾಗಿದ್ದು, ಸಿರಿಯಾದಲ್ಲಿ 3,553 ಜನ ಮೃತಪಟ್ಟಿದ್ದಾರೆ.

ಟರ್ಕಿಯಲ್ಲಿ 80 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಉಭಯ ದೇಶಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಕುಸಿದಿರಬಹುದು ಎಂದು ಅಂದಾಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸಿರಿಯಾದಲ್ಲಿ(Syria) ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಹೇಳಿದೆ. ಉಭಯ ದೇಶಗಳಲ್ಲಿ ಪರಿಸ್ಥಿತಿ ಕೈ ಮೀರಿದ್ದು, ನಿರಾಶ್ರಿತರ ನಿರ್ವಹಣೆ ಸವಾಲಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.  ಟರ್ಕಿಯಲ್ಲಿ(Turkey) ರಕ್ಷಣಾ ಕಾರ್ಯಾಚರಣೆಗೆ ಭಾರತ ಸೇರಿದಂತೆ ಹಲವು ದೇಶಗಳು ಸಹಾಯಹಸ್ತ ಚಾಚಿದ್ದು, ಅಮೆರಿಕ ಸಹ 14 ವೈದ್ಯಕೀಯ ವಾಹನಗಳನ್ನು ಟರ್ಕಿಗೆ ರವಾನಿಸಿದೆ.

Turkey Earthquake 104 ಗಂಟೆ ಬಳಿಕ ಮಹಿಳೆ ರಕ್ಷಣೆ, ಆಸ್ಪತ್ರೆ ದಾಖಲಿಸಿದ ಮರುದಿನ ನಿಧನ!

300 ಕಿ.ಮಿ.ಉದ್ದದ ಬಿರುಕು

ಅಂಕಾರ: ಭೀಕರ ಭೂಕಂಪದ ಪರಿಣಾಮ ಟರ್ಕಿ ಮತ್ತು ಸಿರಿಯಾದಲ್ಲಿ ಭೂಮಿ 300 ಕಿಲೋಮೀಟರ್‌ ಉದ್ದಕ್ಕೆ ಬಿರುಕು ಬಿಟ್ಟಿರುವ ಮಾಹಿತಿಯನ್ನು ಬ್ರಿಟನ್‌ ಮೂಲದ ಕೋಮೆಟ್‌ ಎಂಬ ಸಂಸ್ಥೆ ಕಳೆಹಾಕಿದೆ. ಕಳೆದ ಸೋಮವಾರ ಸಂಭವಿಸಿದ 7.9 ತೀವ್ರತೆಯ ಅವಳಿ ಭೂಕಂಪದಿಂದ ಭೂಮಿಯಲ್ಲಿ ಬಿರುಕು ಕಂಡಿದೆ ಎಂದು ಉಪಗ್ರಹ ಚಿತ್ರಗಳನ್ನು ಆಧರಿಸಿ ಮಾಹಿತಿ ನೀಡಿದೆ. ಈ ಚಿತ್ರವನ್ನು ಕೋಮೆಟ್‌ ಭೂಕಂಪ ಪೂರ್ವ ಹಾಗೂ ಭೂಕಂಪ ನಂತರದ ಚಿತ್ರಗಳನ್ನು ಹೋಲಿಸಿ ಫಲಿತಾಂಶ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಕೋಮೆಟ್‌ ಮುಖ್ಯಸ್ಥ ಟಿಮ್‌ ರೈಟ್‌, ‘ದೊಡ್ಡ ಭೂಕಂಪವಾಗುವುದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಈ ರೀತಿಯ ಭೂಮಿ ಸೀಳುವಿಕೆಯು ನಾವು ಸಾಮಾನ್ಯವಾಗಿ ಕಾಣಲಾಗುವುದಿಲ್ಲ. ಈ ರೀತಿಯ ಭೂಕಂಪಗಳು ತುಂಬಾ ಅಪರೂಪವಾಗಿರುತ್ತದೆ’ ಎಂದು ಹೇಳಿದರು.

ಸಿರಿಯಾದಲ್ಲಿ 53 ಲಕ್ಷ ಜನ ನಿರಾಶ್ರಿತ

ಬೈರೂತ್‌: ಭೀಕರ ಭೂಕಂಪದ ಪರಿಣಾಮ ಈಗಾಗಲೇ ಆಂತರಿಕ ಸಂಘರ್ಷದಿಂದ ನಲುಗಿರುವ ಸಿರಿಯಾದಲ್ಲಿ ಸುಮಾರು 53 ಲಕ್ಷ ಜನ ನಿರಾಶ್ರಿತರಾಗಿರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿನ ನಿರಾಶ್ರಿತರ ಹೈ ಕಮಿಷನ್‌ನ ಸಿರಿಯಾದ ಪ್ರತಿನಿಧಿ ಸಿವಾಂಕಾ ಧನಪಲ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈಗಾಗಲೇ ಭಾರಿ ಸ್ಥಳಾಂತರ ಪ್ರಕ್ರಿಯೆಗಳಿಂದ ತೊಂದರೆಗೆ ಸಿಲುಕಿರುವ ಸಿರಿಯಾದಲ್ಲಿ 53 ಲಕ್ಷದಷ್ಟುಜನ ನಿರಾಶ್ರಿತರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Turkey Earthquake ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನೀಯರ್ ಶವವಾಗಿ ಪತ್ತೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ