
ಮಿಚಿಗನ್(ಏ.19) ಹಲವು ಏರಿಳಿತದ ಬದುಕು ಸಾಗಿಸುತ್ತಿದ್ದ 59ರ ಹರೆಯದ ಮಹಿಳೆ ತನ್ನ ಭವಿಷ್ಯ ತಿಳಿದುಕೊಳ್ಳಲು ನಿರ್ಧರಿಸಿದ್ದಾಳೆ. ಇದಕ್ಕಾಗಿ ಜ್ಯೋತಿಷಿ ಬಳಿ ತೆರಳಿದ್ದಾಳೆ. ಜ್ಯೋತಿಷಿ ಕೆಲ ಕಾರ್ಡ್ ತೆಗೆದು, ದಿನಾಂಕ, ಸಮಯಗಳನ್ನು ಲೆಕ್ಕ ಹಾಕಿ ಭವಿಷ್ಯ ನುಡಿದಿದ್ದಾರೆ. ಯಾವುದೇ ಚಿಂತೆ ಬೇಡ, ಕೈತುಂಬ ಹಣ ನಿಮ್ಮನ್ನು ಅರಸಿಕೊಂಡು ಬರಲಿದೆ ಎಂದಿದ್ದಾರೆ. ಜ್ಯೋತಿಷಿ ಮಾತುಗಳಿಂದ ಮನಸ್ಸಿಗೆ ಕೊಂಚ ಸಮಾಧಾನ ಪಟ್ಟುಕೊಂಡ ಮಹಿಳೆ ಮನೆಗೆ ಹಿಂತಿರುಗಿದ್ದಾಳೆ. ರಾತ್ರಿ ವೇಳೆ ತಾನು ಖರೀದಿಸಿದ್ದ ಲಾಟರಿ ಸ್ಕ್ರಾಚ್ ಮಾಡಿದಾಗ ಅಚ್ಚರಿ ಕಾದಿತ್ತು. ಜ್ಯೋತಿಷಿ ಮಾತಿನಂತೆ ಹಣ ಮಹಿಳೆಯನ್ನು ಹುಡುಕಿಕೊಂಡು ಬಂದಿತ್ತು. ಬರೋಬ್ಬರಿ 4 ಕೋಟಿ ರೂಪಾಯಿ ಬಹುಮಾನ ಮೊತ್ತ ಮಹಿಳೆಯದ್ದಾಗಿತ್ತು. ಲಾಟರಿ ಜಾಕ್‌ಪಾಟ್ ಮೂಲಕ ಶ್ರೀಮಂತವಾದ ಮಹಿಳೆ ಅಮೆರಿಕದ ಮಿಚಿಗನ್ ಮೂಲದ ಮಹಿಳೆ.
ಲಾಟರಿ ಖರೀದಿಸುವುದು ಈಕೆಯ ಹವ್ಯಾಸವಾಗಿತ್ತು. ತಿಂಗಳಲ್ಲಿ ಎರಡು ಲಾಟರಿ, ಹೆಚ್ಚೆಂದರೆ ನಾಲ್ಕು ಲಾಟರಿಗಳನ್ನು ಈಕೆ ಖರೀದಿಸುತ್ತಿದ್ದಳು. ಇದುವರೆಗೂ ಒಂದೇ ಒಂದು ಬಹುಮಾನ ಬಂದಿರಲಿಲ್ಲ. ಇತ್ತ ಕಾರು ಕಂತು, ಮನೆ ನಿರ್ವಹಣೆ ಸೇರಿದಂತೆ ಏರಿಳಿತದ ಬದುಕು ಸಾಗಿಸುತ್ತಿದ್ದ ಮಹಿಳೆ, ಮಿಚಿಗನ್‌ನಲ್ಲಿ ಹೆಚ್ಚು ಪ್ರಸಿದ್ದಿಯಾಗಿರುವ ಕಾರ್ಡ್ ರೀಡಿಂಗ್ ಜ್ಯೋತಿಷ್ಯ ಕೇಳಲು ನಿರ್ಧರಿಸಿದ್ದಾಳೆ.
ತಪ್ಪಿ ಲಾಟರಿ ಬಟನ್ ಒತ್ತಿದ ಮಹಿಳೆಗೆ ಜಾಕ್‌ಪಾಟ್, ಬರೋಬ್ಬರಿ 8 ಕೋಟಿ ರೂ ಬಹುಮಾನ!
ಬೆಳಗ್ಗೆ ಕಾರಿನ ಮೂಲಕ ಕಾರ್ಡ್ ರೀಡಿಂಗ್ ಮೂಲಕ ಜ್ಯೋತಿಷಿ ಹೇಳುವ ವ್ಯಕ್ತಿಯ ಬಳಿ ತೆರಳಿದ್ದಾರೆ. ದಾರಿ ಮಧ್ಯೆ ಕಾರು ನಿಲ್ಲಿಸಿ ಹೇಗೋ ಇನ್ನು ಸಮಯವಿದೆ, ಹೀಗಾಗಿ ಲಾಟರಿ ಖರೀದಿಸಿ ಹೋಗೋಣ ಎಂದು ಲಾಟರಿ ಖರೀದಿಸಿದ್ದಾರೆ. ಎಂದಿನಂತೆ ಲಾಟರಿ ಖರೀದಿಸಿ ಪರ್ಸ್‌ನಲ್ಲಿಟ್ಟ ಮಹಿಳೆ ಬಲಿಕ ಜ್ಯೋತಿಷಿ ಭೇಟಿಯಾಗಿದ್ದಾರೆ.
ಮಹಿಳೆಯ ನೋಡಿದ ಜ್ಯೋತಿಷಿ ಕೆಲ ಮಾಹಿತಿ ಕೇಳಿದ್ದಾರೆ. ಬಳಿಕ ಕಣ್ಮುಚ್ಚಿ ಕಾರ್ಡ್ ತೆಗೆದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತಲೆಯಲ್ಲಿರುವ ಚಿಂತೆ ಎಲ್ಲಾ ಬಿಟ್ಟುಬಿಡಿ, ನಿಮಗೆ ದೊಡ್ಡ ಮೊತ್ತ ಬರಲಿದೆ. ಅತೀ ಶೀಘ್ರದಲ್ಲೇ ನಿಮ್ಮನ್ನು ಅರಸಿಕೊಂಡು ಹಣ ಬರಲಿದೆ ಎಂದಿದ್ದಾರೆ. ಜ್ಯೋತಿಷಿ ಮಾತುಗಳನ್ನು ಕೇಳಿದ ಮಹಿಳೆಗೆ ತಾನು ಲಾಟರಿ ಖರೀದಿಸಿದ್ದೇನೆ. ಈ ಮೂಲಕ ಹಣ ಕೈಸೇರವು ಸಾಧ್ಯತೆ ಕುರಿತು ಯೋಚನೆ ಮಾಡಿಲ್ಲ . ಕಾರಣ ಲಾಟರಿ ಈ ಮಹಿಳೆಗೆ ಹೊಸದಲ್ಲ. ಇದುವರೆಗೆ ಒಂದು ರೂಪಾಯಿ ಗೆದ್ದಿರಲಿಲ್ಲ. ಹೀಗಾಗಿ ಜ್ಯೋತಿಷಿ ಹೇಳಿದ ಮಾತುಗಳು ನಿಜವಾಗುತ್ತೋ ಅನ್ನೋ ಅನುಮಾನವು ಕಾಡತೊಡಗಿತ್ತು. ಆದರೂ ಈ ಮಾತಿನಂತೆ ಆಗಲಿ ಎಂದು ಆಶಿಸುತ್ತಾ ಮಹಿಳೆ ಮನೆಗೆ ಮರಳಿದ್ದಾರೆ.
2,800 ಕೋಟಿ ರೂ ಲಾಟರಿ ಜಾಕ್‌ಪಾಟ್, ಮೊತ್ತ ಸ್ವೀಕರಿಸಲು ಹೋದ ವ್ಯಕ್ತಿಗೆ ಶಾಕ್ ಕೊಟ್ಟ ಕಂಪನಿ!
ರಾತ್ರಿ ವೇಳೆ ಪರ್ಸ್ ತೆಗೆದಾಗ ಲಾಟರಿ ನೋಡಿ ಸ್ಕ್ರಾಚ್ ಮಾಡಲು ಮುಂದಾಗಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಹುಮಾನದ ನಿರೀಕ್ಷೆಗಳೇನು ಇಲ್ಲದೆ ಲಾಟರಿ ನಂಬರ್ ಪರೀಕ್ಷಿಸಲು ಸ್ಕ್ರಾಚ್ ಮಾಡಿದ್ದಾರೆ. ಈ ವೇಳೆ ಅಚ್ಚರಿಯಾಗಿದೆ. ಕಾರಣ ಈಕೆಗೆ $500,000 (ಅಮೆರಿಕನ್ ಡಾಲರ್) ಮೊತ್ತ ಲಾಟರಿ ಮೂಲಕ ಜಾಕ್‌ಪಪಾಟ್ ಹೊಡೆದಿದೆ. ಭಾರತೀಯ ರೂಪಾಯಿಗಳಲ್ಲಿ 4,18,25000 ರೂಪಾಯಿ. ಇದೀಗ ಈ ಮಹಿಳೆಯ ಸಂತಸಕ್ಕೆ ಪಾರವೇ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ